ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಟಿವಿಎಸ್ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಎಂ,ಎಸ್. ರಾಜಪ್ಪ ಅವರು ಸಾರಥಿಯ ಸಂಪ್ರೀತಿ, ಸಾರಥಿಯ ಸಾಕ್ಷಾತ್ಕಾರ ಹಾಗೂ ಸಾರಥಿಯ ಕಣ್ಣಲ್ಲಿ ಸಾಧಕರು- ಕೃತಿಗಳನ್ನು ಹೊರತಂದಿದ್ದಾರೆ.ಸಾರಥಿಯ ಸಂಪ್ರೀತಿ - ಕವನ ಸಂಕಲನವಾಗಿದೆ. ಇಲ್ಲಿ 96 ಕವನಗಳಿವೆ. ಬಹುತೇಕ ಕವನಗಳಿಗೆ ಪ್ರೀತಿಯೇ ಪ್ರಮುಖ ವಸ್ತು.ವಾಗಿದೆ. ಇದಲ್ಲದೇ ಗಣಪ, ಭೂಮಿ, ಅನ್ನದಾತ, ಕಾರ್ಮಿಕರು, ಸಂಕ್ರಾಂತಿ, ಯುಗಾದಿ, ದೀಪಾವಳಿ, ಯೋಧರು, ಲಾಕ್ ಡೌನ್, ಕೊರೋನಾ ಜಾಗೃತಿ ಮೊದಲಾದ ಕವನಗಳಿವೆ. ಸಾರಥಿಯ ಕಣ್ಣಲ್ಲಿ ಸಾಧಕರು- ಕೂಡ ಕವನ ಸಂಕಲನವಾಗಿದ್ದು, ಇಲ್ಲಿ ಬಸವಣ್ಣ, ಕನಕದಾಸರು, ಸ್ವಾಮಿ ವಿವೇಕಾನಂದ, ಪುಟ್ಟರಾಜ ಗವಾಯಿ, ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ, ಶ್ರೀ ಶಿವಕುಮಾರ ಸ್ವಾಮೀಜಿ, ಶ್ರೀ ಸಿದ್ದೇಶ್ವರ ಸ್ವಾಮೀಜಿ, ಶ್ರೀ ಪೇಜಾವರ ಸ್ವಾಮೀಜಿ, ಸರ್ ಎಂ. ವಿಶ್ವೇಶ್ವರಯ್ಯ, ಡಾ.ಅಬ್ದುಲ್ ಕಲಾಂ, ಸಾಲುಮರದ ತಿಮ್ಮಕ್ಕ, ಕರ್ಣ, ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚೆನ್ನಮ್ಮ. ಡಾ.ಬಿ.ಆರ್. ಅಂಬೇಡ್ಕರ್, ಕುವೆಂಪು, ದ.ರಾ. ಬೇಂದ್ರೆ ಸೇರಿದಂತೆ 66 ವ್ಯಕ್ತಿಗಳ ಬಗ್ಗೆ ಕವನಗಳನ್ನು ಬರೆದಿದ್ದಾರೆ.ಸಾರಥಿಯ ಸಾಕ್ಷಾತ್ಕಾರ- ಪ್ರಬಂಧ ಸಂಕಲನವಾಗಿದೆ. ಹೆಣ್ಣು, ಪರಿಸರ, ನಾಯಕತ್ವ, ಯುವಕರ ಪಾತ್ರ, ಮಕ್ಕಳ ಪಾತ್ರ, ಶಿಕ್ಷಣದ ಮಹತ್ವ, ಭ್ರಷ್ಟಾಚಾರ, ಯೋಗ, ಮೈಸೂರು ದಸರಾ, ಗ್ರಂಥಾಲಯ, ಉದ್ದಿಮೆಗಳಲ್ಲಿ ಸುರಕ್ಷತೆ ಮತ್ತು ಆರೋಗ್ಯ- ಇವೇ ಮೊದಲಾದ ವಿಷಯಗಳನ್ನು ಕುರಿತ ಲೇಖನಗಳಿವೆ.ಆಸಕ್ತರು ಎಂ.ಎಸ್. ರಾಜಪ್ಪ, ಮೊ. 97391 96368 ಸಂಪರ್ಕಿಸಬಹುದು.
--23 ರಂದು ಲೋಕಾರ್ಪಣೆಎಂ.ಎಸ್. ರಾಜಪ್ಪ ಅವರ ಸಾರಥಿಯ ಸಂಪ್ರೀತಿ, ಸಾರಥಿಯ ಸಾಕ್ಷತ್ಕಾರ ಹಾಗೂ ಸಾರಥಿಯ ಕಣ್ಣಲ್ಲಿ ಸಾಧಕರು ಕೃತಿಗಳನ್ನು ಫೆ. 23 ರಂದು ಬೆಳಗ್ಗೆ 10ಕ್ಕೆ ಜೆಎಸ್ಎಸ್ ಆಸ್ಪತ್ರೆ ಆವರಣದ ರಾಜೇಂದ್ರ ಭವನದಲ್ಲಿ ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಪ್ರೊ.ಪದ್ಮಾ ಶೇಖರ್ ಬಿಡುಗಡೆ ಮಾಡುವರು. ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್. ಶಿವರಾಜಪ್ಪ ಅಧ್ಯಕ್ಷತೆ ವಹಿಸುವರು. ಕೃತಿಗಳನ್ನು ಕುರಿತು ಪ್ರೊ.ಮೊರಬದ ಮಲ್ಲಿಕಾರ್ಜುನ, ಬಾಗಳಿ ಮಹೇಶ್ ಹಾಗೂ ಎ. ಹೇಮಗಂಗಾ ಮಾತನಾಡುವರು ನಾಟಕ ರಚನೆಕಾರ. ಟಿ.ಆರ್. ವೇಣುಗೋಪಾಲ್, ಪ್ರೌಢಶಾಲಾ ಸಹ ಶಿಕ್ಷಕ ರುದ್ರಪ್ಪ ವೈ. ಸಾರಥಿ, ಪ್ರಕಾಶಕ ಕೆ.ಸಿ. ಓಂಕಾರಪ್ಪ ಉಪಸ್ಥಿತರಿರುವರು. ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ. ಚಂದ್ರಶೇಖರ್ ಪ್ರಾಸ್ತಾವಿಕ ಭಾಷಣ ಮಾಡುವರು.