ಮಿತ್ರವೃಂದ ವಾಲಿಬಾಲ್ ಅಕಾಡೆಮಿ, ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಮೈಭಾರತ್ ಹಾಗೂ ಅಕ್ಷಯ ಕಾಲೇಜು ಸಂಪ್ಯ ಜಂಟಿ ಆಶ್ರಯದಲ್ಲಿ ಏ. ೧೫ರಿಂದ ಒಂದು ತಿಂಗಳ ಕಾಲ ಉಚಿತ ವಾಲಿಬಾಲ್ ಮತ್ತು ಕಬಡ್ಡಿ ಬೇಸಿಗೆ ತರಬೇತಿ ಶಿಬಿರ ಆಯೋಜಿಸಲಾಗಿದೆ.
ಪುತ್ತೂರು: ಮಿತ್ರವೃಂದ ವಾಲಿಬಾಲ್ ಅಕಾಡೆಮಿ, ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಮೈಭಾರತ್ ಹಾಗೂ ಅಕ್ಷಯ ಕಾಲೇಜು ಸಂಪ್ಯ ಜಂಟಿ ಆಶ್ರಯದಲ್ಲಿ ಏ. ೧೫ರಿಂದ ಒಂದು ತಿಂಗಳ ಕಾಲ ಉಚಿತ ವಾಲಿಬಾಲ್ ಮತ್ತು ಕಬಡ್ಡಿ ಬೇಸಿಗೆ ತರಬೇತಿ ಶಿಬಿರ ಆಯೋಜಿಸಲಾಗಿದೆ.
ಶಿಬಿರವು ಸಂಪ್ಯದಲ್ಲಿರುವ ಅಕ್ಷಯ ಕಾಲೇಜ್ ಪಕ್ಕದಲ್ಲಿನ ಕಮ್ಮಾಡಿ ಮೈದಾನದಲ್ಲಿ ನಡೆಯಲಿದೆ. ೧೦ ವರ್ಷದಿಂದ ೧೮ ವರ್ಷದೊಳಗಿನ ಬಾಲಕ-ಬಾಲಕಿಯರಿಗೆ ಈ ಶಿಬಿರದಲ್ಲಿ ಭಾಗವಹಿಸಲು ಅವಕಾಶವಿದೆ ಎಂದು ಶಿಬಿರದ ಆಯೋಜನಾ ಸಮಿತಿ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಕೆ. ತಿಳಿಸಿದ್ದಾರೆ.ಗುರುವಾರ ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ಧಿಗೋಷ್ಟಿಯಲ್ಲಿ ಮಾತನಾಡಿ, ಮೊದಲ ಬಾರಿಗೆ ನೆದರ್‌ಲ್ಯಾಂಡ್‌ನ ಲೆಟ್ಸ್ ಕೀಪ್‌ದ ಬಾಲ್ ಫ್ಲೈಯಿಂಗ್ ಫೌಂಡೇಶನ್ ಎಂಬ ಸಂಸ್ಥೆ ಸಹಯೋಗ ನೀಡಲಿದೆ. ತರಬೇತಿಯನ್ನು ಎನ್‌ಐಎಸ್ ಅರ್ಹತೆ ಹೊಂದಿದ ತರಬೇತುದಾರರು ನೀಡಲಿದ್ದಾರೆ. ನೆದರ್‌ಲ್ಯಾಂಡ್‌ನಿಂದ ಇಬ್ಬರು ನುರಿತ ತರಬೇತುದಾರರು ಆಗಮಿಸಿ ತರಬೇತಿ ನೀಡಲಿದ್ದಾರೆ ಎಂದು ತಿಳಿಸಿದರು.
ರಾಷ್ಟ್ರೀಯ ವಾಲಿಬಾಲ್ ಕೋಚ್ ಪಿ.ವಿ. ನಾರಾಯಣನ್ ವಾಲಿಬಾಲ್ ತರಬೇತಿಯ ಮುಖ್ಯ ಕೋಚ್ ಆಗಿರುತ್ತಾರೆ. ಕಬಡ್ಡಿಗೆ ದೈಹಿಕ ಶಿಕ್ಷಕ ನವೀನ್ ಅವರು ತರಬೇತಿ ನೀಡಲಿದ್ದಾರೆ. ಸಂಪ್ಯದ ಅಕ್ಷಯ ಕಾಲೇಜಿನಲ್ಲಿ ಬೆಳಗ್ಗೆ ೭ರಿಂದ ೯ ಗಂಟೆ ತನಕ ಹಾಗೂ ಸಂಜೆ ೪.೩೦ರಿಂದ ೬.೩೦ ತನಕ ಈ ತರಬೇತಿ ನಡೆಯಲಿದೆ. ವಾಲಿಬಾಲ್ ಗೆ ಯೋಗ್ಯ ಎತ್ತರ ಹೊಂದಿರುವ ಅಭ್ಯರ್ಥಿಗಳನ್ನು ವಯಸ್ಸಿನ ಪರಿಮಿತಿ ಇಲ್ಲದೆ ಆಯ್ಕೆ ಮಾಡಲಾಗುತ್ತದೆ ಎಂದು ತಿಳಿಸಿದರು.ಭಾಗವಹಿಸಲು ಆಸಕ್ತಿ ಹೊಂದಿರುವ ಬಾಲಕ-ಬಾಲಕಿಯರು ಪಿ.ವಿ. ನಾರಾಯಣನ್-೯೯೦೦೦೨೬೯೪೫೫, ನವೀನ್- ೮೭೪೮೦೧೮೦೦೪ ಹಾಗೂ ಹಮೀದ್ ಸಜಾ-೯೪೪೮೫೦೧೭೨೪ ಅವರನ್ನು ಸಂಪರ್ಕಿಸುವಂತೆ ವಿನಂತಿ ಮಾಡಲಾಗಿದೆ. ಏ. ೧೨ರಂದು ಬೆಳಿಗ್ಗೆ ೮ ಗಂಟೆಗೆ ಸಂಪ್ಯದ ಅಕ್ಷಯ ಕಾಲೇಜಿನಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ.ಆಯೋಜನಾ ಸಮಿತಿ ಅಧ್ಯಕ್ಷ ಪಿ.ವಿ. ಕೃಷ್ಣನ್, ರಾಷ್ಟ್ರೀಯ ವಾಲಿಬಾಲ್ ಕೋಚ್ ಪಿ.ವಿ. ನಾರಾಯಣನ್, ಸದಸ್ಯರಾದ ರಾಮಚಂದ್ರ ಮತ್ತು ಅನನ್ಯಕೃಷ್ಣ ಭಟ್ ಇದ್ದರು.