ಸಂಕಷ್ಟದಲ್ಲಿರುವ ರೈತರಿಗೆ ಎಲ್ಲರೂ ಒಟ್ಟಾಗಿ ನೆರವಾಗಬೇಕು. ಇಲಾಖೆಯ ಅಧಿಕಾರಿಗಳು ರೈತರೊಂದಿಗೆ ಉತ್ತಮ ಒಡನಾಟ ಹೊಂದಿ, ಸರ್ಕಾರದ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವ ಮೂಲಕ ರೈತರ ಪರವಾಗಿ ಕಾರ್ಯನಿರ್ವಹಿಸಬೇಕು ಎಂದರು. ಗೋವು ಮ್ಯಾಟ್‌ಗಳಿಂದ ಹಸುಗಳು ಆರಾಮದಾಯಕವಾಗಿ ಮಲಗಲು ಅನುಕೂಲವಾಗಲಿದ್ದು, ಅವುಗಳ ಆರೋಗ್ಯ ಹಾಗೂ ಹಾಲಿನ ಉತ್ಪಾದನೆ ಹೆಚ್ಚಲು ಸಹಕಾರಿಯಾಗಲಿದೆ. ಮ್ಯಾಟ್‌ಗಳ ಕೆಳಭಾಗದಲ್ಲಿರುವ ಗ್ರೂವ್‌ಗಳ ಮೂಲಕ ಮೂತ್ರ ಹಾಗೂ ತ್ಯಾಜ್ಯ ಹೊರಹೋಗುವ ವ್ಯವಸ್ಥೆಯಿದೆ. ಮೇವಿನ ಬೀಜ ಬಿತ್ತನೆ ಮಾಡಿದ ಬಳಿಕ ಮೊದಲ ಬೆಳೆಯನ್ನು ಕನಿಷ್ಠ 40ರಿಂದ 45 ದಿನಗಳವರೆಗೆ ಕಟಾವು ಮಾಡದೆ, ನಂತರ ಜಾನುವಾರುಗಳಿಗೆ ನೀಡಬೇಕು. ರೈತರು ಇಲಾಖೆಯ ಮಾರ್ಗದರ್ಶನ ಪಾಲಿಸಬೇಕು ಎಂದು ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ತೀವ್ರ ಬರಗಾಲದಿಂದ ಸಂಕಷ್ಟ ಎದುರಿಸುತ್ತಿರುವ ಕ್ಷೇತ್ರದ ರೈತರ ನೆರವಿಗೆ ರಾಜ್ಯ ಸರ್ಕಾರ ವಿಶೇಷ ಗಮನಹರಿಸಿ ಅಗತ್ಯ ಸಹಾಯ ಒದಗಿಸಬೇಕು ಎಂದು ಶಾಸಕ ಸಿಮೆಂಟ್ ಮಂಜು ಒತ್ತಾಯಿಸಿದರು. ಪಟ್ಟಣದ ಪಶುವೈದ್ಯಕೀಯ ಆಸ್ಪತ್ರೆ ಆವರಣದಲ್ಲಿ ಪಶುವೈದ್ಯಕೀಯ ಇಲಾಖೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸೌಲಭ್ಯಗಳನ್ನು ವಿತರಿಸಿ ಮಾತನಾಡಿದ ಅವರು, ತಾಲೂಕನ್ನು ತೀವ್ರ ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿರುವುದು ಸ್ವಾಗತಾರ್ಹ. ಈ ಕುರಿತು ಮುಖ್ಯಮಂತ್ರಿಗಳು