ನಗರದ ಎಲ್ಲೆಡೆ ಕ್ರಿಸ್ ಮಸ್ ಸಂಭ್ರಮ

| Published : Dec 26 2024, 01:02 AM IST

ಸಾರಾಂಶ

ಸ್ಮಸ್ ಆಚರಣೆ ಹಿನ್ನೆಲೆಯಲ್ಲಿ ಸಂತ ಫಿಲೋಮಿನಾ ಚರ್ಚ್ ಅನ್ನು ವಿದ್ಯುತ್ದೀಪದಿಂದ ಅಲಂಕರಿಸಲಾಗಿತ್ತು

ಕನ್ನಡಪ್ರಭ ವಾರ್ತೆ ಮೈಸೂರುಕ್ರಿಸ್ಮಸ್ ಹಿನ್ನೆಲೆಯಲ್ಲಿ ನಗರದ ಎಲ್ಲೆಡೆ ಸಂಭ್ರಮ ಮನೆ ಮಾಡಿತ್ತು.ಸಂಪ್ರದಾಯದಂತೆ ಮಂಗಳವಾರ ರಾತ್ರಿ ಹಂಗಾಮಿ ಬಿಷಪ್ ಬರ್ನಾರ್ಡ್ ಮೊರಸ್ ಅವರು ಬಾಲ ಏಸುವನ್ನು ನಗರದ ಸಂತ ಫಿಲೋಮಿನಾ ಚರ್ಚ್ ಆವರಣದಲ್ಲಿ ನಿರ್ಮಿಸಿದ್ದ ಗೋಂದಳಿಯಲ್ಲಿ ಇರಿಸಿ ಕ್ರಿಸ್ತನ ಶಾಂತಿ ಸಂದೇಶವನ್ನು ಸಾರಿದರು.ಕ್ರಿಸ್ಮಸ್ ಆಚರಣೆ ಹಿನ್ನೆಲೆಯಲ್ಲಿ ಸಂತ ಫಿಲೋಮಿನಾ ಚರ್ಚ್ ಅನ್ನು ವಿದ್ಯುತ್ದೀಪದಿಂದ ಅಲಂಕರಿಸಲಾಗಿತ್ತು. ಕನ್ನಡ, ಇಂಗ್ಲಿಷ್ ಮತ್ತು ತಮಿಳಿನಲ್ಲಿ ಯೇಸುವಿಗೆ ಪ್ರಾರ್ಥನೆ ಸಲ್ಲಿಸಲಾಯಿತು.ಆಡಳಿತಾಧಿಕಾರಿ ಹಾಗೂ ಹಂಗಾಮಿ ಬಿಷಪ್ ಅವರು ಯೇಸುವಿನ ಜನನದ ಕುರಿತು ಮಾಹಿತಿ ನೀಡಿದರು. ಬಲಿಪೂಜೆಯು ಇದೇ ವೇಳೆ ನೆರವೇರಿತು. ಕ್ರೈಸ್ತ ಸಮಾಜದ ಬಂಧುಗಳು ಯೇಸುವಿನ ಗೀತೆಗಳನ್ನು ಹಾಡಿ ಸ್ಮರಿಸಿದರು.ಬುಧವಾರ ಬೆಳಗ್ಗೆ 6 ಗಂಟೆಯಿಂದಲೇ ಸಾಮೂಹಿಕ ಪ್ರಾರ್ಥನೆ ಆರಂಭವಾಯಿತು. ಅಂತೆಯೇ ಸಂಜೆ ವೇಳೆಯೂ ಅನೇಕರು ಪ್ರಾರ್ಥನೆ ಸಲ್ಲಿಸಿದರು.ನಗರದ ಗ್ರಾಮಾಂತರ ಬಸ್ ನಿಲ್ದಾಣದ ಬಳಿಯ ಸೆಂಟ್ ಬರ್ಥೋಲೊಮೆವ್ಚರ್ಚ್, ವೆಸ್ಲಿ ಚರ್ಚ್, ಲಕ್ಷ್ಮೀಪುರಂನ ಸಿಎಸ್ಐ ಹಾರ್ಡ್ವಿಕ್ಚರ್ಚ್, ಇನ್ಫ್ಯಾಂಟ್ಜೀಸಸ್ ಕ್ಯಾಡ್ರಾಲ್, ಸಾಡೆ ಮೆಮೋರಿಯಲ್ಚರ್ಚ್, ಯೇಸು ಕರುಣಾಲಯ ಚರ್ಚ್, ಶ್ರೀರಾಂಪುರ ಮತ್ತು ನಾಯ್ಡು ನಗರದ ಚರ್ಚ್ ಗಳಲ್ಲಿ ಸಾಮೂಹಿಕ ಪ್ರಾರ್ಥನೆ ನೆರವೇರಿಸಲಾಯಿತು.ವಾಹನ ದಟ್ಟಣೆಕ್ರಿಸ್ ಮಸ್ರಜಾ ದಿನಗಳ ಹಿನ್ನೆಲೆಯಲ್ಲಿ ಕರ್ನಾಟಕ, ಕೇರಳ, ತಮಿಳುನಾಡು ಸೇರಿದಂತೆ ವಿವಿಧೆಡೆಯಿಂದ ಮೈಸೂರಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ. ಅಂತೆಯೇ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿಲು ಕ್ರೈಸ್ತ ಸಮುದಾಯದವರು ತಂಡೋಪ ತಂಡವಾಗಿ ಆಗಮಿಸಿದ ಹಿನ್ನೆಲೆಯಲ್ಲಿ ಒಮ್ಮೆಲೆ ವಾಹನ ದಟ್ಟಣೆ ಉಂಟಾಯಿತು. ಬಳಿಕ ಪೊಲೀಸರು ಮಧ್ಯಪ್ರವೇಶಿಸಿ ವಾಹನ ಸಂಚಾರ ನಿಯಂತ್ರಿಸಿದರು.