ನುಡಿದಂತೆ ನಡೆದ ಸಂತ ಭಕ್ತ ಕನಕದಾಸ

| Published : Nov 19 2024, 12:47 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ: ನುಡಿದಂತೆ ಬಾಳಿದ ಸಂತ ಭಕ್ತ ಕನಕದಾಸರ ಜೀವನ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ತಹಸೀಲ್ದಾರ್ ಪ್ರಕಾಶ ಸಿಂದಗಿ ಹೇಳಿದರು. ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಭವನದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ದಾಸಶ್ರೇಷ್ಠ ಕನಕದಾಸರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ತಾಲೂಕು ಕುರುಬ ಸಂಘದ ಅಧ್ಯಕ್ಷ ಗುರುನಾಥ ಮುರಡಿ ಮಾತನಾಡಿ, ಕನಕದಾಸರು ಜಾತಿ ಪದ್ಧತಿ, ಮೇಲು ಕೀಳು, ಅಸ್ಪೃಶ್ಯತೆಯಂತಹ ವ್ಯವಸ್ಥೆಗಳನ್ನು ವಿರೋಧಿಸಿ ಸಾಮಾಜಿಕ ನ್ಯಾಯ ಮತ್ತು ಪ್ರಗತಿಗೆ ಶ್ರಮಿಸಿದ ಶ್ರೇಷ್ಠ ಸಂತರಾಗಿದ್ದರು ಎಂದರು.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ: ನುಡಿದಂತೆ ಬಾಳಿದ ಸಂತ ಭಕ್ತ ಕನಕದಾಸರ ಜೀವನ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ತಹಸೀಲ್ದಾರ್ ಪ್ರಕಾಶ ಸಿಂದಗಿ ಹೇಳಿದರು. ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಭವನದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ದಾಸಶ್ರೇಷ್ಠ ಕನಕದಾಸರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ತಾಲೂಕು ಕುರುಬ ಸಂಘದ ಅಧ್ಯಕ್ಷ ಗುರುನಾಥ ಮುರಡಿ ಮಾತನಾಡಿ, ಕನಕದಾಸರು ಜಾತಿ ಪದ್ಧತಿ, ಮೇಲು ಕೀಳು, ಅಸ್ಪೃಶ್ಯತೆಯಂತಹ ವ್ಯವಸ್ಥೆಗಳನ್ನು ವಿರೋಧಿಸಿ ಸಾಮಾಜಿಕ ನ್ಯಾಯ ಮತ್ತು ಪ್ರಗತಿಗೆ ಶ್ರಮಿಸಿದ ಶ್ರೇಷ್ಠ ಸಂತರಾಗಿದ್ದರು ಎಂದರು.ಶಿಕ್ಷಕ ಎಸ್.ಎಸ್.ಸಾತಿಹಾಳ ಉಪನ್ಯಾಸದಲ್ಲಿ ಸಂತ ಶ್ರೇಷ್ಠ ಕನಕದಾಸರು ತಮ್ಮ ಕೃತಿಗಳ ಮೂಲಕ ಸಮಾನತೆ ಮತ್ತು ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಸಾರಿದ ಮಹಾನ್ ದಾರ್ಶನಿಕರು ಎಂದು ಅವರ ಜೀವನ ಚರಿತ್ರೆಯ ಕುರಿತು ವಿವರಿಸಿದರು.

ಕಸಾಪ ತಾಲೂಕು ಅಧ್ಯಕ್ಷ ಜಿ.ಪಿ.ಬಿರಾದಾರ ಮಾತನಾಡಿ, ಕನಕದಾಸರ ಜೀವನ ತತ್ವ ಮೌಲ್ಯಗಳು ಸೇರಿದಂತೆ ಎಲ್ಲ ಮಹನೀಯರ ಆದರ್ಶಗಳನ್ನು ಯುವ ಸಮುದಾಯ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.ಸಮುದಾಯದ ಮುಖಂಡರಾದ ಪ್ರಕಾಶ ದೊಡಮನಿ,ಕೆ.ಎಸ್.ಹಿರೇಕುರುಬರ, ಪ್ರಕಾಶ ಗುಡಿಮನಿ ಸೇರಿದಂತೆ ಹಲವರು ಮಾತನಾಡಿದರು.

ಮುಖಂಡರಾದ ಸಿದ್ದು ಬುಳ್ಳಾ, ಬಸವರಾಜ ದೇವಣಗಾಂವ, ಮಡಿವಾಳಪ್ಪ ಬ್ಯಾಲ್ಯಾಳ, ಶರಣು ಪೂಜಾರಿ, ಸುನೀಲ ಮಾಗಿ, ಗೂಳಪ್ಪ ಚೌದರಿ, ಯಮನು ದೇವಣಗಾಂವ, ಭೀಮು ಬುಳ್ಳಾ, ಸಿದ್ದು ಕೊಂಡಗೂಳಿ, ಆದೇಶ ಪೂಜಾರಿ, ಸಿದ್ದು, ಜಕ್ಕು, ಶರಣು, ಬಾಳು, ಅಮ್ಮೋಗಿ, ಪೂಜು, ಶರಣಪ್ಪ, ಆಹಾರ ಇಲಾಖೆಯ ಎ.ಡಿ.ಬಸವರಾಜ ಬೋವಿ, ಕಂದಾಯ ಇಲಾಖೆಯ ಸಂಗಮೇಶ ಗ್ವಾಳೇದ, ಕುಮಾರ ಅವರಾದಿ ಸೇರಿ ಸಮುದಾಯದ ಮುಖಂಡರು ಭಾಗವಹಿಸಿದ್ದರು. ಕಂದಾಯ ಇಲಾಖೆಯ ಶಿರಸ್ತೇದಾರ ಸುರೇಶ ಮ್ಯಾಗೇರಿ ಸ್ವಾಗತಿಸಿ, ವಂದಿಸಿದರು.