ಪೌರಕಾರ್ಮಿಕರ ವೇತನ ವಿಚಾರ: ಬಂಟ್ವಾಳ ಪುರಸಭೆ ವಿಶೇಷ ಸಾಮಾನ್ಯ ಸಭೆ

| Published : Jun 28 2025, 12:18 AM IST

ಪೌರಕಾರ್ಮಿಕರ ವೇತನ ವಿಚಾರ: ಬಂಟ್ವಾಳ ಪುರಸಭೆ ವಿಶೇಷ ಸಾಮಾನ್ಯ ಸಭೆ
Share this Article
  • FB
  • TW
  • Linkdin
  • Email

ಸಾರಾಂಶ

ಪೌರ ಕಾರ್ಮಿಕರ ವೇತನ ವಿಚಾರಕ್ಕೆ ಸಂಬಂಧಿಸಿ ಬಂಟ್ವಾಳ ಪುರಸಭೆಯ ವಿಶೇಷ ಸಾಮಾನ್ಯ ಸಭೆಯು ಅಧ್ಯಕ್ಷ ವಾಸು ಪೂಜಾರಿ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಿತು.

ಕನ್ನಡಪ್ರಭ ವಾರ್ತೆ ಬಂಟ್ವಾಳಪೌರ ಕಾರ್ಮಿಕರ ವೇತನ ವಿಚಾರಕ್ಕೆ ಸಂಬಂಧಿಸಿ ಬಂಟ್ವಾಳ ಪುರಸಭೆಯ ವಿಶೇಷ ಸಾಮಾನ್ಯ ಸಭೆಯು ಅಧ್ಯಕ್ಷ ವಾಸು ಪೂಜಾರಿ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಿತು.

ಪುರಸಭೆಯ ಪೌರಕಾರ್ಮಿಕರ ವಿಶೇಷ ನೇಮಕಾತಿ ಹಾಗೂ ವೇತನ ಪಾವತಿ ವಿಚಾರದಲ್ಲಿ ಸರ್ಕಾರದ ಸುತ್ತೋಲೆಯ ಕ್ರಮ ವಹಿಸುವ ಬಗ್ಗೆ ಪುರಸಭೆಯ ಮುಖ್ಯಾಧಿಕಾರಿ ವಿಶೇಷ ಸಭೆಯ ಮುಂದಿಟ್ಟ ವೇಳೆ, ಪೌರ ಕಾರ್ಮಿಕರ ವೇತನ ವಿಚಾರ ಸಂಬಂಧಿಸಿದಂತೆ ೨೦೨೪ ರ ಇಸವಿಯಲ್ಲಿ ಸರ್ಕಾರ ಕಳುಹಿಸಿದ್ದ ಸುತ್ತೋಲೆಯನ್ನು ಈವರೆಗೂ ಯಾಕೆ ಸಭೆಯಲ್ಲಿ ಇಟ್ಟಿಲ್ಲ ಎಂದು ವಿಪಕ್ಷ ನಾಯಕ, ಹಿರಿಯ ಸದಸ್ಯ ಗೋವಿಂದ ಪ್ರಭು ಪ್ರಶ್ನಿಸಿದರು. ಇದಕ್ಕೆ ಆಡಳಿತ ಪಕ್ಷದ ಸದಸ್ಯ ಮಹಮ್ಮದ್‌ ಶರೀಫ್ ಧ್ವನಿ ಗೂಡಿಸಿದರು.

