ಎಸ್. ಸೋಮಣ್ಣ, ವೆಂಕಟಾಚಲಗೆ ನುಡಿ ನಮನ ಸಲ್ಲಿಕೆ

| Published : Jul 07 2024, 01:23 AM IST

ಸಾರಾಂಶ

ನಗರಪಾಲಿಕೆ ಮಾಜಿ ಸದಸ್ಯ ವೆಂಕಟಾಚಲ ಅವರಿಗೆ ಅಖಿಲ ಕರ್ನಾಟಕ ಒಕ್ಕಲಿಗರ ಮಹಾಸಭಾ ಹಾಗೂ ಪಡುವಾರಹಳ್ಳಿಯ ಸ್ನೇಹ ಬಳಗದ ವತಿಯಿಂದ ಪಡುವಾರಹಳ್ಳಿಯಲ್ಲಿ ನುಡಿ ನಮನ

ಕನ್ನಡಪ್ರಭ ವಾರ್ತೆ ಮೈಸೂರು

ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷರಾಗಿದ್ದ ಇದ್ದಿಲು ಅಂಗಡಿ ಎಸ್. ಸೋಮಣ್ಣ ಅವರ ಹಾಗೂ ನಗರಪಾಲಿಕೆ ಮಾಜಿ ಸದಸ್ಯ ವೆಂಕಟಾಚಲ ಅವರಿಗೆ ಅಖಿಲ ಕರ್ನಾಟಕ ಒಕ್ಕಲಿಗರ ಮಹಾಸಭಾ ಹಾಗೂ ಪಡುವಾರಹಳ್ಳಿಯ ಸ್ನೇಹ ಬಳಗದ ವತಿಯಿಂದ ಪಡುವಾರಹಳ್ಳಿಯಲ್ಲಿ ನುಡಿ ನಮನ ಸಲ್ಲಿಸಲಾಯಿತು.

ಮಹಾಸಭಾದ ಅಧ್ಯಕ್ಷ ಎನ್. ಬೆಟ್ಟೇಗೌಡ, ಗ್ರಾಮಾಭ್ಯುದಯ ಸಂಘದ ಅಧ್ಯಕ್ಷ ಎಂ. ಮಹದೇವಸ್ವಾಮಿ, ಜನಹಿತ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಎಂ. ಭೈರಪ್ಪ, ದಿ ಸಿಟಿ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಎಂ.ಎನ್. ಸ್ವರೂಪ್, ಅಖಿಲ ಕರ್ನಾಟಕ ಒಕ್ಕಲಿಗ ಮಹಾಸಭಾದ ಸಂಸ್ಥಾಪಕ ಅಧ್ಯಕ್ಷ ಎನ್. ಬೆಟ್ಟೇಗೌಡ, ಸೋಮಣ್ಣ ಅವರ ಪುತ್ರಿ ಎಸ್. ಶಿಲ್ಪ, ವಕೀಲೆ ಕಲ್ಪನ, ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ಪಡುವಾರಹಳ್ಳಿ ಎಂ. ರಾಮಕೃಷ್ಣ, ರಾಮಣ್ಣ ತಿಮ್ಮಯ್ಯ, ರಾಮಸ್ವಾಮಿ, ಲೋಕೇಶ್ವರ, ರಾಮಚಂದ್ರು, ನಗರಪಾಲಿಕೆ ಮಾಜಿ ಸದಸ್ಯ ಎಂ. ಚಿಕ್ಕವೆಂಕಟು, ಜಯರಾಂ,

ಸಿ.ಡಿ. ಕುಮಾರ್, ಕಿಟ್ಟಿ, ವೇಣು, ಪ್ರಸನ್ನ, ದಾಸನ ಕೊಪ್ಪಲ್, ಮಹೇಶ್ ಭಾಗವಹಿಸಿದ್ದರು.