ಸಾರಾಂಶ
ಕಳಸ: ಕಳೆದ ಎರಡು ದಶಕದ ಹಿಂದೆ ಕಟ್ಟಿರುವ ತೂಗು ಸೇತುವೆ ಹಲವೆಡೆ ಹಾಳಾಗಿದ್ದು ಸ್ಥಳೀಯರು ಆತಂಕದಲ್ಲಿಯೇ ಪ್ರತಿ ದಿನ ಓಡಾಡುತ್ತಿದ್ದಾರೆ.
ಕಳಸ: ಕಳೆದ ಎರಡು ದಶಕದ ಹಿಂದೆ ಕಟ್ಟಿರುವ ತೂಗು ಸೇತುವೆ ಹಲವೆಡೆ ಹಾಳಾಗಿದ್ದು ಸ್ಥಳೀಯರು ಆತಂಕದಲ್ಲಿಯೇ ಪ್ರತಿ ದಿನ ಓಡಾಡುತ್ತಿದ್ದಾರೆ.
ಈ ಸೇತುವೆ ಇರೋದು ಕಳಸ ತಾಲೂಕು ಕೇಂದ್ರದಿಂದ ನಾಲ್ಕು ಕಿ.ಮೀ. ದೂರದಲ್ಲಿರುವ ಕಲ್ಲುಗೋಡು ಗ್ರಾಮದಲ್ಲಿ ಕಲ್ಲುಗೋಡು, ಕರಿಮನೆ ಗ್ರಾಮದವರು ಕಳಸಕ್ಕೆ ಬರಬೇಕಾದರೆ ಈ ತೂಗು ಸೇತುವೆ ಮೇಲೆಯೇ ಬರಬೇಕು. ಈ ಸೇತುವೆ ಮೇಲೆ ಪ್ರತಿದಿನ ಶಾಲಾ ಮಕ್ಕಳು, ಗ್ರಾಮಸ್ಥರು ಓಡಾಡುತ್ತಿದ್ದಾರೆ. ಆದರೆ, ಈ ಸೇತುವೆಗೆ ತುಕ್ಕು ಹಿಡಿದಿದ್ದು ಹಲವೆಡೆ ಹಾಳಾಗಿದೆ. ಅದ್ದರಿಂದ ಸ್ಥಳೀಯರಲ್ಲಿ ಆತಂಕ ಎದುರಾಗಿದೆ.ಇಲ್ಲಿ ಹಾದು ಹೋಗಿರುವ ಭದ್ರಾ ನದಿಗೆ ತೂಗು ಸೇತುವೆ ನಿರ್ಮಾಣ ಮಾಡಲಾಗಿದ್ದು, ಈ ಸೇತುವೆ ಹಾಳಾಗಿದೆ. ಇದಕ್ಕೆ ಹೊಂದಿಕೊಂಡಿರುವ ರಸ್ತೆಯೂ ಕೂಡ ಮಳೆಗಾಲದಲ್ಲಿ ಕೆಸರುಮಯವಾಗಿದೆ. ಹಾಗಾಗಿ ಸ್ಥಳೀಯರು ರಸ್ತೆ ದುರಸ್ತಿ ಜತೆಗೆ, ತೂಗು ಸೇತುವೆ ದುರಸ್ತಿಗೊಳಿಸಬೇಕೆಂದು ಆಗ್ರಹಿಸಿದ್ದಾರೆ. 12 ಕೆಸಿಕೆಎಂ 6ಕಳಸ ತಾಲೂಕಿನ ಕಲ್ಲುಗೋಡು ತೂಗು ಸೇತುವೆ ಮೇಲೆ ಓಡಾಡುತ್ತಿರುವ ಶಾಲಾ ಮಕ್ಕಳು.