ಭಾರತದ ಮೇರು ಕಲಾವಿದೆಯಾಗಿದ್ದ ಎಸ್. ಜಾನಕಿ ಕೆಲವೇ ವರ್ಷಗಳಿಗೆ ಸಂದ ಗಾಯಕಿಯಾಗಿರದೆ ಮನ ಸೆಳೆಯುವ ಹಾಡುಗಳ ಮೂಲಕ ಸಾರ್ವಕಾಲಿಕವಾಗಿ ಸಲ್ಲುವ ನಾಡಿನ ಹೆಮ್ಮೆಯ ಗಾಯಕಿಯಾಗಿದ್ದರು.

ಮಡಿಕೇರಿ: ಭಾರತದ ಮೇರು ಕಲಾವಿದೆಯಾಗಿದ್ದ ಎಸ್. ಜಾನಕಿ ಕೆಲವೇ ವರ್ಷಗಳಿಗೆ ಸಂದ ಗಾಯಕಿಯಾಗಿರದೆ ಮನ ಸೆಳೆಯುವ ಹಾಡುಗಳ ಮೂಲಕ ಸಾರ್ವಕಾಲಿಕವಾಗಿ ಸಲ್ಲುವ ನಾಡಿನ ಹೆಮ್ಮೆಯ ಗಾಯಕಿಯಾಗಿದ್ದರು. ಎಸ್. ಜಾನಕಿ ದೈಹಿಕವಾಗಿ ಕಣ್ಮರೆಯಾಗಿದ್ದರೂ ಕಲಾವಿದರ ಹಾಡುಗಳಲ್ಲಿ ಅವರು ಸದಾ ಜೀವಂತವಾಗಿರುತ್ತಾರೆ ಎಂದು ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ. ಹೇಳಿದರು.

ನಗರದ ಲಯನ್ಸ್ ಸಭಾಂಗಣದಲ್ಲಿ ಸಮರ್ಥ ಕನ್ನಡಿಗರು ಸಂಸ್ಥೆ ವತಿಯಿಂದ ಮಡಿಕೇರಿ ಲಯನ್ಸ್ ಸಂಸ್ಥೆ ಸಹಯೋಗದಲ್ಲಿ ಆಯೋಜಿತ ಎಸ್. ಜಾನಕಿ ಗಾನ ನಮನ ಹಾಗೂ ಹಿಮವನ ಪ್ರತಿಭಾ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, 66 ವರ್ಷಗಳ ಸುದೀರ್ಘ ಕಾಲ ತನ್ನ ಹಾಡುಗಳ ಮಾಧುರ್ಯ ಮೂಲಕ ಕಲಾ ಸೇವೆಯಲ್ಲಿ ತೊಡಗಿದ್ದು ಸಾಮಾನ್ಯ ಸಾಧನೆಯಲ್ಲ. ಸಂಗೀತ ಎಂಬುದು ಎಸ್. ಜಾನಕಿ ಅವರಿಗೆ ದೇವರು ಕೊಟ್ಟ ವರವಾಗಿತ್ತು ಎಂದರು. ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ಮಾತನಾಡಿ, ಅಣ್ವಸ್ತ್ರಗಳಿಗಿಂತ ನಮ್ಮಲ್ಲಿರುವ ಧ್ವನಿ ಮಾತುಗಳೇ ಪ್ರಬಲವಾದ ಅಸ್ತ್ರವಾಗಿದೆ. ಇದನ್ನು ಅಗತ್ಯವಿದ್ದಲ್ಲಿ ಸೂಕ್ತ ರೀತಿಯಲ್ಲಿ ಬಳಸಿಕೊಂಡಾಗ ಯಾವುದೇ ಗುರಿ ಸಾಧಿಸಬಹುದಾಗಿದೆ ಎಂದರು.ಮ್ತಡಿಕೇರಿ ಲಯನ್ಸ್ ಟ್ರಸ್ಟ್ ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ ಮಾತನಾಡಿ, 8 ವರ್ಷಗಳಿಂದ ಪ್ರತಿಭಾವಂತರನ್ನು ಬೆಳಕಿಗೆ ತರುವ ಉದ್ದೇಶದಿಂದ ಸಮರ್ಥ ಕನ್ನಡಿಗರು ಸಂಸ್ಥೆ ಗಮನಾರ್ಹ ಕಾರ್ಯಕ್ರಮಗಳನ್ನು ರೂಪಿಸುತ್ತಿರುವುದು ಮಾದರಿಯಾಗಿದೆ ಎಂದರು.

ಮಡಿಕೇರಿ ಏಲಕ್ಕಿ ಮಾರಾಟಗಾರರ ಸಂಘದ ನಿರ್ದೇಶಕಿ ಮೂಟೇರ ಪುಪ್ಪಾವತಿ ರಮೇಶ್, ಸಮರ್ಥ ಕನ್ನಡಿಗರು ಸಂಸ್ಥೆಯ ಸಂಚಾಲಕಿ ಕೆ. ಜಯಲಕ್ಷ್ಮಿ ಮಾತನಾಡಿದರು.ಮಡಿಕೇರಿಯ ಪ್ರಜ್ಷ ಕಲಾ ತಂಡ ಪ್ರಾರ್ಥಿಸಿ, ಸೌಮ್ಯ ಸಂತೋಷ್ ಭಟ್ ನಿರೂಪಿಸಿ, ಪವಿತ್ರಾ ಸಂತೋಷ್ ವಂದಿಸಿದರು. ಅನಿತಾ ಧನಂಜಯ್, ಅಂಬಿಕಾ ವಿ. ನಿರ್ವಹಿಸಿದರು. ಮಡಿಕೇರಿ ಲಯನ್ಸ್ ಕ್ಲಬ್ ಅಧ್ಯಕ್ಷ ಮೋಹನ್ ಕುಮಾರ್ ಇದ್ದರು.