ಸಾರಾಂಶ
ಗದಗ: ಎಸ್‌ಎಸ್‌ಕೆ ಸಮಾಜದ ಮೂಲ ಪುರುಷ ಶ್ರೀ ಸಹಸ್ರಾರ್ಜುನ ಮಹಾರಾಜರ ಜಯಂತಿ ಎಸ್‌ಎಸ್‌ಕೆ ಪಂಚ್ ಟ್ರಸ್ಟ್ ಕಮಿಟಿ, ತರುಣ ಸಂಘ, ಮಹಿಳಾ ಮಂಡಳಗಳ ಸಂಯುಕ್ತಾಶ್ರಯದಲ್ಲಿ ಬೆಟಗೇರಿಯಲ್ಲಿ ವಿಜೃಂಭಣೆಯಿಂದ ಜರುಗಿತು.
ಬೆಟಗೇರಿಯ ಸಹಸ್ರಾರ್ಜುನ ವೃತ್ತದಲ್ಲಿ ಸಹಸ್ರಾರ್ಜುನ ಮಹಾರಾಜರ ಭಾವಚಿತ್ರಕ್ಕೆ ಪಂಚ ಟ್ರಸ್ಟ್ ಕಮಿಟಿ ಅಧ್ಯಕ್ಷ ಲೋಕನಾಥಸಾ ಕಬಾಡಿ ಪೂಜೆ ಸಲ್ಲಿಸಿದರು. ಆನಂತರ ಬೆಟಗೇರಿ ಅಂಬಾಭವಾನಿ ದೇವಸ್ಥಾನದಿಂದ ಸಹಸ್ರಾರ್ಜುನ ಮಹಾರಾಜರ ಭಾವಚಿತ್ರದ ಭವ್ಯ ಮೆರವಣಿಗೆ ಸಕಲ ಕಲಾವಾದ್ಯ ಮೇಳಗಳೊಂದಿಗೆ ಟೆಂಗಿನಕಾಯಿ ಬಜಾರ, ಪಿ.ಬಿ. ರೋಡ್, ಟರ್ನಲ್ ಪೇಟೆ, ಕಬಾಡಿ ರೋಡ್, ಹೊಸಪೇಟೆ ಚೌಕ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಅದ್ಧೂರಿಯಾಗಿ ಜರುಗಿತು.ಸಮಾಜದ ಯುವಕರು, ಯುವತಿಯರು, ಮಹಿಳೆಯರು, ಪುರುಷರು ಆಕರ್ಷಕ ನೃತ್ಯ ಮಾಡಿ ಮೆರವಣಿಗೆಗೆ ಮೆರಗು ತಂದರು.
ಎಸ್‌ಎಸ್‌ಕೆ ಪಂಚ ಟ್ರಸ್ಟ್ ಕಮಿಟಿಯ ಉಪಾಧ್ಯಕ್ಷ ದತ್ತು ಪವಾರ, ಗೌರವ ಕಾರ್ಯದರ್ಶಿ ಜಿ.ವಿ. ಬಸವ, ಸತ್ಯನಾರಾಯಣ ಕಬಾಡಿ, ಶಂಕರಸಾ ಮೇರವಾಡೆ, ರಘುನಾಥಸಾ ಮೇರವಾಡೆ, ನಾರಾಯಣಸಾ ಮೇರವಾಡೆ, ಸಿ.ಡಿ. ಮೇತ್ರಾಣಿ, ಮಂಜುನಾಥ ಎನ್. ಕಬಾಡಿ, ಎನ್.ಎಂ. ಕಬಾಡಿ, ಪ್ರತಿಭಾಬಾಯಿ ಮೇರವಾಡೆ, ನಾರಾಯಣಸಾ ಕಬಾಡಿ, ಸೋಮಶೇಖರ ಮೇರವಾಡೆ, ರಾಮ ಹಬೀಬ, ಬಲರಾಮ ಅರಸಿದ್ದಿ, ರಾಜು ಬಸವ, ಮೋಹನಸಾ ಕಬಾಡಿ, ಎಂ.ಯು. ರಾಯಬಾಗಿ, ನರಸಿಂಗಸಾ ಮೇರವಾಡೆ, ಶಂಭು ಮೇರವಾಡೆ, ಮಾಧುಸಾ ಮೇರವಾಡೆ, ಟಿ.ಎನ್. ಭಾಂಡಗೆ, ಭೀಮಾಸಾ ರಾಯಬಾಗಿ, ಹೀರಾಸಾ ಬಾಕಳೆ, ರಾಮು ಬಾಕಳೆ, ಶ್ರೀಕಾಂತ ಕಬಾಡಿ, ಗಣಪತಿ ಮೇರವಾಡೆ, ಲಕ್ಷ್ಮಣ ಮೇರವಾಡೆ, ಗುರುನಾಥಸಾ ಮೇರವಾಡೆ, ದೀಪಕ ಲದ್ವಾ, ಗಣೇಶ ಪವಾರ, ಸತ್ಯನಾರಾಯಣ ಮೇರವಾಡೆ, ಆರ್. ಎನ್. ಸೋಳಂಕಿ ಇದ್ದರು.ಸಹಸ್ರಾರ್ಜುನ ಮಹಾರಾಜರ ಜಯಂತಿ: ಗದಗ ನಗರದಲ್ಲಿ ಸೋ.ಸ. ಕ್ಷತ್ರಿಯ ಪಂಚ ಕಮಿಟಿ, ಸಹಸ್ರಾರ್ಜುನ ಮಹಾರಾಜರ ಜಯಂತಿ ಉತ್ಸವ ಸಮಿತಿ, ತರುಣ ಸಂಘ ಹಾಗೂ ಮಹಿಳಾ ಮಂಡಳದಿಂದ ಎಸ್‌ಎಸ್‌ಕೆ ಸಮಾಜದ ಮೂಲ ಪುರುಷ ಸಹಸ್ರಾರ್ಜುನ ಮಹಾರಾಜರ ಜಯಂತಿ ಸಂಭ್ರಮದಿಂದ ಜರುಗಿತು.
