ಸಾರಾಂಶ
ಸಂಸಾರ ಎನ್ನುವುದು ಗಾಳಿಯಲ್ಲಿ ಹಚ್ಚಿಟ್ಟ ದೀಪವಿದ್ದಂತೆ. ಕಾಯದಲ್ಲಿ ಜ್ಯೋತಿಯಂತಿರುವ ಆತ್ಮವು ಯಾವ ಸಮಯದಲ್ಲಾದರೂ ಹಾರಿ ಹೋಗುತ್ತದೆ. ಬಡತನ ಮತ್ತು ಸಿರಿತನ ಶಾಶ್ವತವೆಂದು ಭಾವಿಸದೆ, ಬಸವ ಭಾವನೆ ಮನದಲ್ಲಿ ಅರಿತುಕೊಂಡು, ಬಸವ (ಶಿವ)ನಾಮ ಸ್ಮರಣೆಯ ಜತೆಗೆ ನಿರಂತರ ಕಾಯಕ ಮಾಡಿದಾಗ ಮಾತ್ರ ಸದ್ಗತಿ ಕಾಣಲು ಸಾಧ್ಯವೆಂದು ಬಸವ ಸ್ವಾಮೀಜಿ ಹೇಳಿದರು.
ಯಲಬುರ್ಗಾ:
ಮಾನವನ ಬದುಕನ್ನು ಭವ ಬಂಧನಕ್ಕೆ ಸಿಲುಕಿಸದೆ, ಸಂಸಾರದಲ್ಲೆ ಸದ್ಗತಿ ಕಾಣಬೇಕು ಎಂದು ಚರಮೂರ್ತಿ ಚಿರಂತೇಶ್ವರ ವಿರಕ್ತಮಠದ ಶ್ರೀಶರಣು ಬಸವ ಸ್ವಾಮೀಜಿ ಹೇಳಿದರು.ತಾಲೂಕಿನ ಗುಳೆ ಗ್ರಾಮದ ಬಸವ ಮಂಟಪದಲ್ಲಿ ರಾಷ್ಟ್ರೀಯ ಬಸವದಳ, ಯುವ ಘಟಕ ಹಾಗೂ ಅಕ್ಕ ನಾಗಲಾಂಬಿಕೆ ಮಹಿಳಾ ಗಣದಿಂದ ಶ್ರಾವಣ ಮಾಸದ ಅಂಗವಾಗಿ ತಿಂಗಳ ಪರ್ಯಂತ ಹಮ್ಮಿಕೊಂಡಿದ್ದ ಮನೆಯಿಂದ ಮನೆಗೆ ವಚನ ಜ್ಯೋತಿ ಕಾರ್ಯಕ್ರಮ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.ಸಂಸಾರ ಎನ್ನುವುದು ಗಾಳಿಯಲ್ಲಿ ಹಚ್ಚಿಟ್ಟ ದೀಪವಿದ್ದಂತೆ. ಕಾಯದಲ್ಲಿ ಜ್ಯೋತಿಯಂತಿರುವ ಆತ್ಮವು ಯಾವ ಸಮಯದಲ್ಲಾದರೂ ಹಾರಿ ಹೋಗುತ್ತದೆ. ಬಡತನ ಮತ್ತು ಸಿರಿತನ ಶಾಶ್ವತವೆಂದು ಭಾವಿಸದೆ, ಬಸವ ಭಾವನೆ ಮನದಲ್ಲಿ ಅರಿತುಕೊಂಡು, ಬಸವ (ಶಿವ)ನಾಮ ಸ್ಮರಣೆಯ ಜತೆಗೆ ನಿರಂತರ ಕಾಯಕ ಮಾಡಿದಾಗ ಮಾತ್ರ ಸದ್ಗತಿ ಕಾಣಲು ಸಾಧ್ಯವೆಂದರು.