ಸಾರಾಂಶ
ಆಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸಕಲೇಶಪುರದಲ್ಲಿ ಹಬ್ಬದ ವಾತಾವಾರಣ ನಿರ್ಮಾಣವಾಗಿತ್ತು. ಪಟ್ಟಣದ ಬಹುತೇಕ ಮನೆಗಳ ಮುಂದೆ ರಂಗೋಲಿ ಹಾಕಿ,ತಳಿರುತೋರಣ ಹಾಗೂ ಬಂಟಿಗ್ಸ್‌ಗಳಿಂದ ಸಿಂಗರಿಸಲಾಗಿದ್ದರೆ, ಪಟ್ಟಣದ ಗುರುವೇಗೌಡ ಕಲ್ಯಾಣ ಮಂಟಪದ ಅವರಣದಲ್ಲಿ ಬಜರಂಗದಳ, ವಿಶ್ವಹಿಂದೂ ಪರಿಷತ್ ಹಾಗೂ ದುರ್ಗಾ ವಾಹಿನಿ ವತಿಯಿಂದ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕನ್ನಡಪ್ರಭ ವಾರ್ತೆ ಸಕಲೇಶಪುರ
ಆಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಹಬ್ಬದ ವಾತಾವಾರಣ ನಿರ್ಮಾಣವಾಗಿತ್ತು.ಪಟ್ಟಣದ ಬಹುತೇಕ ಮನೆಗಳ ಮುಂದೆ ರಂಗೋಲಿ ಹಾಕಿ,ತಳಿರುತೋರಣ ಹಾಗೂ ಬಂಟಿಗ್ಸ್‌ಗಳಿಂದ ಸಿಂಗರಿಸಲಾಗಿದ್ದರೆ, ಪಟ್ಟಣದ ಗುರುವೇಗೌಡ ಕಲ್ಯಾಣ ಮಂಟಪದ ಅವರಣದಲ್ಲಿ ಬಜರಂಗದಳ, ವಿಶ್ವಹಿಂದೂ ಪರಿಷತ್ ಹಾಗೂ ದುರ್ಗಾ ವಾಹಿನಿ ವತಿಯಿಂದ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಬಾಲರಾಮ ಪ್ರಾಣಪ್ರತಿಷ್ಠೆಪಾನೆ ಕಾರ್ಯಕ್ರಮವನ್ನು ಟಿವಿ ಮೂಲಕ ನೇರಪ್ರಸಾರದ ವ್ಯವಸ್ಥೆಮಾಡಲಾಗಿತ್ತು. ಪಟ್ಟಣದ ಹಳೇಬಸ್ ನಿಲ್ದಾಣದಲ್ಲಿ ಸಮಾನ ಮನಸ್ಕರ ವೇದಿಕೆ ವತಿಯಿಂದ ಅನ್ನದಾಸೋಹ ವ್ಯವಸ್ಥೆ ಏರ್ಪಡಿಸಲಾಗಿತ್ತು. ಪಟ್ಟಣದ ಹಳೇಸಂತವೇರಿ ನಾಗರೀಕರ ವೇದಿಕೆವತಿಯಿಂದ ಬಡಾವಣೆಯ ಮುಖ್ಯ ರಸ್ತೆಯನ್ನು ರಂಗೋಲಿಯಿಂದ ಸಿಂಗರಿಸಿ, ಶನಿಮಹಾದೇವರ ದೇವಾಲಯದಿಂದ ರಾಮರಥವನ್ನು ಬಡಾವಣೆಯ ವೃತ್ತದವರಗೆ ಎಳೆದು ತಂದ ನಂತರ ಧಾರ್ಮಿಕ ಕಾರ್ಯಕ್ರಮ ನೆರವೇರಿಸಿದ ನಂತರ ಸಭಾ ಕಾರ್ಯಕ್ರಮ ನಡೆಸಲಾಯಿತು. ಮಹಿಳೆಯರಿಗೆ ಮಡಿಲಕ್ಕಿ ನೀಡಿ ಗೌರವಿಸಲಾಯಿತು. ನಂತರ ಅನ್ನಸಂತರ್ಪಣೆ ವಿಜ್ರಂಭಣೆಯಿಂದ ನಡೆಯಿತು.ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಬಾಳೆಗದ್ದೆ ಬಡಾವಣೆಯ ಗುಹೆಕಲ್ಲಮ್ಮ ದೇವಸ್ಥಾನ ಟ್ರಸ್ಟ್ ಹಾಗೂ ರಾಮಲಲ್ ಟ್ರಸ್ಟ್ ಹಮ್ಮಿಕೊಂಡಿದ್ದ ಸಭಾಕಾರ್ಯಕ್ರಮದಲ್ಲಿ ವಾಗ್ಮಿ ಹಾರಿಕಮಂಜುನಾಥ್,ಶಾಸಕ ಸೀಮೆಂಟ್ ಮಂಜು ಮಾತನಾಡಿದರು. ಪ್ರಾಣಪ್ರತಿಷ್ಠೆ ವೇಳೆ ಪಟ್ಟಣದ ಹಲವೇಡೆ ಜೈಶ್ರೀರಾಮ ಘೋಷಣೆ ಮುಗಿಲು ಮುಟ್ಟಿತ್ತು. ಪಟ್ಟಣದ ಸಕಲೇಶ್ವರಸ್ವಾಮಿ, ಹೊಳೆಮಲ್ಲೇಶ್ವರಸ್ವಾಮಿ ದೇವಾಲಯಗಳು ಸೇರಿದಂತೆ ತಾಲೂಕಿನ ಹಲವಾರು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಕೈಕಾರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು.
