4ನೇ ಪ್ರಯತ್ನದಲ್ಲಿ ಐಎಎಸ್‌ ಉತ್ತೀರ್ಣರಾದ ಕೋಡಿಯಾಲ ಹೊಸಪೇಟೆ ಗ್ರಾಮದ ಸಚಿನ ಗುತ್ತೂರು

| Published : Apr 23 2025, 12:31 AM IST

4ನೇ ಪ್ರಯತ್ನದಲ್ಲಿ ಐಎಎಸ್‌ ಉತ್ತೀರ್ಣರಾದ ಕೋಡಿಯಾಲ ಹೊಸಪೇಟೆ ಗ್ರಾಮದ ಸಚಿನ ಗುತ್ತೂರು
Share this Article
  • FB
  • TW
  • Linkdin
  • Email

ಸಾರಾಂಶ

ಇವರು ಒಂದನೇ ತರಗತಿಯಿಂದ ಹತ್ತನೇ ತರಗತಿವರೆಗೆ ಹರಿಹರದ ಎಂಕೆಇಟಿ (ಸಿಬಿಎಸ್‌ಇ) ಸ್ಕೂಲಿನಲ್ಲಿ ವ್ಯಾಸಂಗ ಮಾಡಿದ್ದರು. ಪಿಯುಸಿಯನ್ನು ದಾವಣಗೆರೆಯ ವೈಷ್ಣವಿ ಚೇತನ ಕಾಲೇಜಿನಲ್ಲಿ ಮುಗಿಸಿದ್ದಾರೆ.

ರಾಣಿಬೆನ್ನೂರು: ದೇಶದ ಅತ್ಯುನ್ನತ ನಾಗರಿಕ ಆಡಳಿತ ಸೇವಾ (ಯುಪಿಎಸ್‌ಸಿ) ಪರೀಕ್ಷೆಯಲ್ಲಿ ತಾಲೂಕಿನ ಯುವಕರೊಬ್ಬರು 41ನೇ ರ‍್ಯಾಂಕ್ ಪಡೆದಿದ್ದು ಐಎಎಸ್‌ ಅಧಿಕಾರಿ ಆಗಲಿದ್ದಾರೆ.ತಾಲೂಕಿನ ಕೋಡಿಯಾಲ ಹೊಸಪೇಟೆ ಗ್ರಾಮದ ಯುವಕ ಡಾ. ಸಚಿನ್ ಬಸವರಾಜ ಗುತ್ತೂರು ಅವರು ನಾಗರಿಕ ಸೇವಾ ಪರೀಕ್ಷೆ ಪಾಸ್ ಮಾಡುವ ಮೂಲಕ ರಾಣಿಬೆನ್ನೂರು ತಾಲೂಕಿಗೆ ಹೆಸರು ತಂದಿದ್ದಾರೆ.ಇವರು ಒಂದನೇ ತರಗತಿಯಿಂದ ಹತ್ತನೇ ತರಗತಿವರೆಗೆ ಹರಿಹರದ ಎಂಕೆಇಟಿ (ಸಿಬಿಎಸ್‌ಇ) ಸ್ಕೂಲಿನಲ್ಲಿ ವ್ಯಾಸಂಗ ಮಾಡಿದ್ದರು. ಪಿಯುಸಿಯನ್ನು ದಾವಣಗೆರೆಯ ವೈಷ್ಣವಿ ಚೇತನ ಕಾಲೇಜಿನಲ್ಲಿ ಮುಗಿಸಿದ್ದಾರೆ. ಸಿಇಟಿಯಲ್ಲಿ ರಾಜ್ಯಕ್ಕೆ 321ನೇ ರ‍್ಯಾಂಕ್ ಗಳಿಸಿ ದಾವಣಗೆರೆ ಜೆಜೆಎಂ ಮೆಡಿಕಲ್ ಕಾಲೇಜಿನಲ್ಲಿ ಉಚಿತ ಸೀಟು ಪಡೆದಿದ್ದರು. 2019- 20ನೇ ಸಾಲಿನಲ್ಲಿ ಎಂಬಿಬಿಎಸ್ ಪದವಿ ಗಳಿಸಿದ ನಂತರ ದೆಹಲಿಯಲ್ಲಿ ಐಎಎಸ್ ಕೋಚಿಂಗ್ ಪಡೆದಿದ್ದು ಇದೀಗ ನಾಲ್ಕನೇ ಪ್ರಯತ್ನದಲ್ಲಿ ಉತ್ತೀರ್ಣರಾಗಿದ್ದಾರೆ. ಸಹೋದರ ಎಂಜಿನಿಯರ್: ಸಚಿನ್ ಸಹೋದರ ಕೂಡ ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದಾರೆ. ಇವರು ಸದ್ಯ ತಂದೆ ನಡೆಸುತ್ತಿರುವ ಇಟ್ಟಿಗೆ ಉದ್ದಿಮೆಯಲ್ಲಿ ಕೈಜೋಡಿಸಿದ್ದಾರೆ. ತಂದೆಗೆ ಪಿಎಸ್‌ಐ ಆಸೆ ಇತ್ತು: ಮಗ ಐಎಎಸ್ ಪಾಸ್ ಮಾಡಿದ ಹಿನ್ನೆಲೆಯಲ್ಲಿ ಕನ್ನಡಪ್ರಭದೊಂದಿಗೆ ಮಾತನಾಡಿದ ಸಚಿನ್ ತಂದೆ ಬಸವರಾಜ ಅವರು, ತಮಗೆ ಪಿಎಸ್‌ಐ ಆಗುವ ಆಸೆಯಿದ್ದರೂ ಅದು ಕೈಗೂಡಿರಲಿಲ್ಲ. ಇದೀಗ ಮಗ ಐಎಎಸ್ ಪರೀಕ್ಷೆ ಪಾಸು ಮಾಡಿರುವುದು ಅಪಾರ ಹರ್ಷ ಉಂಟು ಮಾಡಿದೆ ಎಂದರು. ರಾಹುಲ್‌ ಗಾಂಧಿ ದೇಶವನ್ನು ಅವಮಾನಿಸಿಲ್ಲ: ಜಾರಕಿಹೊಳಿ

