ಸಾಲಿಗ್ರಾಮ: ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಳದ 2026-31ನೇ ಸಾಲಿನ ಆಡಳಿತ ಮಂಡಳಿಗೆ ಮಾರ್ಚ್15ರಂದು ಚುನಾವಣೆ ನಡೆಯಿತು. ಒಟ್ಟು ಆರು ಕ್ಷೇತ್ರಗಳಲ್ಲಿ ಕರ್ನಾಟಕೇತರ ಭಾರತದ ಇತರ ರಾಜ್ಯಗಳಲ್ಲಿ ಎಂ ಲಕ್ಷ್ಮೀನಾರಾಯಣ ಹೊಳ್ಳರು ಅವಿರೋಧ ಆಯ್ಕೆಯಾಗಿದ್ದು ಉಳಿದ ಐದು ಕ್ಷೇತ್ರಗಳಿಗೆ ಮತದಾನ ನಡೆಯಿತು. ಒಟ್ಟು ಐದು ಕ್ಷೇತ್ರಗಳಿಗೆ 8 ಜನ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಾಗಿದ್ದು ಒಟ್ಟು 2,829 ಮತ ಚಲಾವಣೆಯಾಗಿದೆ.
ಉಡುಪಿ ಜಿಲ್ಲೆಯ ಉಳಿದ ಭಾಗಗಳು ಮತ ಕ್ಷೇತ್ರದಿಂದ ಬಿ. ಚಂದ್ರಶೇಖರ ನಾವಡ ಬೈಂದೂರು ಇವರು ಬಹುಮತದಿಂದ ಆಯ್ಕೆಯಾಗಿದ್ದಾರೆ. ಬೆಂಗಳೂರು ಕಾರ್ಪೋರೇಷನ್ ಮತ ಕ್ಷೇತ್ರದಿಂದ ಜಿ. ಪ್ರಕಾಶ ಮಯ್ಯರು ಬಹುಮತದಿಂದ ಆಯ್ಕೆಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮತಕ್ಷೇತ್ರದಿಂದ ಪ್ರಕಾಶ ಕಾರಂತರು ಬಹುಮತದಿಂದ ಆಯ್ಕೆಯಾಗಿದ್ದಾರೆ. ಕರ್ನಾಟಕದ ಉಳಿದ ಭಾಗಗಳು ಮತಕ್ಷೇತ್ರದಿಂದ ಬಿ. ಜಿ. ಕೃಷ್ಣಮೂರ್ತಿಯವರು ಬಹುಮತದಿಂದ ಆಯ್ಕೆಯಾಗಿದ್ದಾರೆ. ಸಾಲಿಗ್ರಾಮ ಮತಕ್ಷೇತ್ರದಿಂದ ಪ್ರಸನ್ನ ತುಂಗ, ಪರಶುರಾಮ ಭಟ್ಟ, ಕೆ. ತಾರಾನಾಥ ಹೊಳ್ಳ ಮತ್ತು ಚಂದ್ರಶೇಖರ ಉಪಾಧ್ಯರು ಬಹುಮತದಿಂದ ಆಯ್ಕೆಯಾಗಿದ್ದಾರೆ.ಸಾಲಿಗ್ರಾಮ ಗುರುನರಸಿಂಹ ದೇವಳ ಆಡಳಿತ ಮಂಡಳಿ ಚುನಾವಣೆ
ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಳದ 2026-31ನೇ ಸಾಲಿನ ಆಡಳಿತ ಮಂಡಳಿಗೆ ಮಾರ್ಚ್15ರಂದು ಚುನಾವಣೆ ನಡೆಯಿತು. ಒಟ್ಟು ಆರು ಕ್ಷೇತ್ರಗಳಲ್ಲಿ ಕರ್ನಾಟಕೇತರ ಭಾರತದ ಇತರ ರಾಜ್ಯಗಳಲ್ಲಿ ಎಂ ಲಕ್ಷ್ಮೀನಾರಾಯಣ ಹೊಳ್ಳರು ಅವಿರೋಧ ಆಯ್ಕೆಯಾಗಿದ್ದು ಉಳಿದ ಐದು ಕ್ಷೇತ್ರಗಳಿಗೆ ಮತದಾನ ನಡೆಯಿತು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
