ಸಾರಾಂಶ
ಲಯನ್ಸ್ ಸಂಸ್ಥೆ ಕಳೆದ 5 ದಶಕಗಳಿಂದ ಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರವಾಗಿದೆ. ನನ್ನ ಅಧಿಕಾರವಧಿಯಲ್ಲಿ ಲಯನ್ಸ್ ಸಂಸ್ಥೆಯ ಘನತೆಯನ್ನು ಇನ್ನಷ್ಟು ಹೆಚ್ಚಿಸುವ ಸೇವಾಕಾರ್ಯಕ್ರಮಗಳನ್ನು ರೂಪಿಸುತ್ತೇನೆ.
ಕನ್ನಡಪ್ರಭ ವಾರ್ತೆ ನಂಜನಗೂಡು
ಪಟ್ಟಣದ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಎಸ್.ಮಹದೇವ, ಕಾರ್ಯದರ್ಶಿಯಾಗಿ ಎಚ್.ಜೆ. ವರದನಾಯಕ ಅಧಿಕಾರ ಸ್ವೀಕರಿಸಿದರು.ಬೈಪಾಸ್ ರಸ್ತೆಯ ಮಹದೇಶ್ವರ ಸಭಾಂಗಣದಲ್ಲಿ ನಡೆದ ಲಯನ್ಸ್ ಸಂಸ್ಥೆಯ ಪದಗ್ರಹಣ ಸಮಾರಂಭದಲ್ಲಿ ಲಯನ್ಸ್ ಸಂಸ್ಥೆಯ ಜಿಲ್ಲಾ ರಾಜ್ಯಪಾಲ ಡಾ.ಪಿ.ಆರ್.ಎಸ್. ಚೇತನ್ ಅವರು ಪದಗ್ರಹಣ ಸಮಾರಂಭದಲ್ಲಿ ನಿರ್ಗಮಿತ ಅಧ್ಯಕ್ಷ ಗೋಪಾಲಕೃಷ್ಣ ಅವರಿಂದ ನೂತನ ಅಧ್ಯಕ್ಷರಿಗೆ ಪದಕ ವಿತರಿಸುವ ಮೂಲಕ ಅಧ್ಯಕ್ಷರಾಗಿ ಆಯ್ಕೆಗೊಳಿಸಿದರು.
ನೂತನ ಅಧ್ಯಕ್ಷ ಎಸ್. ಮಹದೇವ ಮಾತನಾಡಿ, ಲಯನ್ಸ್ ಸಂಸ್ಥೆ ಕಳೆದ 5 ದಶಕಗಳಿಂದ ಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರವಾಗಿದೆ. ನನ್ನ ಅಧಿಕಾರವಧಿಯಲ್ಲಿ ಲಯನ್ಸ್ ಸಂಸ್ಥೆಯ ಘನತೆಯನ್ನು ಇನ್ನಷ್ಟು ಹೆಚ್ಚಿಸುವ ಸೇವಾಕಾರ್ಯಕ್ರಮಗಳನ್ನು ರೂಪಿಸುತ್ತೇನೆ. ಮುಖ್ಯವಾಗಿ ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸುವ ಜೊತೆಗೆ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವ ಕಾರ್ಯಕ್ರಮ ರೂಪಿಸುತ್ತೇನೆ ಎಂದರು.ಜೊತೆಗೆ ಆರೋಗ್ಯ ಅರಿವು, ಆರೋಗ್ಯ ಶಿಬಿರ ಆಯೋಜನೆ, ಕ್ಯಾನ್ಸರ್ ಜಾಗೃತಿ ಮೂಡಿಸುವ ಕಾರ್ಯಕ್ರಮ ರೂಪಿಸುವ ಧ್ಯೇಯವನ್ನು ಹೊಂದಿದ್ದೇನೆ. ಅಲ್ಲದೆ ಮುಖ್ಯವಾಗಿ ಹಸಿವು ಮುಕ್ತ ಸಮಾಜ ನಿರ್ಮಾಣವಾಗಿಸಲು ನನ್ನ ಶಕ್ತಿ ಮೀರಿ ದುಡಿಯುತ್ತೇನೆ. ಪ್ರಮುಖವಾಗಿ ಪರಿಸರ ಸಂರಕ್ಷಣೆ, ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.
