ಮಠ, ದರ್ಗಾ ದರ್ಶನ ಪಡೆದ ಸಾಗರ ಖಂಡ್ರೆ

| Published : Mar 27 2024, 01:06 AM IST

ಸಾರಾಂಶ

ತಾಲೂಕಿನ ಬೇಲೂರ, ಹುಲಸೂರ, ಬಸವಕಲ್ಯಾಣ, ಹಾರಕೂಡ ಸಂಸ್ಥಾನ ಹಿರೇಮಠಕ್ಕೆ ಕಾಂಗ್ರೆಸ್ ಅಭ್ಯರ್ಥಿ ಸಾಗರ ಖಂಡ್ರೆ ಭೇಟಿ ನೀಡಿ ಪೂಜ್ಯರಿಗೆ ಸನ್ಮಾನಿಸಿ ಅವರಿಂದ ಆಶಿರ್ವಾದ ಪಡೆದರು.

ಬಸವಕಲ್ಯಾಣ/ಭಾಲ್ಕಿ: ತಾಲೂಕಿನ ಬೇಲೂರ, ಹುಲಸೂರ, ಬಸವಕಲ್ಯಾಣ, ಹಾರಕೂಡ ಸಂಸ್ಥಾನ ಹಿರೇಮಠಕ್ಕೆ ಕಾಂಗ್ರೆಸ್ ಅಭ್ಯರ್ಥಿ ಸಾಗರ ಖಂಡ್ರೆ ಭೇಟಿ ನೀಡಿ ಪೂಜ್ಯರಿಗೆ ಸನ್ಮಾನಿಸಿ ಅವರಿಂದ ಆಶಿರ್ವಾದ ಪಡೆದರು.

ಹಾರಕೂಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ಚನ್ನವೀರ ಶಿವಾಚಾರ್ಯರು ಸತ್ಕರಿಸಿ, ಗೌರವಿಸಿದರು. ಸಚಿವ ಈಶ್ವರ ಖಂಡ್ರೆ, ಮುಖಂಡರಾದ ಶಾಂತಪ್ಪ ಪಾಟೀಲ್‌, ಬಾಬು ಹೊನ್ನಾನಾಯಕ ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ರಾಮಪ್ಪ ಗುದಗೆ, ಶರಣು ಅಲಗುಡ, ಶಶಿಕಾಂತ ದುರ್ಗೆ ಮುಂತಾದವರು ಉಪಸ್ಥಿತರಿದ್ದರು.

ಹುಲಸೂರಿನ ಗುರುಬಸವೇಶ್ವರ ಸಂಸ್ಥಾನ ಮಠಕ್ಕೆ ಭೇಟಿ ನೀಡಿ, ಡಾ.ಶಿವಾನಂದ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದರು. ಈ ಸಂಧರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲತಾ ಹಾರಕೂಡೆ ಸೇರಿದಂತೆ ಅನೇಕ ಗ್ರಾಮಸ್ಥರು ಉಪಸ್ಥಿತರಿದ್ದರು.

ಬಸವಕಲ್ಯಾಣದ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಸಂಧರ್ಭದಲ್ಲಿ ಬಸವೇಶ್ವರ ದೇವಸ್ಥಾನ ಟ್ರಸ್ಟ್‌ ಕಮಿಟಿ ಅಧ್ಯಕ್ಷ ಶಶಿಕಾಂತ ದುರ್ಗೆ, ದೇವಸ್ಥಾನ ಸಮಿತಿ ಮಾಜಿ ಅಧ್ಯಕ್ಷ ಅನೀಲ ರಗಟೆ, ತಾಲೂಕು ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ನೀಲಕಂಠ ರಾಠೋಡ, ನಾಗಯ್ಯ ಸ್ವಾಮಿ, ಶಿವಕುಮಾರ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.

