ಸಾರಾಂಶ
Saidapur: Appeal to Railway Minister on various demands
ಕನ್ನಡಪ್ರಭ ವಾರ್ತೆ ಯಾದಗಿರಿ
ಸೈದಾಪುರ ಸಮೀಪದ ಕಡೇಚೂರು ಹಾಗೂ ಬಾಡಿಯಾಲ ಕೈಗಾರಿಕಾ ಪ್ರದೇಶಕ್ಕೆ ಮಂಗಳವಾರ ಸಂಜೆ ಭೇಟಿ ನೀಡಿದ ಕೇಂದ್ರ ಜಲಶಕ್ತಿ ಹಾಗೂ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಗ್ರಾಮಸ್ಥರು ಸೈದಾಪುರ ರೈಲ್ವೆ ನಿಲ್ದಾಣಕ್ಕೆ ಸಂಬಂಧಿಸಿದಂತೆ ವಿವಿಧ ಬೇಡಿಕೆ ಕುರಿತು ಮನವಿ ಪತ್ರ ಸಲ್ಲಿಸಿದರು.ಇಲ್ಲಿನ ರೈಲ್ವೆ ನಿಲ್ದಾಣ 50ಕ್ಕೂ ಹೆಚ್ಚು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಪ್ರದೇಶವಾಗಿದ್ದೂ ಹೆಚ್ಚಿನ ಜನ ದಟ್ಟಣೆ ಇರುವುದರಿಂದ ಯಾರ್ಡನ ಎಲ್.ಸಿ ಗೇಟ್ 225 ಮೆಲ್ಸೇತುವೆ ಬ್ರಿಡ್ಜ್ ಮಂಜೂರು ಮಾಡಬೇಕು.
ರೈಲು ಸಂಚರಿಸುವ ಸಂದರ್ಭದಲ್ಲಿ ಗೇಟ ಮುಚ್ಚಲಾಗುತ್ತದೆ. ಭಾರಿ ಪ್ರಮಾಣದಲ್ಲಿ ವಾಹನಗಳು ನಿಲ್ಲುವಂತಾಗಿದೆ. ಇದರಿಂದ ರೈತರು ಹಾಗೂ ಶಾಲಾ, ಕಾಲೇಜು ವಿದ್ಯಾರ್ಥಿಗಳು ತೊಂದರೆ ಕಾಣುವಂತಾಗಿದೆ. 16571 ಯಶವಂತಪೂರ- ಬೀದರ ಮತ್ತು 16583 ಯಶವಂತಪೂರ ಲಾತೂರ ಎಕ್ಸ್‌ಪ್ರೆಸ್ ನಿಲ್ಲಿವುದನ್ನು ಸ್ಥಗಿತಗೊಳಿಸಿರುತ್ತಾರೆ. ಇವುಗಳನ್ನು ಮರು ಪ್ರಾರಂಭ ಮಾಡಬೇಕು.ಸೋಲ್ಲಾಪುರ ಗುಂತಕಲ್ ಪ್ಯಾಸೆಂಜರ್ ಸುಮಾರು ದಶಕಗಳಿಂದ ಕಾರ್ಯ ನಿರ್ವಹಿಸುತ್ತಿದ್ದು, ಕೋವಿಡ್ ಸಮಯದಿಂದ ಇಲ್ಲಿಯವರೆಗೂ ಸ್ಥಗಿತಗೊಂಡಿದೆ. ಮರುಚಾಲನೆ ಮಾಡುವಂತೆ ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡಿ ಸಂಚಾರಕ್ಕೆ ಅನಕೂಲ ಕಲ್ಪಿಸಿ ಕೊಡಬೇಕು.
16381/82 ಕನ್ಯಾಕುಮಾರಿ ಎಕ್ಸ್‌ಪ್ರೆಸ್ (ಜಯಂತಿ) ರೈಲು ಸೈದಾಪುರದಲ್ಲಿ ಹೊಸ ನಿಲುಗಡೆಗಾಗಿ ಬಹಳ ದಿನಗಳ ಬೇಡಿಕೆಯಾಗಿದ್ದು ಇದನ್ನು ಈಡೇರಿಸಬೇಕು. ಅತಿ ಹೆಚ್ಚಿನ ಪ್ರಯಾಣಿಕರನ್ನು ಹೊಂದಿರುವ ರೈಲ್ವೆ ನಿಲ್ದಾಣ ಇದಾಗಿದ್ದೂ ಇವರುಗಳ ಸುಲಭ ಸಂಚಾರಕ್ಕಾಗಿ ನಿಲ್ದಾಣದಲ್ಲಿ ಅನೌನ್ಸ್‌ಮೆಂಟ್ ಸಿಸ್ಟಮ್ ಅತಿ ಅವಶ್ಯಕತೆ ಇದ್ದೂ ಅದರ ಅನುಕೂಲತೆಯನ್ನು ಕಲ್ಪಿಸಿಕೊಡುವಂತೆ ವಿವಿಧ ಬೇಡಿಕೆಗಳನ್ನು ಕುರಿತು ಅರ್ಜುನ ಚೌಹ್ವಾಣ, ಯೇಸುರಾಜ ಬೆಳಗುಂದಿ, ನಿತಿನ ತಿವಾರಿ, ಸಾಬಯ್ಯ ಉಪ್ಪಾರ, ಶಿವರಾಜ ವಡ್ಲೂರು, ಯೇಸುನಾಥ ಮೇಲೆಗಿರಿ, ಸೇರಿದಂತೆ ಇತರರು ಸಚಿವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.----
ಫೋಟೊ:3ವೈಡಿಆರ್11 : ಸೈದಾಪುರ ಸಮೀಪದ ಕಡೇಚೂರು ಮತ್ತು ಬಾಡಿಯಾಲ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿದ ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ವಿ.ಸೋಮಣ್ಣ ಅವರಿಗೆ ಸೈದಾಪುರ ರೈಲ್ವೆ ನಿಲ್ದಾಣಕ್ಕೆ ಸಂಬಂಧಿಸಿದಂತೆ ವಿವಿಧ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಗ್ರಾಮಸ್ಥರು ಸಲ್ಲಿಸಿದರು.