ಭವಿಷ್ಯದ ಆರೋಗ್ಯದ ಕಾಳಜಿ ವಹಿಸಿ ಸಾರ್ವಜನಿಕರ ಆರೋಗ್ಯ ರಕ್ಷಣೆಯಲ್ಲಿ ಫಾರ್ಮಾಸಿಸ್ಟ್‌ಗಳ ಪಾತ್ರ ಬಹು ಮುಖ್ಯವಾಗಿದೆ ಎಂದು ಅಖಿಲ ಭಾರತೀಯ ಫಾರ್ಮಾಸಿಸ್ಟ್ ಸಂಘದ ರಾಷ್ಟ್ರೀಯ ಅಧ್ಯಕ್ಷ ಡಾ.ಬಿ.ಎಸ್.ದೇಸಾಯಿ ಹೇಳಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಭವಿಷ್ಯದ ಆರೋಗ್ಯದ ಕಾಳಜಿ ವಹಿಸಿ ಸಾರ್ವಜನಿಕರ ಆರೋಗ್ಯ ರಕ್ಷಣೆಯಲ್ಲಿ ಫಾರ್ಮಾಸಿಸ್ಟ್‌ಗಳ ಪಾತ್ರ ಬಹು ಮುಖ್ಯವಾಗಿದೆ ಎಂದು ಅಖಿಲ ಭಾರತೀಯ ಫಾರ್ಮಾಸಿಸ್ಟ್ ಸಂಘದ (ಎಐಪಿಎ) ರಾಷ್ಟ್ರೀಯ ಅಧ್ಯಕ್ಷ ಡಾ.ಬಿ.ಎಸ್.ದೇಸಾಯಿ ಹೇಳಿದರು.ನಗರದ ಕನಕವೃತ್ತದ ಸಮೀಪದ ಡಿಎಚ್ ಓ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘದಿಂದ ಮಂಗಳವಾರ ಹಮ್ಮಿಕೊಂಡ ವಿಶ್ವ ಫಾರ್ಮಾಸಿಸ್ಟ್ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ವೈದ್ಯರು ರೋಗ ನಿರ್ಣಯ ಮಾಡಿದರೆ ಆ ಚಿಕಿತ್ಸೆಯನ್ನು ಯಶಸ್ವಿಯಾಗಿಸಲು ಫಾರ್ಮಾಸಿಸ್ಟ್‌ಗಳ ಪಾತ್ರ ಮುಖ್ಯವಾಗಿದೆ. ರೋಗಿಗಳಿಗೆ ಔಷಧಿಗಳ ಡೋಸ್ ತೆಗೆದುಕೊಳ್ಳುವ ಬಗ್ಗೆ ತಿಳಿಹೇಳುತ್ತಾರೆ. ರೋಗಿಗಳಿಗೆ ಔಷಧಿಗಳನ್ನು ನೀಡುವ ಫಾರ್ಮಾಸಿಸ್ಟ್ ಗಳು ಔಷಧಿಗಳನ್ನು ನೀಡುವ ಕುರಿತು ಎಚ್ಚರಿಕೆ ವಹಿಸುತ್ತಾರೆ. ಸರ್ಕಾರಿ ಆಸ್ಪತ್ರೆ, ಕಚೇರಿಯಲ್ಲಿ ಕಾರ್ಯ ಮಾಡುವ ಫಾರ್ಮಾಸಿಸ್ಟ್ ಗಳು ತಾಳ್ಮೆಯಿಂದ ಕೆಲಸ ಮಾಡಬೇಕು. ಪ್ರೀತಿ ವಿಶ್ವಾಸದಿಂದ ತಮ್ಮ ಸೇವೆ ಮಾಡಬೇಕಿದೆ.ಇತ್ತೀಚೆಗೆ ಮೇಡಿಕಲ್ ಸರ್ಟಿಫಿಕೇಟ್ ದುರುಪಯೋಗವಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕಿದೆ. ರಾಜ್ಯದಲ್ಲಿ ಔಷಧಿಗಳ ಸಂಗ್ರಹಿಸಲು ಸರಿಯಾದ ಔಷಧ ಉಗ್ರಾಣಗಳ ಅವಶ್ಯಕತೆ ಇದೆ ಎಂದರು.ಡಿಎಚ್ ಓ ಡಾ.