ಎಸ್.ಆರ್.ಲಕ್ಷ್ಮಯ್ಯ ಬಡಾವಣೆ ನಿವೇಶನ ಸಮಸ್ಯೆ ಶೀಘ್ರ ಅಂತ್ಯ:ಶಾಸಕ ಕೆ.ಎಸ್.ಆನಂದ್

| Published : Sep 02 2025, 01:00 AM IST

ಎಸ್.ಆರ್.ಲಕ್ಷ್ಮಯ್ಯ ಬಡಾವಣೆ ನಿವೇಶನ ಸಮಸ್ಯೆ ಶೀಘ್ರ ಅಂತ್ಯ:ಶಾಸಕ ಕೆ.ಎಸ್.ಆನಂದ್
Share this Article
  • FB
  • TW
  • Linkdin
  • Email

ಸಾರಾಂಶ

ಬೀರೂರುಕಳೆದ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಎಸ್.ಆರ್.ಲಕ್ಷ್ಮಯ್ಯ ಆಶ್ರಯ ಬಡಾವಣೆ ನಿವೇಶನ ಹಂಚಿಕೆ ಸಮಸ್ಯೆಗೆ ಆಶ್ರಯ ಕಮಿಟಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಸ್.ಆನಂದ್‌ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿವೇಶನ ರಹಿತರಿಗೆ ಸರ್ಕಾರದಿಂದಲೇ ಜಿ 2 ಮನೆ ನಿರ್ಮಾಣ ಮಾಡಿ ಹಂಚಲು ತಿರ್ಮಾನಿಸಲಾಯಿತು.

- ಪುರಸಭೆ ಸಭಾಂಗಣದಲ್ಲಿ ನಡೆದ ಆಶ್ರಯ ಸಮಿತಿ ಸಭೆ: ಜಿ+2 ಮನೆ ನಿರ್ಮಾಣಕ್ಕೆ ತೀರ್ಮಾನ

ಕನ್ನಡಪ್ರಭ ವಾರ್ತೆ, ಬೀರೂರುಕಳೆದ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಎಸ್.ಆರ್.ಲಕ್ಷ್ಮಯ್ಯ ಆಶ್ರಯ ಬಡಾವಣೆ ನಿವೇಶನ ಹಂಚಿಕೆ ಸಮಸ್ಯೆಗೆ ಆಶ್ರಯ ಕಮಿಟಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಸ್.ಆನಂದ್‌ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿವೇಶನ ರಹಿತರಿಗೆ ಸರ್ಕಾರದಿಂದಲೇ ಜಿ+2 ಮನೆ ನಿರ್ಮಾಣ ಮಾಡಿ ಹಂಚಲು ತಿರ್ಮಾನಿಸಲಾಯಿತು.

ಸೋಮವಾರ ಪುರಸಭೆ ಸಭಾಂಗಣದಲ್ಲಿ ನಡೆದ ಆಶ್ರಯ ಕಮಿಟಿ ಸಭೆಯಲ್ಲಿ ಮಾತನಾಡಿದ ಶಾಸಕ ಕೆ.ಎಸ್.ಆನಂದ್‌ ಈ ಹಿಂದೆ ಶಾಸಕರಾಗಿದ್ದ ದಿ.ಎಸ್.ಎಲ್.ಧರ್ಮೇಗೌಡ ತನ್ನ ತಂದೆ ಮಾಜಿ ಶಾಸಕ ಎಸ್.ಆರ್.ಲಕ್ಷ್ಮಯ್ಯ ಅವರ ಹೆಸರಿನಲ್ಲಿ ನಿವೇಶನ ರಹಿತ ಬಡವರಿಗೆ ಸೂರು ನೀಡುವ ಉದ್ದೇಶದಿಂದ ರಾ.ಹೆ. ಪಕ್ಕ 15 ಎಕರೆ ಜಾಗ ಖರೀದಿಸಿ 92ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಿದ್ದರು.

ನಂತರದ ದಿನಗಳಲ್ಲಿ ಕೆಲವರು ಹೂಡಿದ್ದ ದಾವೆ ಸಹ ಇತ್ಯರ್ಥವಾಗಿ ಬೈಪಾಸ್ ರಸ್ತೆ ನಿರ್ಮಾಣ ಸಂದರ್ಭದಲ್ಲಿ ಈ ಬಡಾವಣೆ ಮಧ್ಯದಲ್ಲಿ ಹಾದು ಹೋದ ಪರಿಣಾಮ 5 ಎಕರೆ ಭೂಮಿ ಹೋಯಿತು. ಸದ್ಯ ಉಳಿದಿರುವ 9 ಎಕರೆ 3 ಗುಂಟೆಯಲ್ಲಿ ಬಡಾವಣೆ ಮುಂಭಾಗದಲ್ಲಿ ಸರ್ಕಾರಿ ಕಟ್ಟಡಕ್ಕೆ 1ಎಕರೆ ಮೀಸಲಿರಿಸಿ ನಿವೇಶನ ರಹಿತರನ್ನು ಗುರುತಿಸಿ ಶೀಘ್ರ ಸರ್ಕಾರದಿಂದ ಜಿ+2 ಮನೆ ನಿರ್ಮಾಣ ಮಾಡಿ ಅರ್ಜಿ ಸಲ್ಲಿಸಿರುವ 1200 ಜನ ನಿವೇಶನ ರಹಿತರಿಗೆ ಮನೆ ನೀಡಲಾಗುವುದು ಎಂದರು.

