ಸಂತ ಸೇವಾಲಾಲರು ಬಂಜಾರ ಸಮುದಾಯದ ಕುಲಗುರು

| Published : Feb 16 2025, 01:48 AM IST

ಸಾರಾಂಶ

ಮೂಲ ವೃತ್ತಿ ಪಶು ಸಾಕಣೆ ಹಾಗೂ ಪಶುಸಂಗೋಪನೆ ಮಾಡುವ ಇವರು ಮೂಢನಂಬಿಕೆ ವಿರುದ್ಧ ಹೋರಾಡಿದ ವಿವೇಚನಾಶೀಲ ವ್ಯಕ್ತಿ

ಲಕ್ಷ್ಮೇಶ್ವರ: ಸಂತ ಸೇವಾಲಾಲ ಮಹಾರಾಜರು ಬಂಜಾರ ಸಮುದಾಯದ ಕುಲ ಗುರು ಸಮಾಜ ಸುಧಾರಕರು ಮಹಾತಪಸ್ವಿ, ಇವರು ಕರ್ನಾಟಕ ರಾಜ್ಯದ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬೆಳಗುತ್ತಿ ಹೋಬಳಿಯ ಸೂರಗೊಂಡನಕೊಪ್ಪ ಎಂಬ ಗ್ರಾಮದಲ್ಲಿ ಜನಿಸಿದ ಒಬ್ಬ ದೈವ ಪುರುಷ ಎಂದು ಮುಖ್ಯೋಪಾಧ್ಯಾಯ ಬಸವರಾಜ ಕುಂಬಾರ ಹೇಳಿದರು.

ಅವರು ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಹೆಣ್ಣು ಮಕ್ಕಳ ಶಾಲೆಯಲ್ಲಿ ಶನಿವಾರ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮದ ಅಂಗವಾಗಿ ಸಂತ ಸೇವಾಲಾಲ್‌ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಮಾತನಾಡಿದರು.

ಶಿಕ್ಷಕಿ ಎಚ್.ಡಿ. ನಿಂಗರೆಡ್ಡಿ ಮಾತನಾಡಿ, ಸೇವಾಲಾಲರು ೧೮ನೇ ಶತಮಾನದಲ್ಲಿ ನಿಜಾಮ ದೊರೆ ಮತ್ತು ಮೈಸೂರು ಅರಸರೊಂದಿಗೆ ಬಂಜಾರರ ಹಕ್ಕುಗಳಿಗಾಗಿ ಹೋರಾಡುವಲ್ಲಿ ಪ್ರಮುಖ ಪಾತ್ರ ವಹಿಸಿದವರು, ಇವರ ಮೂಲ ವೃತ್ತಿ ಪಶು ಸಾಕಣೆ ಹಾಗೂ ಪಶುಸಂಗೋಪನೆ ಮಾಡುವ ಇವರು ಮೂಢನಂಬಿಕೆ ವಿರುದ್ಧ ಹೋರಾಡಿದ ವಿವೇಚನಾಶೀಲ ವ್ಯಕ್ತಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ಆರ್.ಎಂ.ಶಿರಹಟ್ಟಿ, ಆರ್.ಕೆ. ಉಪನಾಳ, ಅಕ್ಷತಾ ಕಾಟೆಗರ್, ಲಕ್ಷ್ಮಿ ಹತ್ತಿಕಟ್ಟಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.