ಡಿ.ಕೆ.ಶಿವಕುಮಾರ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಎರಡನೇ ಹಂತದ ವಿಸ್ತರಣೆ ನಡೆಯುವುದು ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಗಳ ನಂತರವೇ ಎಂದು ಕಾಂಗ್ರೆಸ್‌ನ ಉನ್ನತ ಮೂಲಗಳು ತಿಳಿಸಿವೆ.

ಬೆಂಗಳೂರು : ಡಿ.ಕೆ.ಶಿವಕುಮಾರ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಎರಡನೇ ಹಂತದ ವಿಸ್ತರಣೆ ನಡೆಯುವುದು ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಗಳ ನಂತರವೇ ಎಂದು ಕಾಂಗ್ರೆಸ್‌ನ ಉನ್ನತ ಮೂಲಗಳು ತಿಳಿಸಿವೆ.

ಬುಧವಾರ ಮೊದಲ ಹಂತದ ಸಂಪುಟ ರಚನೆ

ಬುಧವಾರ ಮೊದಲ ಹಂತದ ಸಂಪುಟ ರಚನೆ ನಡೆಯಲಿದೆ. ಈ ವೇಳೆ ಸಿಎಂ ಸೇರಿ 9 ಮಂದಿ ಮಾತ್ರ ಪ್ರಮಾಣ ವಚನ ಸ್ವೀಕಾರ ಮಾಡುವಂತೆ ಮಾಡುವ ಬಗ್ಗೆ ಹೈಕಮಾಂಡ್ ಚಿಂತನೆ ಹೊಂದಿದೆ. ಇದಾದ ನಂತರ ಉಳಿದ ಸ್ಥಾನಗಳ ಭರ್ತಿ ಪ್ರಕ್ರಿಯೆ ನಡೆಯುವುದೇನಿದ್ದರೂ ರಾಜ್ಯಸಭಾ ಹಾಗೂ ವಿಧಾನ ಪರಿಷತ್‌ ಚುನಾವಣೆ (ಜೂ.18)ನಂತರವೇ ಎಂದು ಖಚಿತ ಮಾಹಿತಿಯಿದೆ.

ಎರಡನೇ ಹಂತದ ಸಂಪುಟ ವಿಸ್ತರಣೆ ವಿಳಂಬ

ಹೀಗೆ ಎರಡನೇ ಹಂತದ ಸಂಪುಟ ವಿಸ್ತರಣೆ ವಿಳಂಬವಾಗಲಿರುವ ಕಾರಣ ಬುಧವಾರದ ಮೊದಲ ಹಂತದಲ್ಲೇ ತಮ್ಮ ಹೆಸರು ಸೇರ್ಪಡೆಯಾಗುವಂತೆ ಮಾಡಲು ಹಿರಿಯ ಸಚಿವರೇ ಪ್ರಬಲ ಲಾಬಿ ಆರಂಭಿಸಿದ್ದಾರೆ. ಹೀಗಾಗಿ ಮೊದಲ ಹಂತದಲ್ಲಿ ಸಿಎಂ ಹೊರತುಪಡಿಸಿ 8 ಮಂದಿಯನ್ನು ಸೇರಿಸಿಕೊಳ್ಳಬೇಕು ಎಂಬ ಹೈಕಮಾಂಡ್ ಲೆಕ್ಕಾಚಾರ ಉಲ್ಟಾ ಆಗುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.