ಜಿಲ್ಲಾ ರಾಜ್ಯಪಾಲ ಪಿ.ಆರ್.ಎಸ್. ಚೇತನ್ ಮಾತನಾಡಿ, ಸಾಮಾನ್ಯ ಕುಟುಂಬದಿಂದ ಬಂದ ನನ್ನಂತವರಿಗೆ ಜನರ ಸೇವೆ ಮಾಡಲು ಅವಕಾಶ ಕಲ್ಪಿಸಿದೆ. ಲಯನ್ಸ್ ಕ್ಲಬ್ ನಾಯಕತ್ವ ಗುಣ ಬೆಳೆಸುತ್ತದೆ. ಪ್ರಪಂಚದಾದ್ಯಂತ ಲಯನ್ಸ್ ಮಾಡಿರುವ ಸೇವೆಯನ್ನು ಯಾವುದೇ ಸರ್ಕಾರ ಮಾಡಲು ಸಾಧ್ಯವಿಲ್ಲ. ರಕ್ತನಿಧಿ, ಆರೋಗ್ಯ ಶಿಬಿರ, ಕಣ್ಣಿನ ಶಸ್ತ್ರ ಚಿಕಿತ್ಸೆ, ಅಂಗವಿಕಲರ ಸೇವೆಯಲ್ಲಿ ಸಂಸ್ಥೆ ಮುಂದಿದೆ. ಲಯನ್ಸ್ ಕ್ಲಬ್ 53 ವರ್ಷಗಳ ಭವ್ಯ ಇತಿಹಾಸ ಹೊಂದಿದೆ. ಸಮಾಜಕ್ಕೆ ನೀವು ನೀಡಿದ ಸೇವೆ, ನಿಮ್ಮ ಬದುಕಿನಲ್ಲಿ ಬೇರೆ ರೂಪದಲ್ಲಿ ಪಡೆದುಕೊಳ್ಳುತ್ತೀರಿ, ನಿಮ್ಮ ಮಾತೃ ಭಾಷೆ ಯಾವುದೇ ಆಗಿರಲಿ ಮಕ್ಕಳಿಗೆ ಕನ್ನಡ ಕಲಿಸಿ ಮಕ್ಕಳಿಗೆ ಕನ್ನಡ ಪುಸ್ತಕ ಉಡುಗೊರೆಗಳನ್ನು ನೀಡಿ ಎಂದ ಅವರು ನಿಮ್ಮ ಸೇವಾ ಕಾರ್ಯಗಳ ಮೂಲಕ ಬಡ ಜನರಿಗೆ ಉತ್ತಮ ಸೇವೆ ಒದಗಿಸಿ ಎಂದು ಕಿವಿಮಾತು ಹೇಳಿದರು.ಡಾ. ಸುನಂದಾ, ಜಯದೇವ ಆಸ್ಪತ್ರೆಯ ಡಾ.ಪಿ. ಕುಮಾರ್, ಡಾ.ಸೃಜನ್ ಅವರನ್ನು ಸನ್ಮಾನಿಸಲಾಯಿತು. ಅಂಗವಿಕಲರಿಗೆ ವ್ಹೀಲ್ ಚೇರ್ ಉಡುಗೊರೆ ನೀಡಲಾಯಿತು.
ಗೋಪಾಲಕೃಷ್ಣ, ಜಿ. ಮಹೇಶ್, ಬಸವರಾಜು, ಎನ್.ಎಂ. ಮಂಜುನಾಥ್, ಎನ್. ಜಯರಾಮು, ಎನ್,ಆರ್. ಕೃಷ್ಣಪ್ಪಗೌಡ, ಎನ್. ಉಮೇಶ್, ಎಸ್. ನಾಗರಾಜು, ಎಚ್.ಎಸ್. ರಾಜು, ಎನ್. ಶ್ರೀನಿವಾಸ್, ನಂಜುಂಡಸ್ವಾಮಿ (ಅಂಬಿ), ಮಧುಸೂಧನ್, ವಿಜಯ್‌ಕುಮಾರ್, ತಮ್ಮಣ್ಣೇಗೌಡ ಮೊದಲಾದವರು ಇದ್ದರು.