ಬೇಲೂರಲ್ಲಿ ರಾಮತಾರಕ ಹೋಮಕನ್ನಡಪ್ರಭ ವಾರ್ತೆ ಬೇಲೂರುಅಯೋದ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆ ಅಂಗವಾಗಿ ೧೩ ಸಾವಿರ ರಾಮತಾರಕ ಜಪದೊಂದಿಗೆ ಹೋಮ ನಡೆಸಲಾಯಿತು. ಪಟ್ಟಣದ ಶೃಂಗೇರಿ ಶಾರದಾಂಬ ಮಠದ ಮುಂಭಾಗದ ಬಯಲು ರಂಗಮಂದಿರದಲ್ಲಿ ಅಯೋದ್ಯೆ ಶ್ರೀರಾಮ ಪ್ರಭುವಿನ ರಾಮಮಂದಿರದ ರಾಮಲಲ್ಲಾ ಪ್ರತಿಷ್ಠಾಪನೆ ಅಂಗವಾಗಿ ಸಮಸ್ತ ಭಕ್ತರ ಸಹಕಾರದೊಂದಿಗೆ ಹಾಗೂ ಬ್ರಾಹ್ಮಣ ಮಹಾಸಭಾದೊಂದಿಗೆ ಬೆಳಿಗ್ಗೆಯಿಂದ ಶ್ರೀರಾಮಮೂರ್ತಿಗೆ ವಿಶೇಷ ಪೂಜೆ ಅಭಿಷೇಕ ರಾಮತಾರಕ ಹೋಮವನ್ನು ಪ್ರಧಾನ ಅರ್ಚಕರೊಂದಿಗೆ ವೇದಬ್ರಹ್ಮ ಶ್ರೀ ಮಂಜುನಾಥ್ ಅವರ ನೇತೃತ್ವದಲ್ಲಿ ೧೩ ಸಾವಿರ ರಾಮನಾಮ ಹಾಗೂ ರಾಮತಾರಕ ಹೋಮ ನಡೆಸಿ ಪೂರ್ಣಾವತಿ ನಡೆಸಲಾಯಿತು. ಇದೇ ವೇಳೆ ಬೆಳಗ್ಗೆಯಿಂದ ಪೂಜಾ ಕೈಂಕರ್ಯದಲ್ಲಿ ಶಾಸಕ ಸುರೇಶ್ ದಂಪತಿಗಳು ಸಂಪೂರ್ಣವಾಗಿ ಪೂಜಾ ವಿಧಿವಿಧಾನಗಳಲ್ಲಿ ತೊಡಗಿಸಿಕೊಂಡರು. ಶಾಸಕ ಸುರೇಶ್ ಮಾತನಾಡಿ, ಇಡೀ ದೇಶವೇ ೫೦೦ ವರ್ಷಗಳ ಕನಸನ್ನು ಇಂದು ಸಾಕಾರಗೊಳ್ಳುವ ಈ ಒಂದು ಸುವರ್ಣಾಕ್ಷರದಲ್ಲಿ ಬರೆಯುವ ಈ ದಿನವನ್ನು ನಾವೆಲ್ಲರೂ ಸೇರಿ ಭಕ್ತಿ ಭಾವದಿಂದ ಇಂದು ಶ್ರೀರಾಮನನ್ನು ಬರಮಾಡಿಕೊಳ್ಳುವ ದಿನದಂದು ಬೇಲೂರಿನ ಎಲ್ಲಾ ದೇವಾಲಯದಲ್ಲಿ ಸಹ ಇಂದು ಅಭಿಷೇಕ ಪೂಜೆ ಅನ್ನಸಂತರ್ಪಣೆ ಕಾರ್ಯಕ್ರಮ ಮಾಡುವ ಮೂಲಕ ಬಾಲರಾಮನನ್ನು ವಿಶೇಷವಾಗಿ ಇಂದು ಬರಮಾಡಿಕೊಳ್ಳುತ್ತಿದ್ದೇವೆ ಎಂದರು. ಬ್ರಾಹ್ಮಣ ಮಹಾಸಭಾದ ನಿರ್ದೇಶಕ ವಿಜಯಕೇಶವ, ಶೃಂಗೇರಿ ಮಠದ ಅಧ್ಯಕ್ಷ ಅರ್ ಸುಬ್ರಹ್ಮಣ್ಯ, ಶ್ರೀಹರಿ, ಕೋಟೆ ಶ್ರೀನಿವಾಸ್ ತೊ.ಚ ನರಸಿಂಹಮೂರ್ತಿ, ಅನಂತ ಸುಬ್ಬರಾವ್ ಹಾಜರಿದ್ದರು. ಹೋಮದ ನಂತರ ಭಕ್ತಾದಿಗಳಿಗೆ ಪ್ರಸಾದವನ್ನು ವಿತರಿಸಲಾಯಿತು.ಅಯೋದ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆ ಅಂಗವಾಗಿ ೧೩ ಸಾವಿರ ರಾಮತಾರಕ ಜಪದೊಂದಿಗೆ ಹೋಮ ನಡೆಸಲಾಯಿತು.ಪಟ್ಟಣದ ಹಳೆಸಂತವೇರಿ ಬಡಾವಣೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಸೀಮೆಂಟ್ ಮಂಜು.