ಶ್ರಾವಣ ಮಾಸ ಪಾವನ ಮಾಸವಾಗಿದೆ. ವಚನ ಶ್ರವಣ, ವಚನಗಳಂತೆ ಸಂಸ್ಕೃತಿ, ಸಂಸ್ಕಾರ ಕಲಿಯುವುದೇ ವಚನ ಜ್ಯೋತಿಯ ಉದ್ದೇಶವಾಗಿದೆ. ಪ್ರತಿದಿನ ಮನೆಯಿಂದ ಮನೆಗೆ ಬಸವಾದಿ ಶರಣರ ವಿಚಾರ ಮನವರಿಕೆ ಮಾಡಿ, ಶರಣರು ಬದುಕಿದಂತೆ ಬದುಕು ಕಟ್ಟಿಕೊಳ್ಳಲು ಕಲಿಸುವ ಪ್ರಯತ್ನ ಮಾಡಿದ ಬಸವದಳ ಮತ್ತು ಅಕ್ಕ ನಾಗಲಾಂಬಿಕೆ ಮಹಿಳಾ ಸಂಘಟನೆಯ ಕಾರ್ಯ ಶ್ಲಾಘನೀಯವಾಗಿದೆ ಎಂದರು.ಮುಖಂಡ ಶರಣಪ್ಪ ಹೊಸಳ್ಳಿ ಮಾತನಾಡಿದರು. ನಿವೃತ್ತ ಪಿಎಸ್ಐ ಬಸನಗೌಡ ಪೊಲೀಸ್‌ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸೈನಿಕ ಭೀಮನಗೌಡ ಜಾಲಿಹಾಳ ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು. ತಿಂಗಳ ಪರ್ಯಂತ ಸಾಗಿಬಂದ ವಚನ ಜ್ಯೋತಿ ಕಾರ್ಯಕ್ರಮ ೩೦ನೇ ದಿನದಂದು ಶರಣ ದಂಪತಿ ಬಸಮ್ಮ ಬಸವರಾಜ ಹೂಗಾರ ಮನೆಯಿಂದ ಬಸವ ಮಂಟಪಕ್ಕೆ ಕಳಸ ಕನ್ನಡಿ, ತಾಳ ಮೇಳದೊಂದಿಗೆ ತೆರಳಿ, ಚರಮೂರ್ತಿ ಚಿರಂತೇಶ್ವರ ವಿರಕ್ತಮಠದ ಶ್ರೀಶರಣು ಬಸವ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಂಪನ್ನಗೊಂಡಿತು.ಈ ವೇಳೆ ದೇವಪ್ಪ ಕೋಳೂರು, ಗಿರಿಮಲ್ಲಪ್ಪ ಪರಂಗಿ, ಲಿಂಗನಗೌಡ ದಳಪತಿ, ಫಕೀರಪ್ಪ ಮಂತ್ರಿ, ಬಸವಣ್ಣ ಹೊಸಳ್ಳಿ, ಬಸವರಾಜ ಹೂಗಾರ, ಯಮನೂರಪ್ಪ ಕೋಳೂರು, ಪಂಪಾಪತಿ ಹೊಸಳ್ಳಿ, ಹನುಮೇಶ ಹೊಸಳ್ಳಿ, ನಿಜಲಿಂಗಪ್ಪ ಮಂತ್ರಿ, ನಿಂಗಪ್ಪ ಜಾಲಿಹಾಳ, ಶಿವಪುತ್ರಪ್ಪ, ಜಗದೀಶ ಮೇಟಿ, ಶಂಕ್ರಮ್ಮ ಹೊಸಳ್ಳಿ, ಸಾವಿತ್ರಮ್ಮ ಆವಾರಿ, ನಿಂಗಮ್ಮ ಕೋಳೂರು, ನಾಗಮ್ಮ ಜಾಲಿಹಾಳ, ರೇಣುಕಮ್ಮ ಮಂತ್ರಿ, ಅನ್ನಪೂರ್ಣಮ್ಮ ಹೊಸಳ್ಳಿ, ಶಿವಕಲ್ಲಮ್ಮ ಭೀಮಮ್ಮ ಮಂತ್ರಿ, ಗುರುಲಿಂಗಮ್ಮ ವಿಶಾಲಾಕ್ಷಮ್ಮ, ಹನಮಮ್ಮ ಗಾಳಿ, ಚನ್ನಮ್ಮ, ಮಹಾದೇವಿ, ದ್ರಾಕ್ಷಾಯಣಮ್ಮ, ಕಸ್ತೂರಿ, ಮಂಜಮ್ಮ ಇತರರು ಇದ್ದರು.