ಸಾರಾಂಶ
ಕನ್ನಡದಲ್ಲಿ ಸರ್ವಜ್ಞರಂತೆ, ತೆಲುಗಿನಲ್ಲಿ ವೇಮನರು ಹೆಚ್ಚಿನ ಪ್ರಖ್ಯಾತಿ ಗಳಿಸಿದ್ದಾರೆ, ಹುಟ್ಟಿನಿಂದ ಎಲ್ಲರೂ ಸಮಾನರು ಎಂಬ ಸತ್ಯವನ್ನು ತಿಳಿದವನೇ ಸರ್ವಶ್ರೇಷ್ಠನೆಂಬ ಉನ್ನತ ಚಿಂತನೆಯನ್ನು ವೇಮನರು ಹೊಂದಿದ್ದರು, ತ್ರಿಪದಿಗಳ ಮೂಲಕ ಜನಪ್ರಿಯರಾದ ಸರ್ವಜ್ಞರಂತೆ ಮಹಾಯೋಗಿ ವೇಮನರು ತೆಲುಗಿನಲ್ಲಿ ಪದ್ಯ ರಚಿಸಿದರು, ವೇಮನರು ಉತ್ಕಟ ದೇಶಪ್ರೇಮಿಯಾಗಿದ್ದರು
ಕನ್ನಡಪ್ರಭ ವಾರ್ತೆ ಕೆಜಿಎಫ್ನಾಡು ಕಂಡ ಅಪರೂಪದ ವ್ಯಕ್ತಿಗಳಲ್ಲಿ ವೇಮನರು ಒಬ್ಬರು, ಈ ಭೂಮಿ ಮೇಲೆ ಎಲ್ಲರ ಹೆಸರು ಶಾಶ್ವತವಾಗಿ ಉಳಿಯಲು ಸಾಧ್ಯವಿಲ್ಲ, ಆದರೆ ಯೋಗ ಸಾಧನೆ, ಸಮಾಜಕ್ಕಾಗಿ ಒಳಿತು ಮಾಡಿದ ಮಹಾನ್ ವ್ಯಕ್ತಿಗಳು ಮಾತ್ರ ಶಾಶ್ವತವಾಗಿ ಉಳಿಯುತ್ತಾರೆಂದು ಶಾಸಕಿ ರೂಪಕಲಾಶಶಿಧರ್ ಹೇಳಿದರು.ನಗರದ ತಾಲೂಕು ಆಡಳಿತ ಭವನದಲ್ಲಿ ಹಮ್ಮಿಕೊಂಡಿದ್ದ ವೇಮನ ಜಯಂತಿ ಕಾರ‍್ಯಕ್ರಮದಲ್ಲಿ ಭಾಗವಹಿಸಿ ವೇಮನರ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ವೇಮನರು ತೆಲುಗಿನ ಸರ್ವಜ್ಞವೇಮನರ ಸಾಧನೆ, ಆದರ್ಶಗಳ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು. ಕನ್ನಡದಲ್ಲಿ ಸರ್ವಜ್ಞರಂತೆ, ತೆಲುಗಿನಲ್ಲಿ ವೇಮನರು ಹೆಚ್ಚಿನ ಪ್ರಖ್ಯಾತಿ ಗಳಿಸಿದ್ದಾರೆ, ಹುಟ್ಟಿನಿಂದ ಎಲ್ಲರೂ ಸಮಾನರು ಎಂಬ ಸತ್ಯವನ್ನು ತಿಳಿದವನೇ ಸರ್ವಶ್ರೇಷ್ಠನೆಂಬ ಉನ್ನತ ಚಿಂತನೆಯನ್ನು ವೇಮನರು ಹೊಂದಿದ್ದರು, ತ್ರಿಪದಿಗಳ ಮೂಲಕ ಜನಪ್ರಿಯರಾದ ಸರ್ವಜ್ಞರಂತೆ ಮಹಾಯೋಗಿ ವೇಮನರು ತೆಲುಗಿನಲ್ಲಿ ಪದ್ಯ ರಚಿಸಿದರು, ವೇಮನರು ಉತ್ಕಟ ದೇಶಪ್ರೇಮವನ್ನು ಹೊಂದಿದ್ದರು ಎಂದರು.
ಕೆಜಿಎಫ್ ತಾಲೂಕು ರೆಡ್ಡಿ ಸಮುದಾಯದ ಅಧ್ಯಕ್ಷರಾದ ಪ್ರಸನ್ನರೆಡ್ಡಿ ಮಾತನಾಡಿ, ಸಮುದಾಯದ ಪರವಾಗಿ ಶಾಸಕರ ಬಳಿ ನಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದೇವೆ, ಪೂರ್ವಭಾವಿ ಸಭೆಯಲ್ಲಿ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ವೇಮನ ಜಯಂತಿ ಆಚರಣೆ ಮಾಡಬೇಕೆಂದು ತಿಳಿಸಿದ್ದಾಗ, ಶಾಸಕರು ನೀವು ಸರ್ಕಾರಿ ನೌಕರರಾಗಿದ್ದ ಸಂದರ್ಭದಲ್ಲಿ ನಿಮ್ಮ ಸಂಸ್ಥೆಯಲ್ಲಿ ವೇಮನ ಜಯಂತಿ ಆಚರಣೆ ಯಾವ ರೀತಿ ಮಾಡಿದ್ದಿರೆಂದು ಪ್ರಶ್ನಿಸುವ ಮೂಲಕ ಅಧ್ಯಕ್ಷರನ್ನು ಮುಜುಗರಕ್ಕೆ ಒಳಗಾಗುವಂತೆ ಶಾಸಕರು ಪ್ರಶ್ನೆ ಮಾಡಿದ್ದರು. ಇದರಿಂದ ತಮಗೆ ತೀವ್ರ ಅಸಮಾಧಾನವಾಗಿದ್ದಾಗಿ ತಿಳಿಸಿದರು.ಅಧ್ಯಕ್ಷರ ಕ್ಷಮೆ ಕೋರಿದ ಶಾಸಕಿಪೂರ್ವಭಾವಿ ಸಭೆಯಲ್ಲಿ ತಾವು ಕೇಳಿದ ಪ್ರಶ್ನೆಯಿಂದಾಗಿ ಸಮುದಾಯದ ಅಧ್ಯಕ್ಷರಿಗೆ ನೋವು ಉಂಟಾಗಿದ್ದರೆ ಸಮುದಾಯಕ್ಕೆ ಕ್ಷಮೆ ಕೋರುವುದಾಗಿ ವೇಮನ ಜಯಂತಿಯಲ್ಲಿ ಶಾಸಕಿ ರೂಪಕಲಾಶಸಿಧರ್ ತಿಳಿಸಿ, ಸಮುದಾಯದ ಏನೇ ಕೆಲಸವಿದ್ದರೂ ಮಾಡಿಕೊಡಲು ತಾವು ಸಿದ್ಧ ಎಂದು ಭರವಸೆ ನೀಡುವ ಮೂಲಕ ಸಮುದಾಯದ ಅಧ್ಯಕ್ಷರಾದ ಪ್ರಸನ್ನರೆಡ್ಡಿ ಅವರನ್ನು ಸಮಾಧಾನಗೊಳಿಸಿದರು.ಈ ಸಂದರ್ಭದಲ್ಲಿ ತಹಸೀಲ್ದಾರ್ ನಾಗವೇಣಿ ಹಾಗೂ ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು, ಸಮುದಾಯದ ಮುಖಂಡರು ಭಾಗವಹಿಸಿದ್ದರು..