ಮಹೇಶ್ ಬಿರಾದಾರ ಮಾತನಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಫಾರ್ಮಾಸಿಸ್ಟ್‌ಗಳು ಔಷಧಿಗಳನ್ನು ರೋಗಿಗಳಿಗೆ ಅರ್ಥವಾಗುವ ರೀತಿಯಲ್ಲಿ ತಿಳಿಹೇಳುತ್ತಾರೆ. ಫಾರ್ಮಾಸಿಸ್ಟ್ ಅಧಿಕಾರಿಗಳು ರೋಗಿಗಳಿಗೆ ಅರಿವು ಮೂಡಿಸುವ ಜತೆಗೆ ಡೋಸ್ ಬಗ್ಗೆ ಅರಿವು ಮೂಡಿಸಿ ರೋಗಿಗಳ ಆರೋಗ್ಯದ ಕಾಳಜಿ ವಹಿಸುತ್ತಾರೆ ಎಂದರು.ಜಿಲ್ಲಾ ನೋಡಲ್ ಅಧಿಕಾರಿ ಡಾ.ಡಿ.ಆರ್.ಶಿವಪ್ಪ ಮಾತನಾಡಿ, ಫಾರ್ಮಾಸಿಸ್ಟ್‌ಗಳ ಜವಾಬ್ದಾರಿ ಪ್ರಮುಖವಾಗಿದೆ. ವೈದ್ಯರು ಬರೆದ ಔಷಧಿಗಳನ್ನು ಸರಿಯಾಗಿ ನೀಡಬೇಕಿದೆ. ಔಷಧಿ ವಿತರಣೆಯಲ್ಲಿ ಯಾವುದೇ ಲೋಪ ಆಗಬಾರದು. ಔಷಧಿಗಳ ಸಂಗ್ರಹದ ಬಗ್ಗೆ ಆನ್ಲೈನ್ ಮಾಹಿತಿಯು ಸರಿಯಾಗಿ ಅಪಡೆಟ್ ಮಾಡಬೇಕಿದೆ. ಔಷಧಿಗಳನ್ನು ಕೊಟ್ಟಿಲ್ಲವೆಂದು ರೋಗಿಗಳು ವಾಪಸ್ ಹೋಗದಂತೆ ಎಚ್ಚರಿಕೆ ವಹಿಸಿ ಅಗತ್ಯ ಔಷಧಿಗಳನ್ನು ತಮ್ಮ ಸಂಸ್ಥೆಯಲ್ಲಿ ಇಟ್ಟುಕೊಳ್ಳಬೇಕು ಎಂದರು.ಜಿಲ್ಲಾ ಸರ್ವೇಕ್ಷಣ ಅಧಿಕಾರಿ ಡಾ.ಮಲ್ಲನಗೌಡ ಎಸ್.ಪಾಟೀಲ , ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘ (ಕೆಎಸ್ ಜಿಪಿಒಎ ) ರಾಜ್ಯಾಧ್ಯಕ್ಷ ಸಂತೋಷ ಕುಸುಮಾ, ಜಿಲ್ಲಾ ಶಸ್ತ್ರ ಚಿಕಿತ್ಸಕರು ಡಾ.ರಿಜ್ವಾನಾ ಆಫ್ರೀನ್, ಡಾ‌.ಮಲ್ಲಪ್ಪ ಕೆ.ನಾಯ್ಕಲ್, ಡಾ.ಪದ್ಮಾನಂದ ಗಾಯಕ್ವಾಡ್, ಡಾ.ರಾಜ ವೆಂಕಪ್ಪ ನಾಯಕ್, ಡಾ.ಹಣಮಂತರೆಡ್ಡಿ ಮದನಿ, ಡಾ.ಸಂಜೀವ್ ಕುಮಾರ ರಾಯಚೂರುಕರ್, ಡಾ.ಎಂ.ಎ.ಸಾಜೀದ್, ಡಾ.ಜ್ಯೋತಿ ಕಟ್ಟಿಮನಿ, ಡಾ.ಎಲ್ಲಪ್ಪ,ಮಲ್ಲನಗೌಡ ಕೌಳೂರು, ರಾಯಪ್ಪಗೌಡ ಹುಡೇದ್, ಅಶೋಕ್ ಕಲಾಲ್, ವಿಜಯಕುಮಾರ್ ಸೌದ್ರಿ, ಅಬ್ದುಲ್ ರಫೀಕ್, ಮಹ್ಮದ್ ಇಲಿಯಾಸ್, ಸುರೇಶ್ ಮೊರಗೇರಿ, ವಿಜಯಕುಮಾರ್ , ಉಮೇಶ್ ಬಾಬು, ಹಾರೂನ್ ರಷೀದ್ , ಸಾಹೇಬಗೌಡ, ಎನ್.ಗಿರೀಶ್ ಸೇರಿದಂತೆ ಇನ್ನಿತರರು ಇದ್ದರು. ಮಲ್ಲಿಕಾರ್ಜುನ ಹುಬ್ಬಳ್ಳಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.