ದರ್ಗಾಕ್ಕೆ ಭೇಟಿ: ಬಸವಕಲ್ಯಾಣದ ಪ್ರಸಿದ್ಧ ರಾಜಾಬಾಗ ಸವಾರ ದರ್ಗಾಕ್ಕೆ ಭೇಟಿ ನೀಡಿ ಅಲ್ಲಿಯ ಪ್ರಮುಖ ಖಾಜಾಜಿಯಾ ಉಲ್‌ ಹಸನ ಜಾಗಿರದಾರ, ರಯೀಸ್‌ ಶೇಖ್‌, ದಯಾನಂದ ಖಳಾಳೆ ಹಾಗೂ ಖಲೀಲ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ಬೇಲೂರಿನ ಉರಲಿಂಗ ಪೆದ್ದಿ ಮಠಕ್ಕೆ ಭೇಟಿ ನೀಡಿದಾಗ ಪೀಠಾಧಿಪತಿ ಪಂಚಯ್ಯ ಸ್ವಾಮಿ, ಗವಿ ಮಠದ ಅಭಿನವ ಘನಲಿಂಗ ರುದ್ರಮನಿ, ಬಸವ ಮಹಾಮನೆ ಮಾತೆ ಮಹಾದೇವಿ ಆಶ್ರಮದ ಸಿದ್ಧರಾಮೇಶ್ವರ ಸ್ವಾಮೀಜಿ ಮುಂತಾದವರನ್ನು ಭೇಟಿಯಾಗಿ ಅವರಿಂದ ಸಾಗರ ಖಂಡ್ರೆ ಆಶೀರ್ವಾದ ಪಡೆದರು.

ಈ ಎಲ್ಲಾ ಸಂದರ್ಭದಲ್ಲಿಯೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ನೀಲಕಂಠ ರಾಠೋಡ, ಶಶಿಕಾಂತ ದುರ್ಗೆ, ಬಸವರಾಜ ಸ್ವಾಮಿ ಸೇರಿದಂತೆ ಮುಂತಾದವರು ಸಾಥ್‌ ನೀಡಿದರು.

ಭಾಲ್ಕಿ ತಾಲೂಕಿನ ವಿವಿಧ ಮಠಗಳಿಗೆ ಸಾಗರ ಖಂಡ್ರೆ ಭೇಟಿ:

ಭಾಲ್ಕಿ: ತಾಲೂಕಿನ ಭಾತಂಬ್ರಾ, ಹಲಬರ್ಗಾ ಮತ್ತು ಮಳಚಾಪೂರ ಗ್ರಾಮದ ಮಠಗಳಿಗೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸಾಗರ ಖಂಡ್ರೆ ಭೇಟಿ ನೀಡಿ ಪೂಜ್ಯರ ಆಶೀರ್ವಾದ ಪಡೆದುಕೊಂಡರು. ಭಾತಂಬ್ರಾ ಗ್ರಾಮದ ಜಗದ್ಗುರು ನಿರಂಜನ ಸಂಸ್ಥಾನ ಮಠಕ್ಕೆ ಸೋಮವಾರ ಭೇಟಿ ನೀಡಿ, ಜಗದ್ಗುರು ಶಿವಯೋಗಿಶ್ವರ ಸ್ವಾಮೀಜಿ ಅವರ ಆಶೀರ್ವಾದ ಪಡೆದರು. ನಂತರ ಹಲಬರ್ಗಾ ಗ್ರಾಮದ ರಾಚೋಟೇಶ್ವರ ಮಠಕ್ಕೆ ತೆರಳಿ ಹಾವಗಿಲಿಂಗೇಶ್ವರ ಶಿವಾಚಾರ್ಯ ಅವರನ್ನು ಸನ್ಮಾನಿಸಿ, ಆಶೀರ್ವಾದ ಪಡೆದರು. ಮಳಚಾಪೂರ ಗ್ರಾಮದ ಶಂಭುಲಿಂಗಾ ಶ್ರಮಕ್ಕೆ ಮಂಗಳವಾರ ಭೇಟಿ ನೀಡಿದ ಸಾಗರ ಖಂಡ್ರೆ ಅವರು ಸದೃಪಾನಂದ ಸ್ವಾಮೀಜಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಭಾತಂಬ್ರಾ ಗ್ರಾಪಂ ಅಧ್ಯಕ್ಷ ವಿಜಯಕುಮಾರ ಗಾಮಾ, ಸದಸ್ಯರಾದ ಜೈರಾಜ ಪಾಟೀಲ್‌, ಮಹಾಂತೇಶ ಪಾಟೀಲ್‌, ವಿಶ್ವ ಹೂಗಾರ, ಶಂಕರ ಗುಬ್ಬೆ, ಮಹಾದೇವ ಬೇಲೂರೆ ಸೇರಿದಂತೆ ಹಲವರು ಇದ್ದರು.