ಸಾಮರಸ್ಯದಿಂದ ಜೀವನ ನಡೆಸುವಂತೆ ಸಾಣೆಹಳ್ಳಿ ಪಂಡಿತಾರಾಧ್ಯ ಶ್ರೀಗಳ ಕರೆ

| Published : Sep 19 2024, 01:54 AM IST

ಸಾಮರಸ್ಯದಿಂದ ಜೀವನ ನಡೆಸುವಂತೆ ಸಾಣೆಹಳ್ಳಿ ಪಂಡಿತಾರಾಧ್ಯ ಶ್ರೀಗಳ ಕರೆ
Share this Article
  • FB
  • TW
  • Linkdin
  • Email

ಸಾರಾಂಶ

ಬಸವಾದಿ ಶರಣರು ಆಳಿದ ಇಂತಹ ನಾಡಿನಲ್ಲಿ ಎಲ್ಲ ವರ್ಗದ ಜನರು ಜಾತಿ, ಭೇದ ಮರೆತು ಸಾಮರಸ್ಯದಿಂದ ಜೀವನ ನಡೆಸಬೇಕು.

ಸರ್ಕಾರಗಳು ದಲಿತರಿಗೆ ಸೂಕ್ತ ರಕ್ಷಣೆ ನೀಡಲು ಮುಂದಾಗಬೇಕು । ಸೌಹಾರ್ದ ಸಮಾವೇಶ

ಕನ್ನಡಪ್ರಭ ವಾರ್ತೆ ಯಲಬುರ್ಗಾ

ಬಸವಾದಿ ಶರಣರು ಆಳಿದ ಇಂತಹ ನಾಡಿನಲ್ಲಿ ಎಲ್ಲ ವರ್ಗದ ಜನರು ಜಾತಿ, ಭೇದ ಮರೆತು ಸಾಮರಸ್ಯದಿಂದ ಜೀವನ ನಡೆಸಬೇಕು ಎಂದು ಸಾಣೆಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು.

ತಾಲೂಕಿನ ಸಂಗನಾಳ ಗ್ರಾಮದಲ್ಲಿ ಜಿಲ್ಲಾ ದಲಿತ ದಮನಿತರ ದೌರ್ಜನ್ಯಗಳ ವಿರೋಧಿ ಒಕ್ಕೂಟದ ವತಿಯಿಂದ ನಡೆದ ಬಹಿರಂಗ ಸೌಹಾರ್ದ ಸಮಾವೇಶದ ಸಾನಿಧ್ಯ ವಹಿಸಿ ಮಾತನಾಡಿದರು.

ಎಲ್ಲರಲ್ಲೂ ಹರಿಯುವ ರಕ್ತ ಒಂದೇ. ಆತ ಆಜಾತಿ, ಈ ಜಾತಿ ಎನ್ನುವ ಕೀಳು ಮನೋಭಾವನೆ ತೊಡೆದು ಹಾಕಿ ಸೌರ್ಹಾದತೆಯಿಂದ ಬದುಕು ಸಾಗಿಸಬೇಕಿದೆ. ಇಂತಹ ವ್ಯವಸ್ಥೆಯಲ್ಲಿ ಕ್ಷುಲಕ ಕಾರಣಕ್ಕೆ ಕೊಲೆ ಮಾಡುವಂತಹ ವಿಕೃತ ಮನಸ್ಥಿತಿ ಹೊಂದಿರುವ ವ್ಯಕ್ತಿಗಳು ಬದಲಾಗಬೇಕು. ಅಂದಾಗ ಸಮಾಜ ಸುಧಾರಣೆ ಸಾಧ್ಯ ಎಂದರು.

ರಾಜ್ಯವನ್ನು ಆಳುವ ಸರ್ಕಾರಗಳು ದಲಿತರಿಗೆ ಸೂಕ್ತ ರಕ್ಷಣೆ ನೀಡಬೇಕು. ಕೇವಲ ಚುನಾವಣೆಗಳು ಬಂದಾಗ ಮತಕ್ಕಾಗಿ ದಲಿತ ಸಮುದಾಯಗಳನ್ನು ಬಳಕೆ ಮಾಡಿಕೊಳ್ಳುವ ಈ ವ್ಯವಸ್ಥೆ ಸರಿಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ಮುಂದೆ ಅಪಾಯ ತಪ್ಪಿದ್ದಲ್ಲ ಎಂದು ಸರ್ಕಾರಕ್ಕೆ ಎಚ್ಚರಿಸಿದರು.

