ಸಕಾನ್‌ ನಕಾನ್‌: ಸ್ವರ್ಣ ಗೆದ್ದ ಡಾ.ಬಾಬು ನಾಗೂರ

| Published : Mar 08 2024, 01:48 AM IST

ಸಕಾನ್‌ ನಕಾನ್‌: ಸ್ವರ್ಣ ಗೆದ್ದ ಡಾ.ಬಾಬು ನಾಗೂರ
Share this Article
  • FB
  • TW
  • Linkdin
  • Email

ಸಾರಾಂಶ

ವಿಜಯಪುರ: ಥಾಯ್ಲೆಂಡ್‌ನಲ್ಲಿ ನಡೆದ 28ನೇ ಥಾಯ್ಲೆಂಡ್‌ ಮಾಸ್ಟರ್ಸ್ ಅಥ್ಲೆಟಿಕ್ ಚಾಂಪಿಯನ್‌ಶಿಪ್ ಸಕಾನ್ ನಕಾನ್ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ವಿಜಯಪುರದ ಖ್ಯಾತ ವೈದ್ಯ ಡಾ.ಕೆ.ಬಿ.ನಾಗೂರ (ಬಾಬು) ಪ್ರಥಮ ಸ್ಥಾನ ಪಡೆಯುವ ಮೂಲಕ ಸುವರ್ಣ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಫೆ. 22 ರಿಂದ 25ರ ವರೆಗೆ ಮೂರು ದಿನಗಳ ಕಾಲ ನಡೆದ 65ರಿಂದ 69 ನೇ ವಯೋಮಿತಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ 4*100 ಮೀಟರ್ಸ್ ಮತ್ತು 4*400 ಮೀಟರ್ಸ್ ರಿಲೆಯಲ್ಲಿ ಡಾ.ಕೆ.ಬಿ.ನಾಗೂರ(ಬಾಬು) ಚಿನ್ನದ ಪದಕ ಗೆದ್ದು ಜಿಲ್ಲೆಯ, ರಾಜ್ಯ ದೇಶಕ್ಕೆ ಕೀರ್ತಿ ತಂದಿದ್ದಾರೆ.

ವಿಜಯಪುರ: ಥಾಯ್ಲೆಂಡ್‌ನಲ್ಲಿ ನಡೆದ 28ನೇ ಥಾಯ್ಲೆಂಡ್‌ ಮಾಸ್ಟರ್ಸ್ ಅಥ್ಲೆಟಿಕ್ ಚಾಂಪಿಯನ್‌ಶಿಪ್ ಸಕಾನ್ ನಕಾನ್ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ವಿಜಯಪುರದ ಖ್ಯಾತ ವೈದ್ಯ ಡಾ.ಕೆ.ಬಿ.ನಾಗೂರ (ಬಾಬು) ಪ್ರಥಮ ಸ್ಥಾನ ಪಡೆಯುವ ಮೂಲಕ ಸುವರ್ಣ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಫೆ. 22 ರಿಂದ 25ರ ವರೆಗೆ ಮೂರು ದಿನಗಳ ಕಾಲ ನಡೆದ 65ರಿಂದ 69 ನೇ ವಯೋಮಿತಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ 4*100 ಮೀಟರ್ಸ್ ಮತ್ತು 4*400 ಮೀಟರ್ಸ್ ರಿಲೆಯಲ್ಲಿ ಡಾ.ಕೆ.ಬಿ.ನಾಗೂರ(ಬಾಬು) ಚಿನ್ನದ ಪದಕ ಗೆದ್ದು ಜಿಲ್ಲೆಯ, ರಾಜ್ಯ ದೇಶಕ್ಕೆ ಕೀರ್ತಿ ತಂದಿದ್ದಾರೆ. ವಿದೇಶದಲ್ಲಿ ಸಾಧನೆ ಮಾಡಿದ ಡಾ.ನಾಗೂರಗೆ ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ ಸೇರಿದಂತೆ ಆಶ್ರಮದ ಸ್ವಾಮೀಜಿಗಳು ಹಾಗೂ ನಾಗೂರ ಎಜುಕೇಶನ್ ಕ್ಯಾಂಪಸ್ ನ ಎಲ್ಲ ಕಾಲೇಜುಗಳ ಪ್ರಾಚಾರ್ಯರು, ಶಿವಯೋಗೇಶ್ವರ ಶಿಕ್ಷಣ ಸಂಸ್ಥೆಯ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಮತ್ತು ಎಲ್ಲ ವಿದ್ಯಾರ್ಥಿಗಳಿಂದ ಹಾಗೂ ಗೆಳೆಯರ ಬಳಗದಿಂದ ನಾಗೂರ ಎಜ್ಯುಕೇಶನ್ ಕ್ಯಾಂಪಸ್ ನ ಶಿವಾಲಯ ಗಾರ್ಡನ್ ನಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಶಿವಯೋಗೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಸುರೇಶ ಲೋಣಿ, ರಾಜು ಮಗಿಮಠ, ಅಶೋಕ ಮೈಲಾಶಂಕರ, ರಘು ಬಿರಾದಾರ, ಎಸ್.ಎಸ್.ಕೋರೆ ಸೇರಿದಂತೆ ನಾಗೂರ ಕಾಲೇಜಿನ ಸಮಸ್ತ ಬಳಗ ಇದ್ದರು.