15ರಂದು ಸಂತ ಸೇವಾಲಾಲ್ ಜಯಂತಿ ಆಚರಣೆ-ಶಾಸಕ ಡಾ. ಲಮಾಣಿ

| Published : Feb 07 2024, 01:50 AM IST

15ರಂದು ಸಂತ ಸೇವಾಲಾಲ್ ಜಯಂತಿ ಆಚರಣೆ-ಶಾಸಕ ಡಾ. ಲಮಾಣಿ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕು ಆಡಳಿತ ಸೇರಿದಂತೆ ಶಾಲೆ, ಕಾಲೇಜ್, ಅಂಗನವಾಡಿ ಕೇಂದ್ರಗಳು, ಗ್ರಾಮ ಪಂಚಾಯಿತಿ ಕಾರ್ಯಾಲಯ ಹಾಗೂ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಸಾಂಕೇತಿಕವಾಗಿ ಫೆ. ೧೫ರಂದು ಸಂತ ಸೇವಾಲಾಲ್ ಮಹಾರಾಜರ ಜಯಂತಿಯನ್ನು ಆಚರಿಸಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಶಿರಹಟ್ಟಿ: ತಾಲೂಕು ಆಡಳಿತ ಸೇರಿದಂತೆ ಶಾಲೆ, ಕಾಲೇಜ್, ಅಂಗನವಾಡಿ ಕೇಂದ್ರಗಳು, ಗ್ರಾಮ ಪಂಚಾಯಿತಿ ಕಾರ್ಯಾಲಯ ಹಾಗೂ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಸಾಂಕೇತಿಕವಾಗಿ ಫೆ. ೧೫ರಂದು ಸಂತ ಸೇವಾಲಾಲ್ ಮಹಾರಾಜರ ಜಯಂತಿಯನ್ನು ಆಚರಿಸಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಮಂಗಳವಾರ ತಹಸೀಲ್ದಾರ್ ಕಾರ್ಯಾಲಯದ ಸಭಾ ಭವನದಲ್ಲಿ ಕರೆಯಲಾಗಿದ್ದ ಪೂರ್ವ ಭಾವಿ ಸಭೆ ಅಧ್ಯಕ್ಷತೆ ವಹಿಸಿ ಅಧಿಕಾರಿಗಳು ಮತ್ತು ಎಲ್ಲ ಸಮಾಜದ ಜನರನ್ನು ಉದ್ದೇಶಿಸಿ ಮಾತನಾಡಿದರು. ದೇಶದ ಬಂಜಾರ ಸಮುದಾಯದ ಏಕೈಕ ಸಂತ ಸೇವಾಲಾಲ್ ಮಹಾರಾಜರ ಜಯಂತ್ಯುತ್ಸವ ಆಚರಣೆಗೆ ಯಾರು ಅಸಡ್ಡೆ ತೋರಬಾರದು ಎಂದು ಎಚ್ಚರಿಸಿದರು.

ಬಂಜಾರ ಸಮುದಾಯ ವತಿಯಿಂದ ಸಾರ್ವಜನಿಕವಾಗಿ ಬಂಜಾರ ಸಮುದಾಯದ ಆಧ್ಯಾತ್ಮಿಕ ಮತ್ತು ಧಾರ್ಮಿಕ ಮುಖಂಡ ಸಂತ ಸೇವಾಲಾಲ್ ಮಹಾರಾಜರ ಜಂತಿಯನ್ನು ಎಂದು ಆಚರಣೆ ಮಾಡಬೇಕು ಎಂಬುದರ ಕುರಿತು ಮತ್ತೊಮ್ಮೆ ಸಭೆ ಕರೆದು ನಿರ್ಣಯಿಸಲಾಗುತ್ತದೆ.

ಭಾರತದ ಧಾರ್ಮಿಕ ರಾಯಬಾರಿ ಸಂತ ಸೇವಾಲಾಲ್ ಮಹಾರಾಜರು ಸೇರಿದಂತೆ ನಮ್ಮ ದೇಶದಲ್ಲಿ ಹಲವಾರು ಸಾಂಸ್ಕೃತಿಕ ರಾಯಭಾರಿಗಳು, ಭಾರತದ ನೆಲದಲ್ಲಿ ಹಲವು ಸಂತರು, ಧರ್ಮ ಸುಧಾರಕರು, ತತ್ವಜ್ಞಾನಿಗಳು ಜನ್ಮ ತಾಳಿ ಜನರಲ್ಲಿ ಮೂಢನಂಬಿಕೆ, ಕಂದಾಚಾರ, ಮೌಢ್ಯವನ್ನು ಹೋಗಲಾಡಿಸಿದ್ದಾರೆ. ಇಂತಹ ಮಹಾನ್ ಸಂತರುಗಳಲ್ಲಿ ಲಂಬಾಣಿ ಸಮುದಾಯದ ಆರಾಧ್ಯ ದೈವ ಸದ್ಗುರು ಸಂತ ಸೇವಾಲಾಲ್ ಮಹಾರಾಜರು ಒಬ್ಬರು ಎಂದರು.

