ಸಾರಾಂಶ
ಸಂತ ಸೇವಾಲಾಲ್ ಸಮಾಜ ಸುಧಾರಕರಾಗಿ ಮೂಢ ನಂಬಿಕೆಗಳ ವಿರುದ್ಧ ಹೋರಾಟ ನಡೆಸುವಲ್ಲಿ ಪ್ರಮುಖರಾಗಿದ್ದವರು, ಅವರ ಜಯಂತಿ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಯುವ ಪೀಳಿಗೆ ಅವರ ಆದರ್ಶ ಗುಣಗಳನ್ನು ಕಿಂಚಿತ್ತಾದರೂ ರೂಢಿಸಿಕೊಳ್ಳಬೇಕು ಎಂದು ಶಾಸಕ ಎ ಆರ್ ಕೃಷ್ಣಮೂರ್ತಿ ಹೇಳಿದರು.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲಸಂತ ಸೇವಾಲಾಲ್ ಸಮಾಜ ಸುಧಾರಕರಾಗಿ ಮೂಢ ನಂಬಿಕೆಗಳ ವಿರುದ್ಧ ಹೋರಾಟ ನಡೆಸುವಲ್ಲಿ ಪ್ರಮುಖರಾಗಿದ್ದವರು, ಅವರ ಜಯಂತಿ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಯುವ ಪೀಳಿಗೆ ಅವರ ಆದರ್ಶ ಗುಣಗಳನ್ನು ಕಿಂಚಿತ್ತಾದರೂ ರೂಢಿಸಿಕೊಳ್ಳಬೇಕು ಎಂದು ಶಾಸಕ ಎ ಆರ್ ಕೃಷ್ಣಮೂರ್ತಿ ಹೇಳಿದರು.
ತಾಪಂ ಸಭಾಂಗಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ಸಂತ ಸೇವಾಲಾಲ್ ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯ ಹಾಗೂ ಕೇಂದ್ರ ಸರ್ಕಾರ ಸಂತ ಸೇವಾಲಾಲ್ ಜಯಂತಿ ಆಚರಣೆ ಮೂಲಕ ಅವರಿಗೆ ಗೌರವ ಸಲ್ಲಿಸುವ ಕೆಲಸ ಮಾಡುತ್ತಿದೆ. ಸಂತ ಸೇವಾಲಾಲ್ ಮಹಾತಪಸ್ವಿ, ಸಮಾಜ ಸುಧಾರಕರಾಗಿದ್ದರು. ಗುರಿ ರಹಿತ ಜೀವನ ಮನೆ ಅಂಗಳದ ಕಸದಂತೆ ಎಂಬ ಸಂದೇಶ ರವಾನಿಸಿದ್ದರು. ಭಾರತದ ಆದ್ಯಾತ್ಮಿಕ ನಾಯಕ, ಮೂಢ ನಂಬಿಕೆ ವಿರುದ್ಧ ದಿಟ್ಟ ಹೋರಾಟ ನಡೆಸಿದ್ದರು. ಜಗದಾಂಭ ದೇವಿಯ ಆರಾಧಕರು, ಜೀವನದಲ್ಲಿ ಅನಿಷ್ಟ ಪದ್ಧತಿ ವಿರುದ್ಧ ನಿಂತು ಸತ್ಯದ ದಾರಿಯಲ್ಲಿ ನಡೆದ ಶರಣರು ಅವರನ್ನು ಸ್ಮರಿಸುವ ಜೊತೆಗೆ ಅವರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಚಂದ್ರಪ್ರಕಾಶ್ ಮಾತನಾಡಿ ಸಂತ ಸೇವಾಲಾಲ್ ಒಬ್ಬ ಮಹಾಪುರುಷ ಅವರ ವಿಚಾರಗಳನ್ನು ನಾವೆಲ್ಲರೂ ಅರ್ಥೈಸಿಕೊಳ್ಳಬೇಕಿದೆ ಎಂದರು. ಕಾರ್ಯಕ್ರಮದಲ್ಲಿ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಜಗಜ್ಯೋತಿ ಬಸವಣ್ಣನ ಭಾವಚಿತ್ರ ಅಳವಡಿಸಬೇಕೆಂಬ ಆದೇಶದ ಮೇರೆಗೆ ಅವರ ಭಾವಚಿತ್ರವನ್ನು ಅನಾವರಣ ಮಾಡಲಾಯಿತು. ಈ ಸಂದರ್ಭದಲ್ಲಿ ತಹಸೀಲ್ದಾರ್ ಮಂಜುಳಾ.ಎಂ, ಡಿವೈಎಸ್ಪಿ ಎಂ.ಧರ್ಮೇಂದ್ರ, ಪೊಲೀಸ್ ಇನ್ಸ್ ಪೆಕ್ಟರ್ ಶಿವಮಾದಯ್ಯ, ಬಿಇಒ ಎಂ.ಮಂಜುಳಾ, ಬಂಜಾರ ನೌಕರರ ಸಂಘದ ಅಧ್ಯಕ್ಷ ಪಳನಿಸ್ವಾಮಿ ಜಾಗೇರಿ, ಗೌರವಧ್ಯಕ್ಷ ಶಾಂತರಾಜು, ಬಾಲುನಾಯಕ್ ಇದ್ದರು.