ಆನಂದಪುರ ಹೋಬಳಿ ಮಟ್ಟದಲ್ಲಿ ಸಹ್ಯಾದ್ರಿ ಕೃಷಿ ಒನ್ ಮಾದರಿ ಘಟಕವನ್ನು ಆರಂಭಿಸಲಾಗುವುದು ಎಂದು ಇರುವಕ್ಕಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಿಗಳ ವಿಶ್ವವಿದ್ಯಾಲಯದ ನೂತನ ಕುಲಪತಿ ಡಾ. ಎಂ.ವಿ. ಧನಂಜಯ್ ತಿಳಿಸಿದರು.

- ಇರುವಕ್ಕಿ ಕೆಳದಿ ಶಿವಪ್ಪ ನಾಯಕ ಕೃಷಿ-ತೋಟಗಾರಿಕಾ ವಿಜ್ಞಾನಗಳ ವಿವಿ ಕುಲಪತಿಯಾಗಿ ಅಧಿಕಾರ ಸ್ವೀಕಾರ

- - -

ಕನ್ನಡಪ್ರಭ ವಾರ್ತೆ ಆನಂದಪುರ

ಹೋಬಳಿ ಮಟ್ಟದಲ್ಲಿ ಸಹ್ಯಾದ್ರಿ ಕೃಷಿ ಒನ್ ಮಾದರಿ ಘಟಕವನ್ನು ಆರಂಭಿಸಲಾಗುವುದು ಎಂದು ಇರುವಕ್ಕಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಿಗಳ ವಿಶ್ವವಿದ್ಯಾಲಯದ ನೂತನ ಕುಲಪತಿ ಡಾ. ಎಂ.ವಿ. ಧನಂಜಯ್ ತಿಳಿಸಿದರು.

ಇಲ್ಲಿಗೆ ಸಮೀಪದ ಇರುವಕ್ಕಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಶುಕ್ರವಾರ ಅಧಿಕಾರ ಸ್ವೀಕರಿಸಿ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ರೈತ ಸಮುದಾಯಕ್ಕೆ ವಿಶ್ವವಿದ್ಯಾಲಯದ ಸಂಶೋಧನೆ ಹಾಗೂ ತಂತ್ರಜ್ಞಾನವನ್ನು ನೇರವಾಗಿ ತಲುಪಿಸುವ ಉದ್ದೇಶದಿಂದ ಮುಂದಿನ ಆರು ತಿಂಗಳಲ್ಲಿ ಹೋಬಳಿ ಮಟ್ಟದಲ್ಲಿ ಸಹ್ಯಾದ್ರಿ ಕೃಷಿ ಓನ್ ಮಾದರಿಯ ಘಟಕ ಸ್ಥಾಪನೆ ಮಾಡಲಾಗುವುದು. ಇದರ ಮೂಲಕ ಕೃಷಿ ತಂತ್ರಜ್ಞಾನ ರೈತರ ಮನೆ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ₹50 ಕೋಟಿ ಯೋಜನೆಯಲ್ಲಿ ಸಹ್ಯಾದ್ರಿ ಕೃಷಿ ಓನ್ ಮಾದರಿ ಘಟಕವನ್ನು ಸ್ಥಾಪನೆ ಮೂಲಕ ನಾವು ರೈತರ ಮನೆ ಬಾಗಿಲಿಗೆ ಹೋಗಬೇಕು ಎನ್ನುವ ಆಶಯ ಹೊಂದಿದ್ದೇನೆ ಎಂದು ಹೇಳಿದರು.

ರೈತರಿಗೆ ಸೂಕ್ತ ಮಾರ್ಗದರ್ಶನ ನೀಡುವುದರೊಂದಿಗೆ ಹೊಸ ಮಾರಾಟ ಘಟಕವನ್ನು ಪ್ರಾರಂಭಿಸುವುದರ ಮೂಲಕ ಈ ಭಾಗದ ರೈತರಿಗೆ ಅನುಕೂಲ ಮಾಡುವಂತಹ ಪರಿಕಲ್ಪನೆ ನನ್ನದಿದೆ. ಸಹ್ಯಾದ್ರಿ ಕೃಷಿ ಒನ್ ಮೂಲಕ ರೈತರಿಗೆ ಬೆಳೆ ನಿರ್ವಹಣೆ, ತೋಟಗಾರಿಕೆ, ನೂತನ ಕೃಷಿ ತಂತ್ರಜ್ಞಾನ, ಮೌಲ್ಯವರ್ಧನೆ ಹಾಗೂ ಮಾರುಕಟ್ಟೆ ಮಾಹಿತಿ ಕುರಿತು ಸ್ಥಳೀಯ ಮಟ್ಟದಲ್ಲೇ ಮಾರ್ಗದರ್ಶನ ನೀಡಲಾಗುವುದು. ಕೃಷಿ ಕ್ಷೇತ್ರ ಸಂಕಷ್ಟದಲ್ಲಿದೆ. ರೈತರು ಸಂಪ್ರದಾಯ ಬೆಳೆಗಳಾದ ರಾಗಿ, ಜೋಳ, ಭತ್ತ ಬೆಳೆಯುವುದರಿಂದ ಆರ್ಥಿಕವಾಗಿ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಕೃಷಿಕರು ತೋಟಗಾರಿಕೆ ಬೆಳೆಗಳೊಂದಿಗೆ. ಸಜ್ಜೆ, ನವಣೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದರು.

ಕೃಷಿ ಮತ್ತು ಅರಣ್ಯ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಕೇವಲ ಪದವಿ ಮುಗಿಸಿದ ಕ್ಷಣವೇ ಸರ್ಕಾರಿ ಸೇವೆ ಸಿಗುವುದಿಲ್ಲ. ಪದವಿ ಪಡೆದ ವಿದ್ಯಾರ್ಥಿಗಳು ಉದ್ಯಮಿದಾರರಾಗಬೇಕು. 4 ವರ್ಷಗಳ ಅವಧಿಯಲ್ಲಿ ಇರುವಕ್ಕಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಿಗಳ ವಿಶ್ವವಿದ್ಯಾಲಯ ದೇಶದ ಹತ್ತನೇ ಕೃಷಿ ವಿಶ್ವವಿದ್ಯಾಲಯವನ್ನಾಗಿಸಿ ಮಾಡುವಂತಹ ಪ್ರಯತ್ನ ನಮ್ಮ ಗುರಿಯಾಗಿದೆ. ಇದಕ್ಕೆ ಪ್ರತಿಯೊಬ್ಬ ಅಧಿಕಾರಿ, ವಿಜ್ಞಾನಿಗಳ ಸಹಕಾರ ಮುಖ್ಯ ಎಂದರು.

- - -

-18ಎಎನ್,ಪಿ1: ಡಾ. ಎಂ.ವಿ. ಧನಂಜಯ್