ರಾಮನಾಥಪುರದ ಪ್ರಸನ್ನ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ಸಂಘ ಯಾತ್ರೆ ಸಂಘಟನೆ ಮತ್ತು ಸೇವೆಗಳ 100 ವರ್ಷಗಳ ರಾಷ್ಟ್ರೋತ್ಥಾನ ಮುದ್ರಣಾಲಯದಲ್ಲಿ ಮಾಡಿರುವ "ಸಂಘ ಶತಾಬ್ಧಿ ಸಂಘ ಯಾತ್ರೆ " ಎಂಬ ಪುಸ್ತಕವನ್ನು ದೇವಾಲಯದ ಸನ್ನಿಧಿಯಲ್ಲಿ ಪೂಜೆ ಮಾಡಿದ ನಂತರ ಬಿಡುಗಡೆ ಮಾಡಿ ಮಾತನಾಡಿದ ಅವರು, ರಾಷ್ಟ್ರೀಯ ಸ್ವಯಂಸೇವಕ ಸಂಘವು ತನ್ನ ಸ್ಥಾಪನೆಯ 100 ವರ್ಷಗಳನ್ನು ಪೂರೈಸಿದೆ. ಪೂಜನೀಯ ಡಾ. ಕೇಶವ ಬಲಿರಾಮ ಹೆಡಗೇವಾರ್ ಅವರು 1982 ವಿಕ್ರಮ ಸಂವತ್ಸರದ ವಿಜಯದಶಮಿಯಂದು ( ಸೆಪ್ಟೆಂಬರ್ 27-1925) ರಂದು ನಾಗಪುರದಲ್ಲಿ ( ಮಹಾರಾಷ್ಟ್ರ) ಸಂಘವನ್ನು ಸ್ಥಾಪಿಸಿದರು ಎಂದರು.
ಕನ್ನಡಪ್ರಭ ವಾರ್ತೆ ರಾಮನಾಥಪುರಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಆರೋಗ್ಯ, ಶಿಕ್ಷಣ, ಸಂಸ್ಕಾರ ಮತ್ತು ಸ್ವಾವಲಂಬನೆಯ ಕ್ಷೇತ್ರಗಳಲ್ಲಿ ಒಂದು ಲಕ್ಷ ಮೂವತ್ತು ಸಾವಿರಕ್ಕೂ ಹೆಚ್ಚು ಸೇವಾಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ. ಸಾಮಾಜಿಕ ಪರಿವರ್ತನೆಯ ಈ ಪ್ರಯತ್ನಗಳಿಗೆ ಸಮಾಜದಿಂದ ಅಪಾರ ಸಹಕಾರ ಮತ್ತು ಬೆಂಬಲ ಸಿಗುತ್ತಿದೆ ಎಂದು ಸ್ವಯಂ ಸೇವಕ ತಾಲೂಕು ಸಂಘ ಚಾಲಕ್ ಸೀಬಹಳ್ಳಿ ಸೋಮಶೇಖರ್ ತಿಳಿಸಿದರು. ರಾಮನಾಥಪುರದ ಪ್ರಸನ್ನ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ಸಂಘ ಯಾತ್ರೆ ಸಂಘಟನೆ ಮತ್ತು ಸೇವೆಗಳ 100 ವರ್ಷಗಳ ರಾಷ್ಟ್ರೋತ್ಥಾನ ಮುದ್ರಣಾಲಯದಲ್ಲಿ ಮಾಡಿರುವ "ಸಂಘ ಶತಾಬ್ಧಿ ಸಂಘ ಯಾತ್ರೆ " ಎಂಬ ಪುಸ್ತಕವನ್ನು ದೇವಾಲಯದ ಸನ್ನಿಧಿಯಲ್ಲಿ ಪೂಜೆ ಮಾಡಿದ ನಂತರ ಬಿಡುಗಡೆ ಮಾಡಿ ಮಾತನಾಡಿದ ಅವರು, ರಾಷ್ಟ್ರೀಯ ಸ್ವಯಂಸೇವಕ ಸಂಘವು ತನ್ನ ಸ್ಥಾಪನೆಯ 100 ವರ್ಷಗಳನ್ನು ಪೂರೈಸಿದೆ. ಪೂಜನೀಯ ಡಾ. ಕೇಶವ ಬಲಿರಾಮ ಹೆಡಗೇವಾರ್ ಅವರು 1982 ವಿಕ್ರಮ ಸಂವತ್ಸರದ ವಿಜಯದಶಮಿಯಂದು ( ಸೆಪ್ಟೆಂಬರ್ 27-1925) ರಂದು ನಾಗಪುರದಲ್ಲಿ ( ಮಹಾರಾಷ್ಟ್ರ) ಸಂಘವನ್ನು ಸ್ಥಾಪಿಸಿದರು. ಇಡೀ ಹಿಂದೂ ಸಮಾಜವನ್ನು ಸಂಘಟಿಸುವುದು ಮತ್ತು ಹಿಂದುತ್ವದ ಅಡಿಪಾಯದ ಮೇಲೆ ನಮ್ಮ ರಾಷ್ಟ್ರವಾದ ಭಾರತದವನ್ನು ಶಕ್ತಿಶಾಲಿಯಾಗಿ ಮತ್ತು ವೈಭವಯುತವಾಗಿಸುವುದು ಸಂಘದ ಉದ್ದೇಶವಾಗಿತ್ತು ಎಂದು ಅರಕಲಗೂಡು ತಾಲ್ಲೂಕು ಸ್ವಯಂ ಸೇವಕ ಸಂ ಸೋಮಶೇಖರ್ ಅವರು ತಿಳಿಸಿದರು.
ದೇವಾಲಯದ ಅರ್ಚಕರಾದ ವೇ. ರಾಘವಭಟ್, ಶ್ರೀನಾಥ್, ಪ್ರಹ್ಲಾದ್, ಪ್ರಸನ್ನ, ಸಂಘದ ಸದಸ್ಯರಾದ ತಿಪ್ಪೇಶ್, ಗೌತಮ್, ಅರ್.ಎಸ್. ದಿಲೀಪ್ ಅತ್ರೇಯ, ಎಂ.ಎನ್. ಕುಮಾರಸ್ವಾಮಿ ಮುಂತಾದವರು ಇದ್ದರು.