ಹೊಸಳ್ಳಿಯಲ್ಲಿ ಸುರಕ್ಷತಾ ಸಪ್ತಾಹ: ಬೆಂಕಿ ಆರಿಸುವ ಪ್ರಾತ್ಯಕ್ಷಿಕೆ

| Published : Mar 15 2025, 01:01 AM IST

ಹೊಸಳ್ಳಿಯಲ್ಲಿ ಸುರಕ್ಷತಾ ಸಪ್ತಾಹ: ಬೆಂಕಿ ಆರಿಸುವ ಪ್ರಾತ್ಯಕ್ಷಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಅಗ್ನಿಶಾಮಕ ದಳದಿಂದ ಬೆಂಕಿ ಆರಿಸುವ ಪ್ರಾತ್ಯಕ್ಷಿಕೆ ಗುರುವಾರ ನಡೆಯಿತು.

ಯಲ್ಲಾಪುರ: ೫೪ನೇ ರಾಷ್ಟ್ರೀಯ ಸುರಕ್ಷತಾ ಸಪ್ತಾಹ ಅಂಗವಾಗಿ ತಾಲೂಕಿನ ಕಿರವತ್ತಿ ಬಳಿಯ ಹೊಸಳ್ಳಿಯ ದೊಡ್ಲಾ ಡೈರಿಯಲ್ಲಿ ಅಗ್ನಿಶಾಮಕ ದಳದಿಂದ ಬೆಂಕಿ ಆರಿಸುವ ಪ್ರಾತ್ಯಕ್ಷಿಕೆ ಗುರುವಾರ ನಡೆಯಿತು.

ಬೆಂಕಿ ತಗುಲದಂತೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ, ಬೆಂಕಿ ಹೊತ್ತಿಕೊಂಡಾಗ ತೆಗೆದುಕೊಳ್ಳಬೇಕಾದ ಕ್ರಮ, ಮುಂತಾದ ಸುರಕ್ಷತಾ ವಿಷಯಗಳ ಕುರಿತು ಅಗ್ನಿಶಾಮಕ ದಳದ ಸಿಬ್ಬಂದಿ ಮಾಹಿತಿ ನೀಡಿದ್ದಲ್ಲದೇ, ಬೆಂಕಿ ಆರಿಸುವ ಪ್ರಾತ್ಯಕ್ಷಿಕೆಯನ್ನು ಮಾಡಿ ತೋರಿಸಲಾಯಿತು.

ಈ ಸಂದರ್ಭದಲ್ಲಿ ಅಗ್ನಿಶಾಮಕ ದಳದ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಸುಧೀರ್ ಕಿಂದಳ್ಕರ್, ಪ್ರಮುಖ ಅಗ್ನಿಶಾಮಕರಾದ ನಾಗರಾಜ್ ನಾಯಕ್, ಪ್ರಣಯ ಕೋಚರೆಕರ್, ಅಗ್ನಿಶಾಮಕರಾದ ಅಮಿತ ಗುನಗಿ, ಸಲೀಂ ನದಾಪ್, ಅಗ್ನಿಶಾಮಕ ಚಾಲಕ ಕಾರ್ತಿಕ್ ಎಸ್.ಆರ್ ಹಾಗೂ ದೊಡ್ಲಾ ಡೈರಿ ಪ್ಲಾಂಟ್ ಮ್ಯಾನೇಜರ್ ಜಗದೀಶ ಎಂ, ಅಧಿಕಾರಿಗಳಾದ ಪ್ರಕಾಶ ಡಿ., ಸಾಯಿಬಾಬು ವೈ, ಶ್ರೀನಿವಾಸ ರಾವ್, ಇಮ್ರಾನ್ ಕೆ., ಗವಿಸಿದ್ಧಪ್ಪ, ಕುಮಾರ ರಾಜಾ, ವಿನಾಯಕ ಜಿ. ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಹೊಸಳ್ಳಿಯಲ್ಲಿ ರಾಷ್ಟ್ರೀಯ ಸುರಕ್ಷತಾ ಸಪ್ತಾಹ ಹಿನ್ನೆಲೆಯಲ್ಲಿ ಬೆಂಕಿ ಆರಿಸುವ ಪ್ರಾತ್ಯಕ್ಷಿಕೆ ನಡೆಯಿತು.