ಸಮಿತಿ ಸದಸ್ಯ ಬಿ.ಟಿ.ಚಂದ್ರಶೇಖರ್ ಮಾತನಾಡಿ, ಪಟ್ಟಣ ವ್ಯಾಪ್ತಿಯ 23 ವಾರ್ಡಗಳಲ್ಲಿ ಖಾಸಗಿಯವರ ಪಾಲಾಗಿದ್ದ ಪುರಸಭೆ ನೀವೇಶನಗಳನ್ನು ತೆರವುಗೊಳಿಸಿ ಪುರಸಭೆ ಸ್ವತ್ತು ಎಂದು ನಾಮಫಲಕ ಹಾಕಿದ್ದು, ಸರಸ್ವತಿಪುರಂ ಬಡಾವಣೆಯಲ್ಲಿ ಕೊಳಚೆ ನಿರ್ಮೂಲನ ಮಂಡಳಿಯಿಂದ 50ಕ್ಕೂ ಹೆಚ್ಚು ಮನೆ ನಿರ್ಮಾಣವಾಗಿದೆ. ಈವರೆಗೂ ಆ ನಿವಾಸಿಗಳಿಗೆ ಹಕ್ಕುಪತ್ರ ನೀಡಿಲ್ಲ. ಬೀರೂರು ಪಟ್ಟಣದ ಕೆಲವು ವಾರ್ಡ ಗಳು ಮಾತ್ರ ಗ್ರಾಮ ಠಾಣೆಗೆ ಸೇರಿವೆ ಉಳಿದವುಗಳನ್ನು ಸೇರಿಸಲು ಗ್ರಾಮ ಠಾಣಾ ವ್ಯಾಪ್ತಿ ವಿಸ್ತರಿಸುವಂತೆ ಕೋರಿದರು.ಇದಕ್ಕೆ ಉತ್ತರಿಸಿದ ಶಾಸಕ ಆನಂದ್, ಪುರಸಭೆ ಅಧಿಕಾರಿಗಳು ಹೊರಗುತ್ತಿಗೆ ನೌಕರರನ್ನು ನೇಮಿಸಿ ಪುರಸಭೆ ನಿವೇಶನವನ್ನು ಯಾರೇ ಅತಿಕ್ರಮ ಮಾಡಿದರು ಅದನ್ನು ಪೊಲೀಸರ ಸಹಕಾರದಲ್ಲಿ ಖಾಲಿ ಮಾಡಿಸಿ ನಾಮಫಲಕ ಹಾಕುವಂತೆ ಸೂಚಿಸಿದರು. ಕೊಳಚೆ ನಿರ್ಮೂಲನ ಮಂಡಳಿ ವಸತಿ ಗೃಹದ ಅಧಿಕಾರಿಗಳೊಂದಿಗೆ ಮಾತನಾಡಿ, ಸ್ಥಳಕ್ಕೆ ಭೇಟಿ ನೀಡಿ ಕಾನೂನಿನಂತೆ ಮುಂದಿನ ಸಭೆಯಲ್ಲಿ ಹಕ್ಕು ಪತ್ರ ವಿತರಿಸಲು ಸಹಕರಿಸಿ ಎಂದರು.ಸದಸ್ಯ ಮುಬಾರಕ್ ಮಾತನಾಡಿ, ಪಟ್ಟಣ ವ್ಯಾಪ್ತಿಯ ಪುರಸಭೆ ನಿವೇಶನದಲ್ಲಿ ಕೆಲವರು ಅನುಭೋಗ ಹೊಂದಿದ್ದವರಿಗೆ ಹಕ್ಕು ಪತ್ರ ಮತ್ತು ಖಾತೆ ಮಾಡಿಲ್ಲ. ಬೇರೆಡೆ ಎಲ್ಲಾ ಕಡೆಗಳಲ್ಲಿ ಈ ರೀತಿ ಸ್ವಾದೀನ ದಲ್ಲಿದ್ದವರಿಗೆ ಖಾತೆ ಮಾಡಿಕೊಡಲಾಗಿದೆ. ಬೀರೂರು ಪುರಸಭೆಯಲ್ಲಿ ಮಾತ್ರ ಆಗಿಲ್ಲ. ಇದರಿಂದ ಪುರಸಭೆಗೆ ಆದಾಯ ನಷ್ಠವಾಗುತ್ತಿದ್ದು ಶಾಸಕರು ಈ ಬಗ್ಗೆ ಗಮನ ಹರಿಸಬೇಕು. ಆಶ್ರಯ ಕಮಿಟಿಗೆ ಪುರಸಭೆಯಲ್ಲಿ ಕಚೇರಿ ನೀಡುವಂತೆ ಒತ್ತಾಯಿಸಿದರು. ಶಾಸಕರು ಉತ್ತಿರಿಸಿ, ಪುರಸಭೆ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಎಲ್ಲಾ ವಾರ್ಡ ಗಳಿಗೆ ಭೇಟಿ ನೀಡಿ ಅಂತವರನ್ನು ಗುರುತಿಸಿ, ಅರ್ಜಿಗಳನ್ನು ಪರಿಶೀಲಿಸಿ ಕಾನೂನು ಬದ್ದವಾಗಿದ್ದರೆ ಹಕ್ಕುಪತ್ರ ವಿತರಣೆ ಮಾಡಿ, ಸಬ್ ರಿಜಿಸ್ಟರ್ ಕಚೇರಿಯಲ್ಲಿ ನಮೂದಿಸಿ, ಪ್ರಾಪರ್ಟಿ ಕಾರ್ಡ ನೀಡಬಹುದು ಎಂದರು.