ಹಾವೇರಿ: ರಾಹುಲ್ ಗಾಂಧಿ ಅವರು ದೇಶದ ಬಗ್ಗೆ ಅಪಮಾನ ಮಾಡಿಲ್ಲ. ಬಿಜೆಪಿಯವರು ಆ ರೀತಿಯಾಗಿ ಬಿಂಬಿಸುತ್ತಾರೆ. ದೇಶದ ಬಗ್ಗೆ ಯಾರೂ ಅಗೌರವ ತೋರುವ ಪ್ರಶ್ನೆ ಬರಲ್ಲ ಎಂದು ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.ಶಿಗ್ಗಾವಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷದಲ್ಲಿ ಭಿನ್ನಾಭಿಪ್ರಾಯ ಇರಬಹುದು. ಆದರೆ ದೇಶದ ವಿಚಾರ ಬಂದಾಗ ನಾವು ದೇಶದ ಪರವಾಗಿ ಇದ್ದೇವೆ ಎಂದರು.ಹಿಂದೂಗಳ ಪಾಲು ಹಿಂದೂಗಳಿಗಿದೆ. ಮುಸ್ಲಿಮರ ಪಾಲು ಮುಸ್ಲಿಮರಿಗಿದೆ. ಒಬಿಸಿ, ಎಸ್‌ಸಿ, ಎಸ್‌ಟಿ ಯವರ ಪಾಲು ಅವರಿಗಿದೆ. ಬಿಜೆಪಿಯವರು ನಮಗೆ ಪಾಠ ಹೇಳುವ ಅವಶ್ಯಕತೆಯಿಲ್ಲ. ಯಾರಿಗೆ ಏನು ಕೊಡಬೇಕು ಅಂತ ಕಾಂಗ್ರೆಸ್‌ಗೆ ಗೊತ್ತಿದೆ ಎಂದರು.ರೋಹಿತ್ ವೇಮುಲ ಕಾಯ್ದೆ ಇನ್ನೂ ಚರ್ಚೆಯಲ್ಲಿದೆ. ಈ ಕುರಿತು ದೇಶದ ಜನರ ಅಭಿಪ್ರಾಯ ಸಂಗ್ರಹ ಮಾಡಬೇಕು. ಕಾಂಗ್ರೆಸ್ ಒಂದೇ ರಾಜ್ಯಕ್ಕೆ ಸೀಮಿತವಾದ ಪಕ್ಷವಲ್ಲ. ಎಲ್ಲರ ಅಭಿಪ್ರಾಯ ಪಡೆದುಕೊಳ್ಳಲು ವಿಳಂಬ ಆಗುತ್ತಿದೆ. ಒಳಮೀಸಲಾತಿ, ಜಾತಿಗಣತಿ, ರೋಹಿತ್ ವೇಮುಲ ಕಾಯ್ದೆ ವಿಚಾರಗಳು ನಮ್ಮ ಕಾಲಾವಧಿಯಲ್ಲಿ ಮುಕ್ತಿ ಕಾಣುತ್ತವೆ ಎಂದರು.ಜನಿವಾರ ವಿವಾದ ಮುಗಿದ ಅಧ್ಯಾಯ. ಅದರ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ. ಯಾರೂ ತಪ್ಪು ಮಾಡಿದ್ದಾರೋ ಅವರ ಮೇಲೆ ಕ್ರಮ ಆಗಿದೆ. ಪಕ್ಷದ ರಾಜ್ಯಾಧ್ಯಕ್ಷರ ಬದಲಾವಣೆ ಪ್ರಶ್ನೆ ಇಲ್ಲ. ಯಾವ ಚರ್ಚೆಯೂ ಆಗಿಲ್ಲ ಎಂದರು.