ರಾಮನಗರ: ಕಾಲಮಿತಿಯೊಳಗೆ ಸರ್ಕಾರಿ ಸೇವೆ ಒದಗಿಸುವ ನಿಟ್ಟಿನಲ್ಲಿ ಅನುಷ್ಠಾನಗೊಂಡಿರುವ `ಸಕಾಲ' ಯೋಜನೆಯಡಿ ಬೆಂಗಳೂರು ದಕ್ಷಿಣ ಜಿಲ್ಲೆ ರಾಜ್ಯದಲ್ಲಿಯೇ ಕಳೆದ ಡಿಸೆಂಬರ್ ತಿಂಗಳಿನಲ್ಲಿ ಮೂರನೇ ಸ್ಥಾನ ಪಡೆದಿದೆ.

ರಾಮನಗರ: ಕಾಲಮಿತಿಯೊಳಗೆ ಸರ್ಕಾರಿ ಸೇವೆ ಒದಗಿಸುವ ನಿಟ್ಟಿನಲ್ಲಿ ಅನುಷ್ಠಾನಗೊಂಡಿರುವ `ಸಕಾಲ'''''''' ಯೋಜನೆಯಡಿ ಬೆಂಗಳೂರು ದಕ್ಷಿಣ ಜಿಲ್ಲೆ ರಾಜ್ಯದಲ್ಲಿಯೇ ಕಳೆದ ಡಿಸೆಂಬರ್ ತಿಂಗಳಿನಲ್ಲಿ ಮೂರನೇ ಸ್ಥಾನ ಪಡೆದಿದೆ.

ಪ್ರತಿ ತಿಂಗಳು ರಾಜ್ಯಮಟ್ಟದಲ್ಲಿ ಜಿಲ್ಲಾವಾರು ಸ್ಥಾನ ಬದಲಾಗುತ್ತದೆ. ಅಂತೆಯೇ ಡಿಸೆಂಬರ್ ತಿಂಗಳಿನಲ್ಲಿ ಜಿಲ್ಲೆಗೆ ಸಕಾಲ ಯೋಜನೆಯಡಿ ಸ್ವೀಕರಿಸಿರುವ ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡುವ ಕಾರ್ಯದಲ್ಲಿ ಮೂರನೇ ಸ್ಥಾನ ದಕ್ಕಿದೆ. ಜಿಲ್ಲಾ ವ್ಯಾಪ್ತಿ ಈ ತಿಂಗಳಿನಲ್ಲಿ ವಿವಿಧ ಇಲಾಖೆಗೆ ನಾಗರೀಕರಿಂದ 57,001 ಅರ್ಜಿಗಳು ಸಲ್ಲಿಕೆಯಾಗಿದ್ದವು. ಇವುಗಳ ಪೈಕಿ 53,955 ಅರ್ಜಿಗಳನ್ನು ವಿಲೇವಾರಿ ಮಾಡುವ ಮೂಲಕ ಬೆಂಗಳೂರು ದಕ್ಷಿಣ ಜಿಲ್ಲೆಗೆ ಮೂರನೇ ಸ್ಥಾನ ಲಭಿಸಿದ್ದು, ಶೇ 78.38ರಷ್ಟು ಸಾಧನೆ ಮಾಡಿದಂತಾಗಿದೆ.

ಇನ್ನು ಪ್ರಥಮ ಸ್ಥಾನದಲ್ಲಿರುವ ಬಾಗಲಕೋಟೆ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಿಗೆ 91,784 ಅರ್ಜಿಗಳು ಸಲ್ಲಿಕೆಯಾಗಿದ್ದು, ಇದರಲ್ಲಿ 75,307 ಅರ್ಜಿಗಳನ್ನು (ಶೇ.78.69) ವಿಲೇವಾರಿಯಾಗಿವೆ. ದಕ್ಷಿಣ ಕನ್ನಡ ಜಿಲ್ಲೆ ದ್ವಿತೀಯ ಸ್ಥಾನದಲ್ಲಿದ್ದು, ಇಲ್ಲಿ ಸಲ್ಲಿಕೆಯಾದ 1,00,627 ಅರ್ಜಿಗಳ ಪೈಕಿ 90,659 ಅರ್ಜಿಗಳು (ಶೇ.78.42) ಕಾಲಮಿತಿಯೊಳಗೆ ವಿಲೇವಾರಿಗೊಂಡಿವೆ.

