ಬಾಗಲಕೋಟೆಯಲ್ಲಿ ಸಂಯುಕ್ತಾ ಮನೆ ಮನೆ ಪ್ರಚಾರ

| Published : Apr 17 2024, 01:16 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬಾಗಲಕೋಟೆ: ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದು ಸುತ್ತು ಕಾರ್ಯಕರ್ತರ ಸಭೆ ನಡೆಸಿದ ಕಾಂಗ್ರೆಸ್ ಮುಖಂಡರು ಮಂಗಳವಾರ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದು ಸುತ್ತು ಕಾರ್ಯಕರ್ತರ ಸಭೆ ನಡೆಸಿದ ಕಾಂಗ್ರೆಸ್ ಮುಖಂಡರು ಮಂಗಳವಾರ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.

ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಅವರು, ಮಂಗಳವಾರ ಬೆಳಗ್ಗೆ ವಿದ್ಯಾಗಿರಿಯ ಬಿಡಿಟಿಎ ಕಚೇರಿ ಬಳಿ ಪಾದಯಾತ್ರೆ ಆರಂಭಿಸಿ ಮನೆ ಮನೆಗೆ ತೆರಳಿ ಮತ ಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಅನೇಕ ಕಡೆ ಮಹಿಳೆಯರು ಸಂಯುಕ್ತಾ ಪಾಟೀಲ ಅವರನ್ನು ಮನೆಗೆ ಬರ ಮಾಡಿಕೊಂಡು ಸನ್ಮಾನಿಸಿದರು.

ಪಾದಯಾತ್ರೆ ಸಂದರ್ಭದಲ್ಲಿ ಮಹಿಳೆಯರು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ನೆನಪು ಮಾಡಿಕೊಂಡು ಯೋಜನೆಗಳಿಂದ ಆಗಿರುವ ಅನುಕೂಲದ ಬಗ್ಗೆ ಪ್ರಸ್ತಾಪಿಸಿ ಕಾಂಗ್ರೆಸ್‌ ಮತ ಹಾಕುವ ಭರವಸೆ ನೀಡಿದರು.

ಮತಯಾಚನೆ ವೇಳೆ ಬಾಗಲಕೋಟೆ ಕ್ಷೇತ್ರದ ಶಾಸಕ ಎಚ್.ವೈ.ಮೇಟಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ರಕ್ಷಿತಾ ಈಟಿ ಮತ್ತಿತರ ಮುಖಂಡರು ಸಂಯುಕ್ತಾ ಪಾಟೀಲಗೆ ಸಾಥ್‌ ನೀಡಿದರು. ಬಾಗಲಕೋಟೆ ನಂತರ ರಾಂಪೂರ ಮತ್ತು ಸುತಗುಂಡಾರ ಗ್ರಾಮಗಳಿಗೆ ತೆರಳಿ ಸಂಯುಕ್ತಾ ಪಾಟೀಲ ಪ್ರಚಾರ ನಡೆಸಿದರು. ರಾಂಪುರದ ಶ್ರೀ ಮರುಳಸಿದ್ದೇಶ್ವರ ಮಠದ ಶ್ರೀ ರಾಮಸ್ವಾಮಿ ಮಹಾರಾಜರು ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ಅವರನ್ನು ಸನ್ಮಾನಿಸಿ ಆಶೀರ್ವದಿಸಿದರು..