ಹೋರಾಟಗಾರ ಬಸವರಾಜ ಸೂಳಿಭಾವಿ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಜಿಲ್ಲೆಯನ್ನು ದೌರ್ಜನ್ಯ ಮುಕ್ತವನ್ನಾಗಿ ಮಾಡಬೇಕಾಗಿದೆ. ಡಾ. ಅಂಬೇಡ್ಕರ್‌ ರಚಿಸಿದ ಸಂವಿಧಾನ ಎಲ್ಲರಿಗೂ ಸಮಾನತೆ ಕಲ್ಪಿಸಿಕೊಟ್ಟಿದೆ. ಜಾತಿ, ಭೇದದ ವ್ಯವಸ್ಥೆ ದೂರಾಗಬೇಕಿದೆ. ದಲಿತರನ್ನು ಕೀಳು ಮನೋಭಾವದಿಂದ ಕಾಣುವ ನೋಟ ಬದಲಾಗಿ ಎಲ್ಲರೂ ಸಹೋದರತ್ವದ ಹಾದಿಯಲ್ಲಿ ಸಾಗುವ ಕಾಲದಲ್ಲಿ ಕೊಲೆ ಮಾಡುವ ಮಟ್ಟಕ್ಕೆ ಇಳಿಯುವುದು ನಾಗರಿಕ ಸಮಾಜಕ್ಕೆ ಗೌರವ ತರುವಂಥದ್ದಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಮುಖಂಡರಾದ ಇಂದಿರಾ ಕೃಷ್ಣಪ್ಪ, ಅಲ್ಲಮಪ್ರಭು ಬೆಟದೂರ, ಬಸವರಾಜ ಶೀಲವಂತರ, ಎ.ಬಿ. ರಾಮಚಂದ್ರಪ್ಪ, ಮಿಥುನಕುಮಾರ ಮಾತನಾಡಿ, ಡಾ. ಅಂಬೇಡ್ಕರ್ ಅವರು ಸಂವಿಧಾನ ರಚಿಸಿ ದೇಶದ ಎಲ್ಲ ವರ್ಗಕ್ಕೆ ಸಮಾನತೆ ನೀಡಿದ್ದು, ಆದರೂ ದೇಶದಲ್ಲಿ ದಲಿತರ ಮೇಲೆ ನಿರಂತರ ದೌರ್ಜನ್ಯ ಹಲ್ಲೆ, ಕೊಲೆ ಹೀಗೆ ನಾನಾ ತೊಂದರೆ ನಡೆಯುತ್ತಿದ್ದು, ಈ ಬಗ್ಗೆ ಪರಿಗಣಿಸಿ ಸರ್ಕಾರ ದಲಿತರ ರಕ್ಷಣೆ ಮುಂದಾಗಬೇಕಿದೆ. ಈ ನಿಟ್ಟಿನಲ್ಲಿ ನಾವು ಹೋರಾಟದ ಮೂಲಕ ಡಿಸಿಗೆ ಮನವಿ ಮಾಡಲಾಗಿದೆ ಎಂದರು.ಹಕ್ಕೊತ್ತಾಯ:

ಜಿಲ್ಲೆಯನ್ನು ದಲಿತರ ಹಾಗೂ ಅಲ್ಪಸಂಖ್ಯಾತರ ದೌರ್ಜನ್ಯ ಪೀಡಿತವೆಂದು ಘೋಷಿಸಬೇಕು. ಸರ್ಕಾರ ಜಿಲ್ಲೆಯ ಈ ಸಮುದಾಯಗಳಿಗೆ ಸೂಕ್ತ ರಕ್ಷಣೆ ಒದಗಿಸುವ ವ್ವವಸ್ಥೆ ಮಾಡಿ ಸ್ವತಂತ್ರವಾಗಿ ಬದುಕಲು ಉದ್ಯೋಗ ಅವಕಾಶ ಸೃಷ್ಟಿಸುವ ಕೆಲಸ ಮಾಡಬೇಕು ಸೇರಿದಂತೆ ಮುಂದಾದ ಹಕ್ಕೊತ್ತಾಯ ಮಾಡಲಾಯಿತು.

ಈ ಸಂದರ್ಭ ಬಿ.ಪೀರ್‌ಭಾಷಾ, ಗ್ರಾಪಂ ಅಧ್ಯಕ್ಷ ಈಶಪ್ಪ ಕೋಳೂರು, ಬಿ.ಶ್ರೀಪಾದ ಭಟ್ಟ, ಟಿ. ರತ್ನಾಕರ, ಚಂದ್ರಶೇಖರ ಗೋರೆಬಾಳ, ಸಿಂಧನೂರ, ಬಂಗವಾದಿ ನಾರಾಯಣಪ್ಪ, ಹೊರಳವಾಡಿ ನಂಜುಂಡಸ್ವಾಮಿ, ಅನಿಲ ಹೊಸಮನಿ, ಚನ್ನು ಕಟ್ಟಿಮನಿ, ಆನಂದ, ಸಿದ್ದಾರ್ಥ ಮಾಲೂರ, ಸಿದ್ದಾರ್ಥ ಸಿಂಗೆ, ತೇಜಸ್ವಿ ವಿ.ಪಟೇಲ್, ಕಾರಿಗನೂರು ಷಣ್ಮೂಖಪ್ಪ, ಮೃತನ ತಾಯಿ, ಯಲ್ಲಮ್ಮ ಬಂಡಿಹಾಳ, ಭೀಮಣ್ಣ ಹವಳಿ ಸೇರಿದಂತೆ ನಾನಾ ದಲಿತ ಸಂಘಟನೆಗಳ ಪದಾಧಿಕಾರಿಗಳು, ಮಹಿಳೆಯರು, ಮುಖಂಡರು, ಯುವಕರು ಇದ್ದರು.