ಶೀಘ್ರದಲ್ಲೇ ನೀರುಗಂಟಿಗಳ ವೇತನ ಬಿಡುಗಡೆ: ಎಸ್ಸೆಸ್ಸೆಂ

| Published : Jul 29 2024, 12:45 AM IST

ಶೀಘ್ರದಲ್ಲೇ ನೀರುಗಂಟಿಗಳ ವೇತನ ಬಿಡುಗಡೆ: ಎಸ್ಸೆಸ್ಸೆಂ
Share this Article
  • FB
  • TW
  • Linkdin
  • Email

ಸಾರಾಂಶ

ಬಾಕಿ ಇರುವ ದಿನಗೂಲಿ ನೀರುಗಂಟಿ ಸಿಬ್ಬಂದಿ ವೇತನ ಬಿಡುಗಡೆಗೆ ಸರ್ಕಾರಕ್ಕೆ ತಿಳಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದ್ದಾರೆ.

ದಾವಣಗೆರೆ: ಬಾಕಿ ಇರುವ ದಿನಗೂಲಿ ನೀರುಗಂಟಿ ಸಿಬ್ಬಂದಿ ವೇತನ ಬಿಡುಗಡೆಗೆ ಸರ್ಕಾರಕ್ಕೆ ತಿಳಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದರು.

ದಿನಗೂಲಿ ನೀರುಗಂಟಿ ಸಿಬ್ಬಂದಿಗೆ ಕಳೆದ ಐದಾರು ತಿಂಗಳುಗಳಿಂದ ವೇತನ ನೀಡಿಲ್ಲ. ಇದರಿಂದಾಗಿ ಸುಮಾರು 800ಕ್ಕೂ ಅಧಿಕ ನೀರುಗಂಟಿಗಳು ಜೀವನ ನಡೆಸುವುದೇ ಕಷ್ಟವಾಗಿದೆ. ಹಲವು ಭಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಸಿಬ್ಬಂದಿ ಜಿಲ್ಲಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ನಿವಾಸದ ಆವರಣದಲ್ಲಿ ಅಳಲು ತೋಡಿಕೊಂಡರು.

ಈ ವೇಳೆ ಸಚಿವರು ನೊಂದ ನೀರುಗಂಟಿಗಳಿಗೆ ಅಭಯ ನೀಡಿದರು. ಈಗಾಗಲೇ ಈ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ. ದಿನಗೂಲಿ ನೀರುಗಂಟಿ ಸಿಬ್ಬಂದಿಗೆ ವೇತನ ಬಿಡುಗಡೆಗೊಳಿಸುವಂತೆ ಸರ್ಕಾರಕ್ಕೆ ತಿಳಿಸಲಾಗಿದೆ. ಜಲಸಂಪನ್ಮೂಲ ಸಚಿವರಿಗೂ ಮಾಹಿತಿ ನೀಡಲಾಗಿದೆ. ಶೀಘ್ರದಲ್ಲೆ ವೇತನ ಬಿಡುಗಡೆಯಾಗಲಿದೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ದಿನಗೂಲಿ ನೀರುಗಂಟಿ ಸಿಬ್ಬಂದಿ ಇದ್ದರು.

- - - -28ಕೆಡಿವಿಜಿ46ಃ: