ಸಾರಾಂಶ
ಕಲಬುರಗಿ ನಗರದ ಹಲವೆಡೆ ಸಾರ್ವಜನಿಕ ಶೌಚಾಲಯದಲ್ಲಿ ಗುಟ್ಕಾ, ಸಿಗರೇಟ್ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು, ಶೌಚಾಲಯದ ಗುತ್ತಿಗೆ ಒಪ್ಪಂದವನ್ನು ರದ್ದುಪಡಿಸಬೇಕೆಂದು ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಚಿನ್ ಶಿರವಾಳ ಶಿಫಾರಸು ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಕಲಬುರಗಿ
ನಗರದ ಹಲವೆಡೆ ಸಾರ್ವಜನಿಕ ಶೌಚಾಲಯದಲ್ಲಿ ಗುಟ್ಕಾ, ಸಿಗರೇಟ್ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು, ಶೌಚಾಲಯದ ಗುತ್ತಿಗೆ ಒಪ್ಪಂದವನ್ನು ರದ್ದುಪಡಿಸಬೇಕೆಂದು ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಚಿನ್ ಶಿರವಾಳ ಶಿಫಾರಸು ಮಾಡಿದ್ದಾರೆ.ನಗರದ ವಿವಿಧ ಭಾಗಗಳಲ್ಲಿ ಇರುವ ಸಾರ್ವಜನಿಕ ಶೌಚಾಲಯ ಪರಿಶೀಲನೆಗೆ ಮಾರ್ಕೆಟ್ ಮತ್ತು ಗಂಜ್ ಪ್ರದೇಶಕ್ಕೆ ಭೇಟಿ ನೀಡಿದಾಗ ಗಂಜ್ ಶೌಚಾಲಯದಲ್ಲಿ ಕ್ಲಿನ್ ಇಲ್ಲದೆ ಇರುವುದು ಮತ್ತು ಜೊತೆಗೆ ಗುಟ್ಕಾ ಹಾಗೂ ಸಿಗರೇಟ್ ಮಾರಾಟ ಮಾಡುವುದು ಕಂಡು ಬಂದಿದೆ. ಇಲ್ಲೆಲ್ಲಾ ಭೇಟಿ ನೀಡಿರುವ ಸಚಿನ್ ಶಿರವಾಳ ಅವರು ಏಜೆನ್ಸಿಯ ಅವಧಿಯು ಮುಗಿದಿದ್ದು, ಕೂಡಲೇ ಈ ಸಾರ್ವಜನಿಕ ಶೌಚಾಲಯವನ್ನು ಮಹಾನಗರ ಪಾಲಿಕೆ ಕಲಬುರಗಿ ವಶಕ್ಕೆ ಪಡೆದುಕೊಳ್ಳಬೇಕು ಎಂದು ಆಯುಕ್ತರ ಗಮನ ಸೆಳೆದಿದ್ದಾರೆ.
ಒಪ್ಪಂದದಂತೆ ಷರತ್ತುಗಳಲ್ಲಿ ಮುಖ್ಯವಾದ ತಾರಫೈಲ್‌ನಲ್ಲಿ 4 ಶೌಚಾಲಯ ನಿರ್ವಹಣೆ ಮಾಡುವಲ್ಲಿ ವಿಫಲರಾಗಿದ್ದಾರೆ, ಸುತ್ತ ಮುತ್ತಲಿನ ಸ್ಥಳದಲ್ಲಿ ಕೊಳಚೆಯಿಂದ ಕೂಡಿದೆ. ಒಳಚರಂಡಿ ವ್ಯವ್ಯಸ್ಥೆಯು ಪೂರ್ಣಗೊಳಿಸಿಲ್ಲ. ಇದರಿಂದ ಸುತ್ತಮುತ್ತಲಿನ ಪರಿಸರ ಹಾಳು ಮಾಡಿದ್ದಾರೆಂದು ಸಚಿನ್ ಆಕ್ಷೇಪಿಸಿದ್ದಾರೆ.ಆ ಏಜೆನ್ಸಿ ಅವಧಿಯು ಮುಗಿದಿದ್ದು, ಕೂಡಲೇ ಈ ಸಾರ್ವಜನಿಕ ಶೌಚಾಲಯವನ್ನ ಮಹಾನಗರ ಪಾಲಿಕೆ ಕಲಬುರಗಿ ವಶಕ್ಕೆ ಪಡೆದುಕೊಳ್ಳಬೇಕು ಮತ್ತು ಈ ಏಜೆನ್ಸಿಯನ್ನು ಕಪ್ಪು ಪಟ್ಟಿಗೆ ಸೇರಿಸಲು ಸೂಚಿಸಿ ಕಮಿಷನರ್ ಅವರಿಗೆ ಟಿಪ್ಪಣಿ ಬರೆದು ಶಿಫಾರಸು ಮಾಡಿದರು. ಈ ಸಂದರ್ಭದಲ್ಲಿ ಪಾಲಿಕೆ ಅಧಿಕಾರಿಗಳು ಸುಷ್ಮಾ, ಬಾಬುರಾವ್, ಶರಣು ಸೇರಿದಂತೆ ಇತರರು ಉಪಸ್ಥಿತರಿದ್ದರು.