ಚಾಮುಂಡಿ ದೇವಿಗೆ ಸಹಸ್ರ ಕುಂಕುಮಾರ್ಚನೆ

| Published : Oct 13 2024, 01:06 AM IST

ಸಾರಾಂಶ

ಹಾರೋಹಳ್ಳಿ: ಹಾರೋಹಳ್ಳಿ ದಸರಾ ಆಚರಣಾ ಸಮಿತಿ ವತಿಯಿಂದ ಶ್ರೀ ಚಾಮುಂಡೇಶ್ವರಿ ಅಮ್ಮನವರ 8ನೇ ವರ್ಷದ ಅದ್ದೂರಿ ದಸರಾ ಮಹೋತ್ಸವದ ಅಂಗವಾಗಿ ಪ್ರಸನ್ನ ಪಾರ್ವತಿ ಹಾಗೂ ಚಾಮುಂಡೇಶ್ವರಿ ದೇವಿಗೆ ಸಹಸ್ರ ಕುಂಕುಮಾರ್ಚನೆ ಸಮರ್ಪಿಸಲಾಯಿತು.

ಹಾರೋಹಳ್ಳಿ: ಹಾರೋಹಳ್ಳಿ ದಸರಾ ಆಚರಣಾ ಸಮಿತಿ ವತಿಯಿಂದ ಶ್ರೀ ಚಾಮುಂಡೇಶ್ವರಿ ಅಮ್ಮನವರ 8ನೇ ವರ್ಷದ ಅದ್ದೂರಿ ದಸರಾ ಮಹೋತ್ಸವದ ಅಂಗವಾಗಿ ಪ್ರಸನ್ನ ಪಾರ್ವತಿ ಹಾಗೂ ಚಾಮುಂಡೇಶ್ವರಿ ದೇವಿಗೆ ಸಹಸ್ರ ಕುಂಕುಮಾರ್ಚನೆ ಸಮರ್ಪಿಸಲಾಯಿತು.

ಶ್ರೀ ಅರುಣಾಚಲೇಶ್ವರಸ್ವಾಮಿ ದೇವಾಲಯದಲ್ಲಿ ನೂರಾರು ಮಹಿಳೆಯರು ಕೆಂಪು ಬಣ್ಣದ ಸೀರೆಯುಟ್ಟು ನವರಾತ್ರಿ 8ನೇ ದಿನವನ್ನು ಮಾತೆ ಮಹಾಗೌರಿ ಸಹಸ್ರ ಕುಂಕುಮಾರ್ಚನೆ ಪೂಜೆಯನ್ನು ನೆರವೇರಿಸಿದರು. ಮೊದಲ ದಿನದಿಂದ 8 ದಿನಗಳ ಕಾಲ ನವರಾತ್ರಿಯ ದುರ್ಗಾಷ್ಟಮಿಯಲ್ಲಿ ನಿತ್ಯ ದೇವಿಯ ಒಂದೊಂದು ವಿಗ್ರಹ ಪ್ರತಿಷ್ಠಾಪಿಸಿ 8ನೇ ದಿನ ಮಹಾಗೌರಿ ಪೂಜೆ ನಡೆಸಿದರು.

ದೇವಾಲಯದ ಲಲಿತ ಮಂಡಳಿಯ ಕಮಲಮ್ಮ ಮಾತನಾಡಿ, ಸನಾತನ ಕಾಲದಿಂದಲೂ ಈ ಪೂಜಾ ಕೈಂಕರ್ಯಗಳು ನಡೆದುಕೊಂಡು ಬಂದಿವೆ, ನವರಾತ್ರಿಯಲ್ಲಿ ದೇವಿಯನ್ನು ಆರಾಧಿಸುವುದರಿಂದ ಸುಖ, ವ್ಯಾಪರ, ಸಂಪತ್ತು ಮತ್ತು ಸಮೃದ್ಧಿ ಹೆಚ್ಚಿಸುವ ಪ್ರತೀಕವಾಗಿರುವ ಧಾರ್ಮಿಕ ನಂಬಿಕೆ ಇದೆ. ಆದ್ದರಿಂದ ದಸರಾ ಸಮಯದಲ್ಲಿ ನವದುರ್ಗೆಯರನ್ನು ಪ್ರತಿಷ್ಟಾಪಿಸಿ ಪೂಜಿಸಲಾಗುತ್ತಿದೆ.

ನವರಾತ್ರಿಯ ಒಂಬತ್ತನೇ ದಿನಕ್ಕೆ ಸಿದ್ದಿಧಾತ್ರಿ ಪೂಜೆ ನಡೆಸಿ ರಾತ್ರಿ ವೇಳೆ ನವ ದೇವಿಯರ ವಿಸರ್ಜನೆ ನಡೆಯುತ್ತದೆ, ಭಕ್ತಾದಿಗಳು ಈ ಸಮಯದಲ್ಲೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ದೇವಾಲಯದ ಧರ್ಮದರ್ಶಿ ಎಂ.ಮಲ್ಲಪ್ಪ, ದಸರಾ ಆಚರಣಾ ಸಮಿತಿಯ ಗೌತಮ್ ಗೌಡ, ಪ್ರಧಾನ ಕಾರ್ಯದರ್ಶಿ ಹೋಟೆಲ್ ಜಗದೀಶ್, ಪದಾಧಿಕಾರಿಗಳಾದ ವಿಜಯಕುಮಾರ್, ಎಚ್.ಎಸ್.ಮುರುಳಿಧರ್, ರಾಘವೇಂದ್ರ ಸೇರಿದಂತೆ ಅನೇಕರು ಹಾಜರಿದ್ದರು.

12ಕೆಆರ್ ಎಂಎನ್ 1.ಜೆಪಿಜಿ

ಹಾರೋಹಳ್ಳಿ ಅರುಣಾಚಲೇಶ್ವರ ಸ್ವಾಮಿ ದೇವಾಲಯದಲ್ಲಿ ನೂರಾರು ಮಹಿಳೆಯರಿಂದ ದುರ್ಗಾಷ್ಟಮಿ ಅಂಗವಾಗಿ ಸಹಸ್ರ ಕುಂಕುಮಾರ್ಚನೆ ಸಮರ್ಪಿಸಲಾಯಿತು.