ಅವರ ಜಯಂತಿಯನ್ನು ಸರ್ಕಾರದ ವತಿಯಿಂದ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಫೆ. ೧೫ರಂದು ತಪ್ಪದೆ ಆಚರಣೆ ಮಾಡಲು ಕರೆ ನೀಡಿದರು. ಶಿರಹಟ್ಟಿ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ಶಿರಹಟ್ಟಿ, ಮುಂಡರಗಿ, ಲಕ್ಷ್ಮೇಶ್ವರ ನಗರಗಳಲ್ಲಿ ನನ್ನ ಆಡಳಿತ ಅವಧಿಯಲ್ಲಿಯೇ ಸಂತ ಸೇವಾಲಾಲ್ ಮಹಾರಾಜರ ಸಮುದಾಯ ಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದ ಎಂದು ತಿಳಿಸಿದರು.ಈಗಾಗಲೇ ಲಕ್ಷ್ಮೇಶ್ವರ ನಗರದಲ್ಲಿ ಪುರಸಭೆ ವತಿಯಿಂದ ಸೇವಾಲಾಲ್ ಮಹಾರಾಜರ ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ಗುರುತಿಸಲಾಗಿದೆ. ಅದೇ ರೀತಿ ಶಿರಹಟ್ಟಿ ಪಟ್ಟಣ ಪಂಚಾಯತ ವತಿಯಿಂದ ನಿವೇಶನ ಗುರುತಿಸಿ ದಾಖಲೆ ಪತ್ರಗಳನ್ನು ನೀಡಿದಲ್ಲಿ ಸಮುದಾಯ ಭವನ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.

ತಹಸೀಲ್ದಾರ್ ಅನಿಲ ಬಡಿಗೇರ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶರಣಯ್ಯ ಕುಲಕರ್ಣಿ, ಕೃಷಿ ಇಲಾಖೆ ಅಧಿಕಾರಿ ರೇವಣೆಪ್ಪ ಮನಗೂಳಿ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಂ. ಮುಂದಿನಮನಿ, ತೋಟಗಾರಿಕೆ ಇಲಾಖೆ ಅಧಿಕಾರಿ ಸುರೇಶ ಕುಂಬಾರ, ಸಿಡಿಪಿಓ ಮೃತ್ತುಂಜಯ ಗುಡ್ಡದಾನವೇರಿ, ಸಾಮಾಜಿ ಅರಣ್ಯ ಇಲಾಖೆ ಅಧಿಕಾರಿ ಕೌಸಿಕ ದಳವಾಯಿ, ಲೋಕೋಪಯೋಗಿ ಇಲಾಖೆಯ ಫಕ್ಕೀರೇಶ ತಿಮ್ಮಾಪೂರ ಸೇರಿ ಇತರರು ಇದ್ದರು.

ಸಮುದಾಯದ ಮುಖಂಡರಾದ ಜಾನು ಲಮಾಣಿ, ದೇವಪ್ಪ ಲಮಾಣಿ, ಶಿವು ಲಮಾಣಿ, ಪುಂಡಲಿಕ ಲಮಾಣಿ, ತಾವರೆಪ್ಪ ಲಮಾಣಿ, ಸೋಮರಡ್ಡಿ ಲಮಾಣಿ, ರುದ್ರಪ್ಪ ಲಮಾಣಿ, ರಮೇಶ ಲಮಾಣಿ, ಈರಪ್ಪ ಚವ್ಹಾಣ, ತಿಪ್ಪಣ್ಣ ಲಮಾಣಿ, ವೆಂಕಪ್ಪ ಲಮಣಿ, ವಸಂತ ಲಮಾಣಿ, ಈಶ್ವರ ಲಮಾಣಿ ಇತರರು ಇದ್ದರು.