ಭಕ್ತರು ಸಿದ್ದಲಿಂಗೇಶ್ವರರಿಗೆ ಬಿಲ್ವಪತ್ರೆಯನ್ನು ಓಂ ನಮಃ ಶಿವಾಯ ಎಂಬ ಮಂತ್ರ ಹೇಳುವ ಮುಖಾಂತರ ಅರ್ಪಿಸಿದರು.

ಕನ್ನಡಪ್ರಭ ವಾರ್ತೆ ಕುಣಿಗಲ್ ಎಡಿಯೂರು ಸಿದ್ದಲಿಂಗೇಶ್ವರ ಅವರ ತಪೋಭೂಮಿ ಕುಣಿಗಲ್ ತಪೋ ಕ್ಷೇತ್ರ ಕಗ್ಗೆರೆಯಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶ್ರೀ ಸಿದ್ದಲಿಂಗೇಶ್ವರರಿಗೆ ಸಹಸ್ರ ಕಮಲ ಪೂಜೆ ಹಾಗೂ ಲಕ್ಷ ಬಿಲ್ವಾರ್ಚನೆ ಅದ್ದೂರಿಯಾಗಿ ನಡೆಯಿತು . ದೇವಾಲಯದ ಆವರಣದಲ್ಲಿ ಟಿಕೆಟ್ ಪಡೆದ ಹಲವಾರು ಭಕ್ತರು ಸಿದ್ದಲಿಂಗೇಶ್ವರರಿಗೆ ಬಿಲ್ವಪತ್ರೆಯನ್ನು ಓಂ ನಮಃ ಶಿವಾಯ ಎಂಬ ಮಂತ್ರ ಹೇಳುವ ಮುಖಾಂತರ ಅರ್ಪಿಸಿದರು. ಪ್ರತಿವರ್ಷದಂತೆ ಈ ಬಾರಿಯೂ ಕೂಡ ಸಹಸ್ರ ಕಮಲ ಪೂಜೆ ಹಾಗೂ ಲಕ್ಷ ಬಿಲ್ವಾರ್ಚನೆ ನಡೆಯುತ್ತಿದ್ದು ರಾಜ್ಯದ ವಿವಿಧ ಭಾಗಗಳಿಂದ ಅಸಂಖ್ಯಾತ ಭಕ್ತರು ಬಂದು ಭಾಗವಹಿಸಿ ಸ್ವಾಮಿಯ ಆಶೀರ್ವಾದ ಪಡೆಯುತ್ತಿದೆ. ಶಿವನಿಗೆ ಪ್ರಿಯವಾದಂತಹ ಬಿಲ್ವಪತ್ರೆಯನ್ನು ಓಂ ನಮಃ ಶಿವಾಯ ಎಂಬ ಮಂತ್ರದೊಂದಿಗೆ ದೇವರಿಗೆ ಅರ್ಪಿಸಿದಾಗ ನಮ್ಮ ಕಷ್ಟಗಳು ದೂರ ಆಗುತ್ತವೆ ಎಂಬ ನಂಬಿಕೆ. ಅದೇ ರೀತಿ ಇಲ್ಲಿ ನಡೆದುಕೊಳ್ಳುವ ಭಕ್ತರ ಎಲ್ಲ ಸಮಸ್ಯೆಗಳು ದೂರಾಗಿ ಅವರು ಇಷ್ಟಾರ್ಥಗಳು ಈಡೇರಿವೆ ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಬಂದ ಭಕ್ತರಿಗೆ ದಾಸೋಹ ಕೈಂಕರ್ಯ ಸೇವಾ ಸಮಿತಿ ವತಿಯಿಂದ ಪ್ರಸಾದ ಹಾಗೂ ದಾಸೋಹ ವ್ಯವಸ್ಥೆಯನ್ನು ನಡೆಸಲಾಯಿತು.