ಹಾಗೂ ಕೃಷಿ ಸಚಿವರ ಗಮನ ಸೆಳೆಯಲಾಗಿದೆ. ಸಂಕಷ್ಟದಲ್ಲಿರುವ ರೈತರಿಗೆ ಎಲ್ಲರೂ ಒಟ್ಟಾಗಿ ನೆರವಾಗಬೇಕು. ಇಲಾಖೆಯ ಅಧಿಕಾರಿಗಳು ರೈತರೊಂದಿಗೆ ಉತ್ತಮ ಒಡನಾಟ ಹೊಂದಿ, ಸರ್ಕಾರದ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವ ಮೂಲಕ ರೈತರ ಪರವಾಗಿ ಕಾರ್ಯನಿರ್ವಹಿಸಬೇಕು ಎಂದರು. ಗೋವು ಮ್ಯಾಟ್‌ಗಳಿಂದ ಹಸುಗಳು ಆರಾಮದಾಯಕವಾಗಿ ಮಲಗಲು ಅನುಕೂಲವಾಗಲಿದ್ದು, ಅವುಗಳ ಆರೋಗ್ಯ ಹಾಗೂ ಹಾಲಿನ ಉತ್ಪಾದನೆ ಹೆಚ್ಚಲು ಸಹಕಾರಿಯಾಗಲಿದೆ. ಮ್ಯಾಟ್‌ಗಳ ಕೆಳಭಾಗದಲ್ಲಿರುವ ಗ್ರೂವ್‌ಗಳ ಮೂಲಕ ಮೂತ್ರ ಹಾಗೂ ತ್ಯಾಜ್ಯ ಹೊರಹೋಗುವ ವ್ಯವಸ್ಥೆಯಿದೆ. ಮೇವಿನ ಬೀಜ ಬಿತ್ತನೆ ಮಾಡಿದ ಬಳಿಕ ಮೊದಲ ಬೆಳೆಯನ್ನು ಕನಿಷ್ಠ 40ರಿಂದ 45 ದಿನಗಳವರೆಗೆ ಕಟಾವು ಮಾಡದೆ, ನಂತರ ಜಾನುವಾರುಗಳಿಗೆ ನೀಡಬೇಕು. ರೈತರು ಇಲಾಖೆಯ ಮಾರ್ಗದರ್ಶನ ಪಾಲಿಸಬೇಕು ಎಂದು ಸಲಹೆ ನೀಡಿದರು.ಪಶುವೈದ್ಯಕೀಯ ಇಲಾಖೆಯ ಡಾ. ಸಂತೋಷ್ ಮಾತನಾಡಿ, ಒಟ್ಟು 10 ಫಲಾನುಭವಿಗಳಿಗೆ ತಲಾ ಎರಡು ಗೋವು ಮ್ಯಾಟ್‌ಗಳನ್ನು ವಿತರಿಸಲಾಗುತ್ತಿದೆ. ಇದರ ವೆಚ್ಚದಲ್ಲಿ ಶೇ.50ರಷ್ಟು ಸರ್ಕಾರದ ಸಹಾಯಧನವಿದ್ದು, ಉಳಿದ ಮೊತ್ತವನ್ನು ಫಲಾನುಭವಿಗಳು ಭರಿಸಬೇಕು. ಮ್ಯಾಟ್‌ಗಳ ಕೆಳಭಾಗದಲ್ಲಿ ನೀರು ಹಾಗೂ ಕೆಸರು ಹೊರಹೋಗುವ ವ್ಯವಸ್ಥೆಯಿದ್ದು, ಇಂಟರ್‌ಲಾಕಿಂಗ್ ಮಾದರಿಯಲ್ಲಿ ಅಳವಡಿಸುವುದರಿಂದ ಜಾರುವುದಿಲ್ಲ. ಅಳವಡಿಸುವ ವಿಧಾನ ತಿಳಿಯದವರು ಇಲಾಖೆಯ ಸಿಬ್ಬಂದಿಯನ್ನು ಸಂಪರ್ಕಿಸಬಹುದು ಎಂದರು. ಎಸ್‌ಡಿಆರ್‌ಎಫ್ ಅನುದಾನದಡಿ ತಾಲೂಕಿಗೆ 669 ಮೇವಿನ ಜೋಳದ ಬೀಜದ ಕಿರುಪೊಟ್ಟಣಗಳು ಸರಬರಾಜಾಗಿವೆ. ಪ್ರತಿ ಪೊಟ್ಟಣ ಐದು ಕೆ.