ಬೆಳಗ್ಗೆ ಜಿಲ್ಲಾ ಅಬಕಾರಿ ಉಪ ಆಯುಕ್ತೆ ಲಕ್ಷ್ಮೀ ನಾಯಕ ಹಾಗೂ ಮಹಿಳಾ ಮಂಡಳದ ಅಧ್ಯಕ್ಷೆ ಉಮಾ ಬೇವಿನಕಟ್ಟಿ ಅವರಿಂದ ಶ್ರೀ ಸಹಸ್ರಾರ್ಜುನ ಮಹಾರಾಜರಿಗೆ ತೊಟ್ಟಿಲಿಗೆ ಹಾಕುವ ಕಾರ್ಯಕ್ರಮ, ಮಹಾ ಮಂಗಳಾರತಿ ಜರುಗಿತು.ಸಂಜೆ ಜಗದಂಬಾ ದೇವಸ್ಥಾನದಲ್ಲಿ ಮಾಜಿ ಶಾಸಕ ಡಿ.ಆರ್. ಪಾಟೀಲ, ಎಸ್‌ಎಸ್‌ಕೆ ಸಮಾಜದ ರಾಜ್ಯಾಧ್ಯಕ್ಷ ಶಶಿಕುಮಾರ ಮೇರವಾಡೆ ಅವರು ಮೆರವಣಿಗೆಗೆ ಚಾಲನೆ ನೀಡಿದರು.ಆನಂತರ ಸಹಸ್ರಾರ್ಜುನ ಮಹಾರಾಜರ ಬೆಳ್ಳಿಯ ಮೂರ್ತಿ ಹಾಗೂ ತೈಲವರ್ಣದ ಭಾವಚಿತ್ರದ ಮೆರವಣಿಗೆ ಸಕಲ ವಾದ್ಯ ಕಲಾ ಮೇಳಗಳೊಂದಿಗೆ ಹೊರಟು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ದೇವಸ್ಥಾನಕ್ಕೆ ತಲುಪಿತು.ಆನಂತರ ರಾಜಣಸಾ ತುಳಜಣಸಾ ಖಟವಟೆ (ಗುಂಜನವರ) ಅವರ ಸ್ಮರಣಾರ್ಥ ಖಟವಟೆ ಪರಿವಾರದವರಿಂದ ಪ್ರಸಾದ ಸೇವೆ ಜರುಗಿತು.ಈ ವೇಳೆ ಮಾರುತಿ ಪವಾರ, ಭೀಮಸಾ ಕಾಟಿಗರ, ಬಾಬು ಶಿದ್ಲಿಂಗ, ರೇಖಾಬಾಯಿ ಖಟವಟೆ, ರಾಜು ಖಟವಟೆ, ಫಕೀರಸಾ ಭಾಂಡಗೆ, ರಾಜು ಬದಿ, ವಿನೋದ ಶಿದ್ಲಿಂಗ, ರವಿ ಶಿದ್ಲಿಂಗ, ಪ್ರಕಾಶ ಬಾಕಳೆ, ಎನ್.ಆರ್. ಖಟವಟೆ, ವಿಶ್ವನಾಥಸಾ ಖಟವಟೆ, ಬಲರಾಮ ಬಸವಾ, ಪರಶುರಾಮ ಬದಿ, ಅಂಬಾಸಾ ಖಟವಟೆ, ಶ್ರೀನಿವಾಸ ಭಾಂಡಗೆ, ವಿಷ್ಣುಸಾ ಶಿದ್ಲಿಂಗ, ಅನಿಲ್ ಖಟವಟೆ, ಮೋತಿಲಾಲಸಾ ಪೂಜಾರಿ, ಗಂಗಾಧರ ಹಬೀಬ, ವಿನೋದ ಭಾಂಡಗೆ, ಗಣಪತಸಾ ಜಿತೂರಿ, ಕುಮಾರ ಬದಿ, ವಿಶ್ವನಾಥ ಸೋಳಂಕಿ, ಸಾಗರ ಪವಾರ, ಮಾಧುಸಾ ಬದಿ ಇದ್ದರು.
ಜನಮನ ಸೆಳೆದ ಆಕರ್ಷಕ ನೃತ್ಯ: ನಗರದಲ್ಲಿ ಜರುಗಿದ ಸಹಸ್ರಾರ್ಜುನ ಮಹಾರಾಜರ ಜಯಂತಿಯ ಮೆರವಣಿಗೆಯಲ್ಲಿ ಸಮಾಜದ ಯುವಕ-ಯುವತಿಯರು, ಮಹಿಳೆಯರು, ಪುರುಷರು ಡಿಜೆ ಸಂಗೀತಕ್ಕೆ ಮೆರವಣಿಗೆ ಯುದ್ದಕ್ಕೂ ಸಹಸ್ರಾರ್ಜುನ ಮಹಾರಾಜರ ಜಯಘೋಷಣೆಗಳನ್ನು ಕೂಗುತ್ತಾ ಮಾಡಿದ ಆಕರ್ಷಕ ನೃತ್ಯ ಮೆರಣಿಗೆಯ ಮೆರಗು ಹೆಚ್ಚಿಸಿತು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))