ಸಾರಾಂಶ
ಸಮಾಜದ ಮಹಿಳಾ ವೃಂದದ ಪೂರ್ಣ ಕುಂಭ ಹಾಗೂ ಸಮಾಜ ಬಾಂಧವರಿಂದ ಭಕ್ತಿ ಪೂರ್ವಕ ಗೌರವದೊಂದಿಗೆ ಅವರನ್ನು ಸ್ವಾಗತಿಸಲಾಯಿತು. ಗುರುಗಳಿಗೆ ಫಲ ಸಮರ್ಪಣೆ ಹಾಗೂ ಪಾದಪೂಜೆ ಸಲ್ಲಿಸಲಾಯಿತು.
ಮಂಗಳೂರು: ಶಿರಾಲಿಯ ಶ್ರೀ ಚಿತ್ರಾಪುರ ಮಠ ಸಂಸ್ಥಾನದ ಮಠಾಧೀಶರಾದ ಶ್ರೀಮದ್ ಸದ್ಯೋಜಾತ್ ಸ್ವಾಮೀಜಿ ಅವರು ವೈಶ್ಯ ಸಮಾಜದ ಡೊಂಗರಕೇರಿ ಶ್ರೀ ವೆಂಕಟರಮಣ ದೇವಳಕ್ಕೆ ಭೇಟಿ ನೀಡಿದರು.
ಸಮಾಜದ ಮಹಿಳಾ ವೃಂದದ ಪೂರ್ಣ ಕುಂಭ ಹಾಗೂ ಸಮಾಜ ಬಾಂಧವರಿಂದ ಭಕ್ತಿ ಪೂರ್ವಕ ಗೌರವದೊಂದಿಗೆ ಅವರನ್ನು ಸ್ವಾಗತಿಸಲಾಯಿತು. ಗುರುಗಳಿಗೆ ಫಲ ಸಮರ್ಪಣೆ ಹಾಗೂ ಪಾದಪೂಜೆ ಸಲ್ಲಿಸಲಾಯಿತು.ಶ್ರೀ ದೇವರ ವಿಜೃಂಭಣೆಯ ಉತ್ಸವಾದಿ ಕಾರ್ಯಗಳು ಹಾಗೂ ಲೌಕಿಕ ಜೀವನದ ಜತೆಗೆ ಸಮಾಜವು ಆಧ್ಯಾತ್ಮಿಕವಾಗಿ ಬೆಳೆಯಬೇಕು. ಆಗ ಮಾತ್ರ ಸಮಾಜ ಸದೃಢವಾಗಲಿದೆ ಎಂದು ಸ್ವಾಮೀಜಿ ಆಶೀರ್ವಾದ ನೀಡಿದರು.
ಆಡಳಿತ ಮೊಕ್ತೇಸರ ಪ್ರವೀಣ್ ಶೇಟ್ ನಾಗ್ವೆಕರ್ ಪ್ರಾಸ್ತವಿಕ ಭಾಷಣ ಮಾಡಿದರು. ಮಾಜಿ ಆಡಳಿತ ಮೊಕ್ತೇಸರ ವರದರಾಯ ಸುಬ್ರಾಯ ನಾಗ್ವೆಕರ್ ಅವರು ದೇವಳದ ಇತಿಹಾಸದ ಕಿರು ಪರಿಚಯ ನೀಡಿದರು. ವಿನೋದ್ ಸದಾಶಿವ ಶೇಟ್ ನಿರೂಪಿಸಿದರು. ದೇವಳದ ತಂತ್ರಿ ವಿದ್ವಾನ್ ಡಾ. ಸತ್ಯಕೃಷ್ಣ ಭಟ್, ಪ್ರಧಾನ ಅರ್ಚಕರಾದ ಜಯರಾಮ ಭಟ್, ನಿರಂಜನ್ ಭಟ್, ಡೊಂಗರಕೇರಿ ಶ್ರೀ ಮಹಾಲಕ್ಷ್ಮಿ ರವಳನಾಥ ದೇವಸ್ಥಾನದ ಆಡಳಿತ ಮೊಕ್ತೇಸರ ಗೋಪಿಚಾಂದ್ ವರದರಾಯ ಶೇಟ್, ಶೇಡಿಗುಡ್ಡೆ ಶ್ರೀ ಲಕ್ಷ್ಮಿ ನಾರಾಯಣಿ ದೇವಸ್ಥಾನದ ಆಡಳಿತ ಮೊಕ್ತೇಸರ ಕೃಷ್ಣ ಗೋಪಾಲ ಶೇಟ್ ಇದ್ದರು.ಫೋಟೊ
13ಟೆಂಪಲ್