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಡಿಸೆಂಬರ್ ಮಾಹೆ ಕಂದಾಯ ಇಲಾಖೆಯಲ್ಲಿ ಒಟ್ಟು 11,401 ಅರ್ಜಿಗಳು ಸಲ್ಲಿಕೆಯಾಗಿದ್ದು, ಇದರಲ್ಲಿ (ಹಳೇ ಅರ್ಜಿಗಳು ಸೇರಿ) 7909 ಅರ್ಜಿಗಳು ವಿಲೇವಾರಿಯಾಗಿವೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸಲ್ಲಿಕೆಯಾದ 7710 ಅರ್ಜಿಗಳ ಪೈಕಿ 7909 ಅರ್ಜಿಗಳು ವಿಲೇವಾರಿವಾರಿಗೊಂಡಿವೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿನ 15,835 ಅರ್ಜಿಗಳ ಪೈಕಿ 15,920 ಅರ್ಜಿಗಳ ವಿಲೇವಾರಿಯಾಗಿವೆ.

ಇಲ್ಲಿವರೆಗೆ ಸಕಾಲ ಯೋಜನೆಯ ಅನುಷ್ಠಾನದಲ್ಲಿ ಜಿಲ್ಲೆ ಮೂರನೇ ಸ್ಥಾನದೊಳಗೆ ಅವಕಾಶ ಪಡೆದಿರಲೇ ಇಲ್ಲ. ಸದರಿ ಯೋಜನೆ ಆರಂಭವಾದಾಗಿನಿಂದ (2012 ರಿಂದ) ಈವರೆಗೆ ಸರ್ಕಾರ ಈ ಯೋಜನೆಯ ಪ್ರಗತಿಯ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ ಮಾಹೆಗಳ ಪೈಕಿ ಜಿಲ್ಲೆಯು ಒಂದರೆಡು ಬಾರಿ 5 ಮತ್ತು 6ನೇ ಸ್ಥಾನ ಗಳಿಸಿತ್ತು.

ಈಗ ಜಿಲ್ಲಾಧಿಕಾರಿಗಳು ಹಾಗೂ ಅಪರ ಜಿಲ್ಲಾಧಿಕಾರಿಗಳು ತೆಗೆದುಕೊಂಡ ಆಸಕ್ತಿ ಹಾಗೂ ಆಡಳಿತ ಯಂತ್ರಕ್ಕೆ ನೀಡಿದ ಚುರುಕುತನದಿಂದಾಗಿ ಎಲ್ಲ ಇಲಾಖೆಯ ಸಕಾಲ ಅರ್ಜಿಗಳ ವಿಲೇವಾರಿಯ ಪ್ರಗತಿಯಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯನ್ನು 3ನೇ ಸ್ಥಾನಕ್ಕೆ ತಂದು ನಿಲ್ಲಿಸಿದ್ದಾರೆ. ಈ ಮೂಲಕ ಜಿಲ್ಲಾಡಳಿತದ ಪಾರದರ್ಶಕ, ತ್ವರಿತ ಆಡಳಿತಕ್ಕೆ ಹಾಗೂ ಸರ್ಕಾರದ ಎಲ್ಲಾ ಯೋಜನೆಗಳ ದಕ್ಷ ಅನುಷ್ಠಾನಕ್ಕೆ ಕೈಗನ್ನಡಿಯಾಗಿದೆ.

ಸಕಾಲ ಯೋಜನೆಯಡಿ ಅರ್ಜಿಗಳ ವಿಲೇವಾರಿ ಕುರಿತಂತೆ ರಾಜ್ಯ ಸರ್ಕಾರ ಪ್ರತಿ ತಿಂಗಳು ರ್ಯಾಂಕಿಂಗ್ ಪಟ್ಟಿ ಪ್ರಕಟಿಸುತ್ತದೆ. ಜಿಲ್ಲೆಗಳ ಸಾಧನೆಗೆ ಅನುಗುಣವಾಗಿ ಸ್ಥಾನ ನೀಡಲಾಗುತ್ತದೆ. ಕಾಲ ಮಿತಿಯಲ್ಲಿ ಕಡತ ವಿಲೇವಾರಿಯಾಗಬೇಕು ಹಾಗೂ ನಾಗರೀಕರು ಸರ್ಕಾರಿ ಕಚೇರಿಗಳಿಗೆ ಅನಗತ್ಯವಾಗಿ ಅಲೆದಾಡುವುದನ್ನು ತಪ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಸಕಾಲ ಯೋಜನೆ ಜಾರಿಗೊಳಿಸಿದೆ. ಈ ಯೋಜನೆಯಡಿ ಸಾರ್ವಜನಿಕರಿಗೆ ನಿಗದಿತ ಅವಧಿಯೊಳಗೆ ಸರ್ಕಾರದ ಸೇವೆಗಳು ಲಭ್ಯವಾಗಲಿವೆ.