ಗ್ರಾಮ ಠಾಣಾ ಸಮಸ್ಯೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು, ಬರುವ ವರ್ಷಗಳಲ್ಲಿ ಎಂಜಿಯರ್ ಗಳು ಮಾಸ್ಟರ್ ಪ್ಲಾನ್ ಮಾಡಿ ಪಟ್ಟಣವನ್ನು ವಿಸ್ತರಿಸಿದರೆ ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದರು.ಭಾಗವತ್ ನಗರದ ಪಕ್ಕದ ರೈತರಿಂದ 3ಎಕರೆ ಜಾಗವನ್ನು ಮುಂದಿನಗಳಲ್ಲಿ ಅವರ ಮನವೊಲಿಸಿ ಖರೀದಿಸದರೆ ಅದರಲ್ಲಿ ಆಶ್ರಯ ಬಡಾವಣೆ ಮಾಡಿ ನಿವೇಶನ ರಹಿತರಿಗೆ ಹಂಚಲಾಗುವುದು ಎಂದರು.ಹಿರಿಯಂಗಳದಲ್ಲಿ ನವಗ್ರಾಮ ನಿರ್ಮಾಣ ಯೋಜನೆಯಡಿ 20- 30ಎಕರೆ ಜಮೀನಿನಲ್ಲಿ ಈ ಹಿಂದೆ ನಿವೇಶನ ಹಂಚಿಕೆ ಮಾಡಲಾಗಿತ್ತು. ಕೆಲವು ಕಾರಣಾಂತರಗಳಿಂದ ಫಲಾನುಭವಿಗಳು ಅಲ್ಲಿ ಮನೆ ಕಟ್ಟಿಲ್ಲ. ಪರಿಶೀಲಿಸಿ ಜನರಿಗೆ ನ್ಯಾಯ ಒದಗಿಸಲಿದೆ ಎಂದರು.ಪುರಸಭೆ ಅಧ್ಯಕ್ಷೆ ಭಾಗ್ಯಲಕ್ಷ್ಮಿಮೋಹನ್, ತಹಸೀಲ್ದಾರ್ ಸಿ.ಎಸ್.ಪೂರ್ಣಿಮ, ಮುಖ್ಯಾಧಿಕಾರಿ ಜಿ.ಪ್ರಕಾಶ್, ಜಿಲ್ಲಾ ನಗರ ಯೋಜನೆ ಅಭಿವೃದ್ಧಿ ಅಧಿಕಾರಿ ಜಾನಕಿ, ಎಂಜಿನಿಯರ್ ವೀಣಾ, ಆಶ್ರಯ ಸಮಿತಿ ಸದಸ್ಯ ಉಮೇಶ್, ಪುಸಸಭೆ ಸಿಬ್ಬಂದಿ ದೀಪಕ್, ಲಕ್ಷ್ಮಣ್ ಸೇರಿದಂತೆ ಮತ್ತಿತರಿದ್ದರು.1 ಬೀರೂರು 02ಬೀರೂರು ಪುರಸಭೆ ಸಭಾಂಗಣದಲ್ಲಿ ಶಾಸಕ ಮತ್ತು ಪುರಸಭೆ ಆಶ್ರಯ ಕಮಿಟಿ ಅಧ್ಯಕ್ಷ ಕೆ.ಎಸ್.ಆನಂದ್ ಅಧ್ಯಕ್ಷತೆಯಲ್ಲಿ ಆಶ್ರಯ ಸಮಿತಿ ಸಭೆ ನಡೆಯಿತು. ಪುರಸಭೆ ಅಧ್ಯಕ್ಷೆ ಭಾಗ್ಯಲಕ್ಷ್ಮಿಮೋಹನ್, ತಹಸೀಲ್ದಾರ್ ಸಿ.ಎಸ್.ಪೂರ್ಣಿಮ, ಮುಖ್ಯಾಧಿಕಾರಿ ಜಿ.ಪ್ರಕಾಶ್ ಮತ್ತಿತರಿದ್ದರು.