ಒಕ್ಕಲಿಗ ಸಮಾಜದ ಬೆಂಬಲ ಕೋರಿದ ಸ್ಟಾರ್ ಚಂದ್ರು

| Published : Apr 09 2024, 12:47 AM IST

ಸಾರಾಂಶ

ನಾನು ಮಂಡ್ಯ ಜಿಲ್ಲೆಯ ರೈತನ ಮಗ. ನಿಮ್ಮ ಸೇವೆ ಮಾಡಲು ಬಂದಿದ್ದೇನೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ರವಿಶಂಕರ್ ಅವರನ್ನು ಬೆಂಬಲಿಸಿ ಆಶೀರ್ವದಿಸಿದಂತೆ ಈ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕೆಂದು

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ

ಎಲ್ಲ ಸಮುದಾಯದವರನ್ನು ಒಟ್ಟಿಗೆ ಕರೆದೊಯ್ಯುವ ಪಕ್ಷ ಕಾಂಗ್ರೆಸ್. ಈ ಚುನಾವಣೆಯಲ್ಲಿ ನಾನಾ ಸಮುದಾಯದ ಮುಖಂಡರು ನನ್ನನ್ನು ಬೆಂಬಲಿಸುತ್ತಿದ್ದು, ಒಕ್ಕಲಿಗ ಸಮಾಜ ಕೂಡ ನನ್ನನ್ನು ಬೆಂಬಲಿಸಿ ಆಶೀರ್ವದಿಸಬೇಕೆಂದು ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರು ಮನವಿ ಮಾಡಿದರು.

ಪಟ್ಟಣದ ಕೆ.ಆರ್. ನಗರ ಹಾಗೂ ಸಾಲಿಗ್ರಾಮ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಒಕ್ಕಲಿಗ ಸಮಾಜದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ನಾನು ಮಂಡ್ಯ ಜಿಲ್ಲೆಯ ರೈತನ ಮಗ. ನಿಮ್ಮ ಸೇವೆ ಮಾಡಲು ಬಂದಿದ್ದೇನೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ರವಿಶಂಕರ್ ಅವರನ್ನು ಬೆಂಬಲಿಸಿ ಆಶೀರ್ವದಿಸಿದಂತೆ ಈ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕೆಂದು ಕೇಳಿಕೊಂಡರು.

ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ ಮಾತನಾಡಿ, ಮಂಡ್ಯ ಲೋಕಸಭಾ ಚುನಾವಣೆ ದೇಶದ ಗಮನ ಸೆಳೆದಿದೆ. ಒಕ್ಕಲಿಗ ಸಮಾಜಕ್ಕೆ 8 ಸ್ಥಾನಗಳನ್ನು ಕೊಡುವ ಮೂಲಕ ಈ ಸಮಾಜಕ್ಕೆ ಶಕ್ತಿ ತುಂಬುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ ಎಂದರು.

ವಿಧಾನಸಭಾ ಚುನಾವಣೆಯಲ್ಲಿ ರವಿಶಂಕರ್ ಅವರಿಗೆ ಒಕ್ಕಲಿಗರು ಬೆಂಬಲ ನೀಡಿದಂತೆ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಒಕ್ಕಲಿಗ ಸಮಾಜ ಕೈ ಹಿಡಿಯಬೇಕು. ಒಕ್ಕಲಿಗ ಸಮಾಜದ ಜೊತೆಗೆ ಇತರೆ ಸಮುದಾಯಗಳು ಕೂಡ ಕಾಂಗ್ರೆಸ್ ಅನ್ನು ಬೆಂಬಲಿಸಬೇಕು ಎಂದು ಕರೆ ನೀಡಿದರು.

ಶಾಸಕ ರವಿಶಂಕರ್ ಮಾತನಾಡಿ, ಒಕ್ಕಲಿಗ ಸಮಾಜ ಕಾಂಗ್ರೆಸ್ ಬೆಂಬಲಿಸಿದ್ದರಿಂದ ಶಾಸಕನಾಗಿ ಆಯ್ಕೆಯಾದೆ. ವಿಧಾನಸಭೆಯಲ್ಲಿ ಬೆಂಬಲಿಸಿದಂತೆ ಲೋಕಸಭಾ ಚುನಾವಣೆಯಲ್ಲಿ ಸ್ಟಾರ್ ಚಂದ್ರು ಅವರನ್ನು ಬೆಂಬಲಿಸಬೇಕು. ಸರಳ ವ್ಯಕ್ತಿ, ರೈತ ಕುಟುಂಬದಿಂದ ಬಂದವರು ಎಂದು ಹೇಳಿದರು.

ವಿಧಾನ ಪರಿಷತ್ ಮಾಜಿ ಸದಸ್ಯರಾದ ಮರಿತಿಬ್ಬೇಗೌಡ ಮಾತನಾಡಿದರು. ಕೆಪಿಸಿಸಿ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ದೊಡ್ಡಸ್ವಾಮೇಗೌಡ,

ವಿಧಾನ ಪರಿಷತ್ ದಿನೇಶ್ ಗೂಳೀಗೌಡ, ಒಕ್ಕಲಿಗರ ಸಮಾಜದ ಮುಖಂಡರಾದ ಎಸ್.ಪಿ. ತಮ್ಮಯ್ಯ, ಸಾಲಿಗ್ರಾಮ ಎಸ್.ಎಸ್. ಸಂದೇಶ್, ಕೆ.ಜಿ. ಸುಬ್ರಮಣ್ಯ, ವೈ.ಎಸ್. ಜಯಂತ್, ಬೋರೇ ನಾಗರಾಜು, ಎ.ಟಿ. ಗೋವಿಂದೇಗೌಡ, ಎಚ್.ಪಿ.ಗೋಪಾಲ್, ಎಚ್.ಪಿ. ಪರಶುರಾಮ್, ಎಚ್.ಎಚ್. ನಾಗೇಂದ್ರ, ನಂದೀಶ್, ನಾಗರಾಜು, ದೀಪು, ಸಿ.ಜೆ. ಪಾಲಾಕ್ಷ, ಬಸವೇಗೌಡ, ಅಶ್ವಥ್ ನಾರಾಯಣ್, ಪ್ರದೀಪ್ ಕುಮಾರ್, ಮೂರ್ತಿ, ಪ್ರಕಾಶ್, ಸುನೀತಾ ರಮೇಶ್, ಲತಾ ರವಿಶಂಕರ್, ಮುಸ್ಲಿಂ ಮುಖಂಡ ಗೌಷರೀಫ್, ಯುವ ಮುಸ್ಲಿಂ ಮುಖಂಡ ಇಬ್ರಾಹಿಂ ಷರೀಫ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಉದಯಶಂಕರ್, ಎಂ.ಎಸ್. ಮಹದೇವ್, ವಕ್ತಾರ ಸೈಯದ್ ಜಾಬೀರ್ ಇದ್ದರು.