ಶಕ್ತಿ ನಗರ ರಮಾ ಶಕ್ತಿ ಮಿಶನ್ ವತಿಯಿಂದ ಡಿ.29ರಂದು ಸೋಮವಾರ ಬೆಳಗ್ಗೆ 7ರಿಂದ ಸಹಸ್ರ ಚಂಡಿಕಾ ಯಾಗ ಪ್ರಾರಂಭ, ಬೆಳಗ್ಗೆ 11ಕ್ಕೆ ಸಹಸ್ರ ಚಂಡಿಕಾ ಯಾಗದ ಪೂರ್ಣಾಹುತಿ, ಬಳಿಕ ಸಭಾ ಕಾರ್ಯಕ್ರಮ, ಅನ್ನಸಂತರ್ಪಣೆ ನಡೆಯಲಿದೆ
ಮಂಗಳೂರು: ಶಕ್ತಿನಗರದ ರಮಾ ಶಕ್ತಿ ಮಿಷನ್ ವತಿಯಿಂದ ಲೋಕ ಕಲ್ಯಾಣಕ್ಕಾಗಿ ಅಪರೂಪದ ಹಾಗೂ ಅತ್ಯಂತ ಶಕ್ತಿಶಾಲಿ ವೈದಿಕ ಯಾಗವಾದ ಸಹಸ್ರ ಚಂಡಿಕಾಯಾಗದ ಪೂರ್ವಭಾವಿಯಾಗಿ ಭಾನುವಾರ ಧನ್ವಂತರಿ ಹೋಮ ಹಾಗೂ ವೈದಿಕ ಕಾರ್ಯಕ್ರಮಗಳು ಭಾನುವಾರ ನೆರವೇರಿತು. ಬೆಳಗ್ಗೆ ಗೋಪೂಜೆ, ಗುರು ಪ್ರಾರ್ಥನೆ, ಚಂಡೀ ಪುರಶ್ಚರಣೆ, ನವಾವರಣ ಪೂಜೆ ನಡೆದು, ಧನ್ವಂತರಿ ಹೋಮ ನಡೆಯಿತು. ಮಧ್ಯಾಹ್ನ ಮಹಾಮಂಗಳಾರತಿ ನಡೆದು, ಸುವಾಸಿನಿ ಪೂಜೆ ನಡೆಯಿತು. ಸಂಜೆ ನವಾಕ್ಷರೀ ಮಂತ್ರ ಜಪ, ಲಲಿತಾ ಸಹಸ್ರನಾಮ ಪಾರಾಯಣ ಸೇವೆ, ಮಂಗಳಾರತಿ ಹಾಗೂ ಅಷ್ಟಾವಧಾನ ಸೇವೆ ಸಂಪನ್ನಗೊಂಡಿತು. ಬೋಳೂರಿನ ಅಮೃತಾನಂದಮಯಿ ಮಠದ ಸ್ವಾಮಿನಿ ಮಂಗಳಾಮೃತ ಪ್ರಾಣ ಸಾನಿಧ್ಯ ವಹಿಸಿದ್ದರು. ದಿನವಿಡೀ ನಡೆದ ವಿವಿಧ ಸೇವೆಗಳಲ್ಲಿ 8,000ಕ್ಕೂ ಅಧಿಕ ಭಕ್ತರು ಭಾಗವಹಿಸಿ, ತೀರ್ಥ, ಅನ್ನಪ್ರಸಾದ ಸ್ವೀಕರಿಸಿ ದೇವರ ಅನುಗ್ರಹ ಪಡೆದರು.ಪದವು ಫ್ರೆಂಡ್ಸ್ ಕ್ಲಬ್ ಶಕ್ತಿನಗರ, ಆದಿಶಕ್ತಿ ಮಹಿಳಾ ಮಂಡಳಿ ಗುಂಡಳಿಕೆ, ಶ್ರೀ ರಾಜರಾಜೇಶ್ವರಿ ಸೇವಾ ಸಮಿತಿ ನೀತಿನಗರ, ರಾಜೀವನಗರ ನಾಗಬ್ರಹ್ಮ ಸೇವಾ ಸಮಿತಿ ಸೇರಿದಂತೆ ವಿವಿಧ ತಂಡಗಳು ಸಹಕರಿಸಿದವು.
ಇಂದು ಸಹಸ್ರ ಚಂಡಿಕಾ ಯಾಗಡಿ.29ರಂದು ಸೋಮವಾರ ಬೆಳಗ್ಗೆ 7ರಿಂದ ಸಹಸ್ರ ಚಂಡಿಕಾ ಯಾಗ ಪ್ರಾರಂಭ, ಬೆಳಗ್ಗೆ 11ಕ್ಕೆ ಸಹಸ್ರ ಚಂಡಿಕಾ ಯಾಗದ ಪೂರ್ಣಾಹುತಿ, ಬಳಿಕ ಸಭಾ ಕಾರ್ಯಕ್ರಮ, ಅನ್ನಸಂತರ್ಪಣೆ ನಡೆಯಲಿದೆ. ಶೃಂಗೇರಿ ಶಾರದಾ ಪೀಠದ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡುವರು.