ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಸುಂಟಿಕೊಪ್ಪದಲ್ಲಿ ಮೇ 29ಮತ್ತು 30ರಂದು ನಡೆಯುವ 17ನೇ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನ ಕುರಿತಾದ ಮನವಿ ಪತ್ರ ಬಿಡುಗಡೆಗೊಳಿಸಲಾಯಿತು. ಸಮ್ಮೇಳನದ ಸ್ವಾಗತ ಸಮಿತಿ ಉಪಾಧ್ಯಕ್ಷ ಹಾಗೂ ಹಣಕಾಸು ಸಮಿತಿ ಅಧ್ಯಕ್ಷರಾಗಿರುವ ಎ. ಲೋಕೇಶ್‌ ಕುಮಾರ್ ಅಧ್ಯಕ್ಷತೆಯಲ್ಲಿ ಮೇ 1ರಂದು ಸಂಜೆ ಸಾಹಿತ್ಯ ಸಮ್ಮೇಳನ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭ ಸುಂಟಿಕೊಪ್ಪ ಕಸಾಪ ಅಧ್ಯಕ್ಷ ಹಾಗೂ ಜಿಲ್ಲಾ ಸಮ್ಮೇಳನದ ಕಾರ್ಯದರ್ಶಿ ಪಿ.ಎಫ್. ಸಬಾಸ್ಟೀನ್, ಜಿಲ್ಲಾ ಕಸಾಪದ ಸಹಕಾರ್ಯದರ್ಶಿ ಲೀಲಾ ಮೇದಪ್ಪ, ದ್ವಾರ ನಿರ್ಮಾಣ ಸಮಿತಿ ಅಧ್ಯಕ್ಷ ಎಚ್.ಯು. ರಫೀಕ್‌ ಖಾನ್, ಸ್ಮರಣ ಸಂಚಿಕೆ ಸಂಪಾದಕ ಬಿ.ಸಿ. ದಿನೇಶ್, ಆರೋಗ್ಯ ಸಮಿತಿ ಅಧ್ಯಕ್ಷ ಪಿ.ಆರ್. ಸುನಿಲ್‌ ಕುಮಾರ್, ಹಿರಿಯ ಪತ್ರಕರ್ತ ಬಿ.ಡಿ. ರಾಜು ರೈ ಉಪಸ್ಥಿತರಿದ್ದರು.