ಇಂದು, ನಾಳೆ, ಇನ್ನಿಲ್ಲ, ಹೇಳಿದ ದಿನ ತಪ್ಪೊಲ್ಲ! ಎಂಬ ಘೋಷವಾಕ್ಯದ ಸಕಾಲ ಯೋಜನೆಯಡಿ ರಾಜ್ಯದ 114 ಇಲಾಖೆ, ಸಂಸ್ಥೆಗಳ 1,446 ಸೇವೆಗಳನ್ನು ಕಾಲಮಿತಿಯಲ್ಲಿ ನೀಡಲಾಗುತ್ತಿದೆ. ಕಾಲಮಿತಿಯಲ್ಲಿ ಸೇವೆ ಸಿಗದೆ ಅರ್ಜಿದಾರ ಮೇಲ್ಮನವಿ ಸಲ್ಲಿಸಿದಲ್ಲಿ ಪ್ರತಿ ದಿನದ ವಿಳಂಬಕ್ಕೆ ಅಧಿಕಾರಿ-ಸಿಬ್ಬಂದಿಗಳಿಗೆ ದಂಡ ವಿಧಿಸಿ ಆ ಹಣ ಅರ್ಜಿದಾರರಿಗೆ ನೀಡುವ ಅಪರೂಪದ ಯೋಜನೆ ಇದಾಗಿದೆ.

ಕೋಟ್ ................

ಜಿಲ್ಲಾಡಳಿತದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗವು ಸಾರ್ವಜನಿಕರಿಗೆ ಸಮಯಕ್ಕೆ ಸರಿಯಾಗಿ ಸರ್ಕಾರಿ ಯೋಜನೆಗಳ ಅನುಷ್ಟಾನ ಹಾಗೂ ಸೇವೆ ನೀಡುವಲ್ಲಿ ಸಹಕಾರಿಯಾಗಿ ನಿಂತಿದೆ. ಈ ಅಭೂತ ಪೂರ್ವ ಸಾಧನೆಗೆ ಸಹಕಾರ ನೀಡಿದ ಹಾಗೂ ಅಹರ್ನಿಶಿ ಶ್ರಮಿಸಿದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಅಭಿನಂದನೆ ಸಲ್ಲಿಸುತ್ತೇನೆ.

- ಯಶವಂತ್ ವಿ.ಗುರುಕರ್ , ಜಿಲ್ಲಾಧಿಕಾರಿಗಳು, ಬೆಂ.ದಕ್ಷಿಣ ಜಿಲ್ಲೆ

ಕೋಟ್ .............

ಸಕಾಲ ಯೋಜನೆ ಅಡಿಯಲ್ಲಿ 114 ಇಲಾಖೆ - ಸಂಸ್ಥೆಗಳ 1446 ಸೇವೆಗಳನ್ನು ಒದಗಿಸಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗಿದೆ. ನಿಗದಿತ ಕಾಲಮಿತಿಯೊಳಗೆ ಅರ್ಜಿಗಳು ವಿಲೇವಾರಿಯಾಗುವುದರಿಂದ ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಪದೇ ಪದೇ ಅಲೆಯುವುದು ತಪ್ಪುತ್ತದೆ. ಜೊತೆಗೆ ಆಡಳಿತವೂ ಪಾರದರ್ಶಕವಾಗಿ ನಡೆಯಲು ಈ ಯೋಜನೆ ಸಹಕಾರಿಯಾಗಿದೆ. ಸಕಾಲ ಯೋಜನೆ ಅನುಷ್ಠಾನದಲ್ಲಿ ಡಿಸೆಂಬರ್ ಮಾಹೆಯಲ್ಲಿ ಜಿಲ್ಲೆ ರಾಜ್ಯದಲ್ಲಿಯೇ ಮೂರನೇ ಸ್ಥಾನ ಪಡೆದುಕೊಂಡಿರುವುದು ಸಂತಸ ತಂದಿದೆ.

- ಆರ್.ಚಂದ್ರಯ್ಯ, ಅಪರ ಜಿಲ್ಲಾಧಿಕಾರಿಗಳು ಮತ್ತು ಅಧ್ಯಕ್ಷರು, ಸಕಾಲ ಸಮನ್ವಯ ಸಮಿತಿ, ಬೆಂ.ದಕ್ಷಿಣ ಜಿಲ್ಲೆ.

2ಕೆಆರ್ ಎಂಎನ್ 1,2,3.ಜೆಪಿಜಿ

1.ಜಿಲ್ಲಾಧಿಕಾರಿಗಳ ಕಚೇರಿ

2.ಯಶವಂತ್ ವಿ.ಗುರುಕರ್ , ಜಿಲ್ಲಾಧಿಕಾರಿಗಳು, ಬೆಂ.ದಕ್ಷಿಣ ಜಿಲ್ಲೆ.

3.ಚಂದ್ರಯ್ಯ, ಅಪರ ಜಿಲ್ಲಾಧಿಕಾರಿಗಳು ಮತ್ತು ಅಧ್ಯಕ್ಷರು, ಸಕಾಲ ಸಮನ್ವಯ ಸಮಿತಿ, ಬೆಂ.ದಕ್ಷಿಣ ಜಿಲ್ಲೆ.

4.ಸಕಾಲ ಯೋಜನೆ ಲೋಗೊ