ಜಿ. ತೂಕ ಹೊಂದಿದ್ದು, ಚೆಲ್ಲುವ ಪದ್ಧತಿಯಲ್ಲಿ ಬಿತ್ತನೆ ಮಾಡಿದರೆ 10 ಗುಂಟೆಗೆ ಒಂದು ಪೊಟ್ಟಣ ಹಾಗೂ ಸಾಲು ಪದ್ಧತಿಯಲ್ಲಿ ಅರ್ಧ ಎಕರೆಗೆ ಒಂದು ಪೊಟ್ಟಣ ಸಾಕಾಗುತ್ತದೆ. ತಾಲೂಕಿನ 16 ಪಶುವೈದ್ಯಕೀಯ ಆಸ್ಪತ್ರೆ ಹಾಗೂ ಚಿಕಿತ್ಸಾ ಕೇಂದ್ರಗಳಿಗೆ ಬೀಜಗಳನ್ನು ಹಂಚಿಕೆ ಮಾಡಲಾಗಿದೆ. ರೈತರು ಆಧಾರ್‌ ಕಾರ್ಡ್‌, ಜಮೀನಿನ ಪಹಣಿ ಹಾಗೂ ಫ್ರೂಟ್ಸ್ ಐಡಿ ನೀಡಿ ಸಮೀಪದ ಕೇಂದ್ರಗಳಲ್ಲಿ ಉಚಿತವಾಗಿ ಪಡೆಯಬಹುದು. ಮುಂದಿನ 15ರಿಂದ 20 ದಿನಗಳಲ್ಲಿ ಮತ್ತೊಂದು ಹಂತದ ಬೀಜಗಳು ಸರಬರಾಜಾಗಲಿವೆ ಎಂದು ತಿಳಿಸಿದರು.ಬಿತ್ತನೆ ಮಾಡಿದ ಎರಡರಿಂದ ಎರಡೂವರೆ ತಿಂಗಳಲ್ಲಿ ಮೊದಲ ಕಟಾವು ಮಾಡಬಹುದು. ನಂತರ 30ರಿಂದ 40 ದಿನಗಳ ಅಂತರದಲ್ಲಿ ಕಟಾವು ಪಡೆಯಲು ಸಾಧ್ಯವಿದೆ. ಆದರೆ ಜೋಳದ ಮೇವು ಎಳೆಯದಾಗಿರುವಾಗ ಜಾನುವಾರುಗಳಿಗೆ ನೀಡಬಾರದು. ಅದರಲ್ಲಿರುವ ಸೈನೈಡ್ ಅಂಶದಿಂದ ವಿಷಬಾಧೆ ಉಂಟಾಗಿ ಪ್ರಾಣಾಪಾಯ ಸಂಭವಿಸುವ ಸಾಧ್ಯತೆಯಿದೆ. ಆದ್ದರಿಂದ ತೆನೆ ಬರುವ ಹಂತದಲ್ಲಿ ಕಟಾವು ಮಾಡಿ ನೀಡಬೇಕು ಎಂದು ಎಚ್ಚರಿಸಿದರು.ಇದೇ ಸಂದರ್ಭದಲ್ಲಿ ಹೈನುಗಾರಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ರೈತರಿಗೆ ಗೋವು ಮ್ಯಾಟ್ ಹಾಗೂ ಮೇವಿನ ಜೋಳದ ಬೀಜ ವಿತರಿಸಲಾಯಿತು.ಈ ಸಂದರ್ಭದಲ್ಲಿ ರಮೇಶಣ್ಣ, ಮಮತಾ, ಅಗ್ನಿ ಸೋಮಶೇಖರ್, ವೆಂಕಟೇಶ್, ಪಶುವೈದ್ಯಕೀಯ ಇಲಾಖೆಯ ಸಿಬ್ಬಂದಿ ಹಾಗೂ ರೈತರು ಉಪಸ್ಥಿತರಿದ್ದರು.