ಸಂತರ ನಡೆ ತಾಂಡಾ ಕಡೆ: ಇಂದು ಗುರುಗಳ ಅಭಿನಂದನಾ ಸಮಾರಂಭ

| Published : Aug 18 2024, 01:48 AM IST

ಸಂತರ ನಡೆ ತಾಂಡಾ ಕಡೆ: ಇಂದು ಗುರುಗಳ ಅಭಿನಂದನಾ ಸಮಾರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಅಖಿಲ ಕರ್ನಾಟಕ ಬಂಜಾರಾ ಧರ್ಮಗುರುಗಳ ಮಹಾಸಭಾದಿಂದ ಆಗಸ್ಟ್‌ 11 ರಿಂದ ಸಂತರ ನಡೆ ತಾಂಡಾ ಕಡೆ ಎಂಬ ಕಾರ್ಯಕ್ರಮದ ಮೂಲಕ ಜಿಲ್ಲೆ ಪ್ರತಿ ತಾಂಡಾಗಳಲ್ಲಿ ಭೋಗ ಭಂಡಾರ ಹಾಗೂ ಜನಜಾಗೃತಿ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಚಿತ್ತರಗಿ ಸಂಸ್ಥಾನ ಮಠದ ಶಾಖಾ ಮಠದ ಲಿಂಗಸೂರಿನ ಸಿದ್ದಲಿಂಗ ಸ್ವಾಮೀಜಿ ನುಡಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಅಖಿಲ ಕರ್ನಾಟಕ ಬಂಜಾರಾ ಧರ್ಮಗುರುಗಳ ಮಹಾಸಭಾದಿಂದ ಆಗಸ್ಟ್‌ 11 ರಿಂದ ಸಂತರ ನಡೆ ತಾಂಡಾ ಕಡೆ ಎಂಬ ಕಾರ್ಯಕ್ರಮದ ಮೂಲಕ ಜಿಲ್ಲೆ ಪ್ರತಿ ತಾಂಡಾಗಳಲ್ಲಿ ಭೋಗ ಭಂಡಾರ ಹಾಗೂ ಜನಜಾಗೃತಿ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಚಿತ್ತರಗಿ ಸಂಸ್ಥಾನ ಮಠದ ಶಾಖಾ ಮಠದ ಲಿಂಗಸೂರಿನ ಸಿದ್ದಲಿಂಗ ಸ್ವಾಮೀಜಿ ನುಡಿದರು.

ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂಜಾರ ಸಂಸ್ಕ್ರತಿ ಸಂರಕ್ಷಣೆ, ಉದ್ಯೋಗ, ಶಿಕ್ಷಣ, ಮತಾಂತರ ತಡೆಗಟ್ಟುವಿಕೆ, ಬಾಂಧವರು ದುಶ್ಚಟಗಳಿಂದ ದೂರವಿರಬೇಕು. ಯಾವುದೇ ಕಾರಣಕ್ಕೂ ಮದುವೆಯಲ್ಲಿ ವರದಕ್ಷಿಣೆ ತೆಗೆದುಕೊಳ್ಳಬಾರದು. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಸಮಾಜದ ಮುಖ್ಯವಾಹಿನಿಯಲ್ಲಿ ತರುವುದು ಸೇರಿದಂತೆ ಬಂಜಾರ ಬಾಂಧವರಿಗೆ ಧರ್ಮ ಸಂದೇಶಗಳನ್ನು ಮುಟ್ಟಿಸುವ ಉದ್ದೇಶದಿಂದ ಈ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಆ.11 ರಂದು ನಿಡಗುಂದಿ ತಾಂಡಾದಿಂದ ಜನಜಾಗೃತಿ ಯಾತ್ರೆ ಆರಂಭವಾಗಿ ದೇವಲಾಪೂರ ತಾಂಡಾ, ಆಲಮಟ್ಟಿ ಆರ್‌.ಎಸ್ ತಾಂಡಾ, ಚಿಮ್ಮಲಗಿ ತಾಂಡಾ, ಗಣಿ ತಾಂಡಾ, ಮಾಡಗಿ ತಾಂಡಾ ಸೇರಿದಂತೆ ನಿಡಗುಂದಿ, ಕೊಲ್ಹಾರ, ಬಸವನಬಾಗೇವಾಡಿ ತಾಲೂಕಿನಲ್ಲಿ ಬರುವ ಎಲ್ಲ ತಾಂಡಾಗಳಿಗೆ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಬಂಜಾರ ಸಮಾಜ ಬಾಂಧವರಿಗೆ ಸಂತ ಸೇವಾಲಾಲರ ಸಂದೇಶಗಳನ್ನು ತಿಳಿಸುವ ಜೊತೆಗೆ ಜೀವನದಲ್ಲಿ ಸದ್ಗುಣಗಳನ್ನು ಅಳವಡಿಸಿಕೊಳ್ಳುವ ಕುರಿತು ಯಾತ್ರೆಯಲ್ಲಿ ಭಾಗವಹಿಸಿರುವ ಬಂಜಾರಾ ಧರ್ಮಗುರುಗಳು ಸಂದೇಶ ನೀಡಿದ್ದಾರೆ ಎಂದರು.ಈ ಯಾತ್ರೆಯಲ್ಲಿ ತೊರವಿಯ ಗೋಪಾಲ ಮಹಾರಾಜರು, ಕೊಡಗಲಿಯ ನಾಗು ಮಹಾರಾಜರು, ಸುರೇಶ ಮಹಾರಾಜರು, ಸುನೀಲ ಮಹಾರಾಜರು,ಲತಾಮಾತಾ, ಮುರಹರಿ ಮಹಾರಾಜರು ಸೇರಿದಂತೆ ಅನೇಕ ಗುರುಗಳು ಭಾಗವಿಹಿಸಿದ್ದಾರೆ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿರುವ ತಾಂಡಾಗಳಲ್ಲಿ ಈ ಯಾತ್ರೆಯು ನಡೆಯಲಿದೆ. ಯಾತ್ರೆಗೆ ಸಮಾಜ ಬಾಂಧವರಿಂದ ಸಹಕಾರ ಸಿಗುತ್ತಿದೆ ಎಂದು ತಿಳಿಸಿದರು.ಬಂಜಾರ ಸಮಾಜದ ಮುಖಂಡ, ಪುರಸಭೆ ಸದಸ್ಯ ನೀಲಪ್ಪ ನಾಯಕ ಮಾತನಾಡಿ, ಪಟ್ಟಣದ ಬಸವ ಭವನದಲ್ಲಿ ಆ.18 ರಂದು ಬೆಳಗ್ಗೆ 10.30 ಗಂಟೆಗೆ ಬಂಜಾರಾ ಸಮಾಜದ ಅಖಂಡ ತಾಲೂಕಿನಿಂದ ಈ ಯಾತ್ರೆಯಲ್ಲಿ ಭಾಗವಹಿಸಿರುವ ಎಲ್ಲ ಬಂಜಾರಾ ಸಮಾಜದ ಧರ್ಮಗುರುಗಳು ಸೇರಿದಂತೆ 100ಕ್ಕೂ ಅಧಿಕ ಗುರುಗಳಿಗೆ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿದೆ. ಬಸವನಬಾಗೇವಾಡಿ, ಕೊಲ್ಹಾರ, ನಿಡಗುಂದಿ ತಾಲೂಕಿನಲ್ಲಿರುವ ಎಲ್ಲ ತಾಂಡಾದ ಬಾಂಧವರು ತಮ್ಮ ಭಜನಾ ತಂಡ, ಡೊಳ್ಳಿನ ಮೇಳದೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕೋರಿದರು.ತಿಳಿಸಿದರು.

ಪಟ್ಟಣದ ಬಸವ ಭವನದಲ್ಲಿ ಆ.18 ರಂದು ಬೆಳಗ್ಗೆ 10.30 ಗಂಟೆಗೆ ಬಂಜಾರಾ ಸಮಾಜದ ಅಖಂಡ ತಾಲೂಕಿನಿಂದ ಈ ಯಾತ್ರೆಯಲ್ಲಿ ಭಾಗವಹಿಸಿರುವ ಎಲ್ಲ ಬಂಜಾರಾ ಸಮಾಜದ ಧರ್ಮಗುರುಗಳು ಸೇರಿದಂತೆ 100ಕ್ಕೂ ಅಧಿಕ ಗುರುಗಳಿಗೆ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿದೆ. ಬಸವನಬಾಗೇವಾಡಿ, ಕೊಲ್ಹಾರ, ನಿಡಗುಂದಿ ತಾಲೂಕಿನಲ್ಲಿರುವ ಎಲ್ಲ ತಾಂಡಾದ ಬಾಂಧವರು ತಮ್ಮ ಭಜನಾ ತಂಡ, ಡೊಳ್ಳಿನ ಮೇಳದೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು.

- ನೀಲಪ್ಪ ನಾಯಕ,

ಬಂಜಾರ ಸಮಾಜದ ಮುಖಂಡ, ಪುರಸಭೆ ಸದಸ್ಯ.