ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುವೀರಶೈವ ಲಿಂಗಾಯತ ಸಮಾಜದ ಸಮಗ್ರ ಏಳಿಗೆಗೆ ಡಾ.ಎಸ್.ಪರಮೇಶ್‌ರಂತಹ ಪ್ರಜ್ಞಾವಂತರು ಅಖಿಲ ಭಾರತ ಲಿಂಗಾಯತ ವೀರಶೈವ ಮಹಾಸಭಾದ ತುಮಕೂರು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುವುದು ಸೂಕ್ತ ಎಂದು ಸಿದ್ಧಗಂಗಾ ಮಠದ ಕಾರ್ಯದರ್ಶಿ ಟಿ.ಕೆ.ನಂಜುಂಡಪ್ಪ ಅಭಿಪ್ರಾಯಪಟ್ಟರು.ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತುಮಕೂರು ಜಿಲ್ಲಾ ಘಟಕದಲ್ಲಿ ಮಹಾಸಭಾದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಡಾಕ್ಟರ್ ಪರಮೇಶ್ ರವರು ವೀರಶೈವ ಲಿಂಗಾಯಿತ ಸಮಾಜದ ಎಲ್ಲಾ ಪಂಗಡಗಳ ಏಳಿಗೆಗೆ ಶ್ರಮಿಸುತ್ತಾರೆಂದು ಮಹಾಸಭಾದ ಶಿವಕುಮಾರ್ ತಿಳಿಸಿದರು.ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಹಿನ್ನಲೆಯಲ್ಲಿ ನಗರದ ಸ್ನೇಹಸಂಗಮ ಸಭಾಂಗಣದಲ್ಲಿ ನಡೆದ ವೀರಶೈವ ಲಿಂಗಾಯತರ ಸಮುದಾಯದ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮುಖಂಡರಾದ ಕೋರಿ ಮಂಜಣ್ಣ ಮಾತನಾಡಿ, ರಾಜ್ಯದೆಲ್ಲಡೆ ವೀರಶೈವ ಲಿಂಗಾಯತರು ಒಗ್ಗೂಡಬೇಕಿದೆ. ಸಮಾಜದ ಸಮಸ್ಯೆಗಳನ್ನು ಜನಪ್ರತಿನಿಧಿಗಳಿಗೆ ತಲುಪಿಸಲು ಹಾಗೂ ಸಮಗ್ರ ಏಳಿಗೆಗೆ ಶ್ರಮಿಸಲು ಡಾ.ಎಸ್.ಪರಮೇಶ್ ಸಮರ್ಥ ಅಭ್ಯರ್ಥಿಯಾಗಿದ್ದು. ಜುಲೈ 21 ರಂದು ನಡೆಯಲಿರುವ ಚುನಾವಣೆಯಲ್ಲಿ ನೊಂದಾಯಿತ ಎಲ್ಲಾ ವೀರಶೈವ ಲಿಂಗಾಯತ ಸಮಾಜದವರು ಒಕ್ಕೊಲರ ಅಭ್ಯರ್ಥಿಯಾಗಿ ಗೆಲ್ಲಿಸಬೇಕು ಹಾಗೂ ಮಹಾಸಭಾದಲ್ಲಿ ಚುನಾವಣೆಯ ಕುರಿತು ಗೊಂದಲ ಮೂಡುವ ಸನ್ನಿವೇಶ ಎದುರಾಗಿತ್ತು, ನಿಯಮದ ಪ್ರಕಾರ ಚುನಾವಣೆ ನಡೆಯಲೇಬೇಕಿದ್ದು, ಆಯ್ಕೆಯಾದವರು ಐದು ರ್ಷದಗಳ ಕಾಲ ಸಮಾಜದ ಸಂಘಟನೆ ಮಾಡಲಿದ್ದಾರೆ ಯಾವುದೇ ಗೊಂದಲಗಳಿಲ್ಲದೆ ಸಮಾಜದ ಎಲ್ಲಾ ಬಂಧುಗಳು ಡಾ.ಎಸ್.ಪರಮೇಶ್‌ರವರನ್ನು ಆಯ್ಕೆ ಮಾಡಬೇಕು ಎಂದರು.