ಒಂದು ಹಂತದಲ್ಲಿ ಚರ್ಚೆ ಮುಂದುವರಿದು, ಪುರಸಭೆಯ ನಿಧಿಯಿಂದ ಹಣ ನೀಡುವುದಕ್ಕೆ ಗೋವಿಂದ ಪ್ರಭು ಆಕ್ಷೇಪ ವ್ಯಕ್ತಪಡಿಸಿ, ಪೌರಕಾರ್ಮಿಕರು ಸರ್ಕಾರಿ ಉದ್ಯೋಗಿಯಾಗಿರುವುದರಿಂದ ಪುರಸಭೆ ನಿಧಿಯಿಂದ ಹಣ ನೀಡುವುದಕ್ಕೆ ನಮ್ಮ ವಿರೋಧವಿದೆ ಎಂದರು.ಸರ್ಕಾರದ ಸುತ್ತೋಲೆಯನ್ನು ಸಭೆಯ ಮುಂದಿಡುವುದು ಮತ್ತು ಪಾಲನೆ ಮಾಡುವುದು ನನ್ನ ಕರ್ತವ್ಯವಾಗಿದೆ ಎಂದು ಪುರಸಭಾ ಮುಖ್ಯಾಧಿಕಾರಿ ಅಹಮ್ಮದ್ ನಜೀರ್ ತಿಳಿಸಿದರು.ಸಂಬಳ ಕೊಡುವ ವಿಚಾರದಲ್ಲಿ ನಮ್ಮ ವಿರೋಧವಿಲ್ಲ. ಆದರೆ ಪೌರಕಾರ್ಮಿಕರು ಪುರಸಭೆ ನೀಡಿದ ಜವಾಬ್ದಾರಿಯನ್ನು ಎಷ್ಟು ಪಾಲಿಸಿದ್ದಾರೆ. ಕಸದ ವಿಲೇವಾರಿ ಮಾಡದೆ ಪ್ರತಿ ವಾರ್ಡ್ ಗಳಲ್ಲಿ ಕಸದ ರಾಶಿ ಬಿದ್ದಿದೆ ಎಂದು ವಿಚಾರ ಪ್ರಸ್ತಾಪಿಸಿದರು. ಪೌರಕಾರ್ಮಿಕರ ಸಂಬಳವನ್ನು ಕಾನೂನು ಪ್ರಕಾರ ನೀಡುವಂತೆ ಈಗಾಗಲೇ ಮುಖ್ಯಾಧಿಕಾರಿಗೆ ತಿಳಿಸಿದ್ದೆ.ಆದರೆ ಪುರಸಭಾ ನಿಧಿಯಿಂದ ನೀಡುವುದಕ್ಕೆ ವಿರೋಧವಿದೆ ಎಂದು ಮುಖ್ಯಾಧಿಕಾರಿ ಹೇಳಿದ್ದಕ್ಕೆ ನಾನು ವಿಶೇಷ ಸಭೆ ಕರೆಯಲು ಸೂಚಿಸಿದ್ದೇನೆ ಎಂದು ಪುರಸಭಾ ಅಧ್ಯಕ್ಷ ವಾಸು ಪೂಜಾರಿ ತಿಳಿಸಿದರು.

ಪುರಸಭಾ ಸದಸ್ಯರಿಗೆ ಅನುದಾನವೇ ಇಲ್ಲ ಈ ಬಗ್ಗೆ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಸದಸ್ಯ ಸಿದ್ದೀಕ್ ಅಧ್ಯಕ್ಷರನ್ನು ಕೇಳಿದರು. ಪಾಣೆಮಂಗಳೂರು ನಂದಾವರ ಶಾರದಾ ಹೈಸ್ಕೂಲ್ ಬಳಿ ಸಾರ್ವಜನಿಕರು ಕಸ ಬಿಸಾಡಿ ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ನಡೆದಾಡಲು ಕಷ್ಟವಾಗುತ್ತಿದ್ದು, ಇಲ್ಲಿ ತಡೆ ಬೇಲಿ ನಿರ್ಮಿಸುವ ಬಗ್ಗೆ ನಿರ್ಣಯ ಮಾರ್ಪಾಟು ಮಾಡಿ ಸಿಮೆಂಟ್ ಪೈನ್ ಅಳವಡಿಸಿ ಚರಂಡಿ ನಿರ್ಮಿಸುವ ಬಗ್ಗೆ. ನಿರ್ಣಯ ಕೈಗೊಳ್ಳುವಂತೆ ಸಿದ್ದೀಕ್ ತಿಳಿಸಿದರು.ಉಪಾಧ್ಯಕ್ಷ ಮೊನಿಶ್ ಆಲಿ ಉಪಸ್ಥಿತರಿದ್ದರು.