ಡಾ.ಎಸ್.ಪರಮೇಶ್ ಮಾತನಾಡಿ, ಸಮಾಜದ ಸಮಗ್ರ ಏಳಿಗೆಗೆ ನನ್ನದೇ ಆದ ದೂರದೃಷ್ಠಿಯಿಟ್ಟುಕೊಂಡು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು, ಸಮಾಜದವರ ಆರೋಗ್ಯ ಕಾಳಜಿಯ ಜೊತೆಗೆ ಆರ್ಥಿಕ, ಔದ್ಯೋಗಿಕ, ಸಾಮಾಜಿಕ ಬೆಳವಣಿಗೆಗೆ ನನ್ನದೇ ಆದ ಅಳಿಲು ಸೇವೆ ಸಲ್ಲಿಸಲು ನನ್ನನೂ ಆಯ್ಕೆ ಮಾಡಬೇಕೆಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಸದಸ್ಯರಿಗಳಿಗೆ ವಿನಂತಿಸಿದರುಸ್ನೇಹ ಸಂಗಮ ಸಹಕಾರ ಸಂಘದ ಅಧ್ಯಕ್ಷ ಮಂಜುನಾಥ ಬಿ ಎಸ್ ಬಾವಿಕಟ್ಟೆ, ತುಮಕೂರು ವೀರಶೈವ ಸಹಕಾರ ಬ್ಯಾಂಕಿನ ಅಧ್ಯಕ್ಷ ಕೆ ಜೆ ರುದ್ರಪ್ಪ, ತುಮಕೂರು ಬಸವೇಶ್ವರ ಕ್ರೆಡಿಟ್ ಸೊಸೈಟಿಯ ಉಪಾಧ್ಯಕ್ಷ ಎಂಎನ್ ಲೋಕೇಶ್, ತುಮಕೂರು ಟಿಡಿಸಿಸಿ ಅಧ್ಯಕ್ಷ ಟಿ ಜೆ ಗಿರೀಶ್, ಸಮಾಜದ ಹಿರಿಯ ಮುಖಂಡರಾದ ಶಿವಪ್ರಕಾಶ್, ದಿಬ್ಬೂರು ಯೋಗೀಶ್, ಸಿದ್ಧಲಿಂಗಪ್ಪ, ಸಾಗರನಹಳ್ಳಿ ಪ್ರಭು ಸೇರಿದ ಎಲ್ಲಾ ಸಮಾಜದ ಬಾಂಧವರು ಉತ್ತರದಿಂದ ಡಾಕ್ಟರ್ ಪರಮೇಶ್ವರ್ ಅವರನ್ನು ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಜಯಶೀಲರನ್ನಾಗಿ ಮಾಡಲು ಒಕ್ಕೊರಲಿನಿಂದ ಬೆಂಬಲ ಸೂಚಿಸಿದರು.ಇದೇ ಸಂದರ್ಭದಲ್ಲಿ ವೀರಶೈವ ಲಿಂಗಾಯಿತ ಸಮಾಜದ ರಾಜ್ಯ ಮಟ್ಟದ ಕಾಯಕ ರತ್ನ ಪ್ರಶಸ್ತಿ ಪಡೆದ ಎಸ್ ರೇಣುಕಾಪ್ರಸಾದ್ ಅವರಿಗೆ ಡಾ ಎಸ್ ಪರಮೇಶ್ ಹಾಗೂ ಸ್ನೇಹಸಂಗಮ ಸಹಕಾರ ಸಂಘದ ವತಿಯಿಂದ ಸನ್ಮಾನಿಸಲಾಯಿತು