ಸಾರಾಂಶ
ಕಿತ್ತೂರು ರಾಣಿ ಚೆನ್ನಮ್ಮನ ಬಲಗೈ ಬಂಟನಾಗಿದ್ದ ರಾಯಣ್ಣ ಈಸ್ಟ್ ಇಂಡಿಯಾ ಕಂಪನಿ ವಿರುದ್ದ ಹೋರಾಟ ಮಾಡಿದ ಸಾಹಸಿಗ. ವಿಶೇಷ ಯುದ್ಧ ಕೌಶಲಗಳನ್ನು ನಾಡಿಗೆ ಪರಿಚಯಿಸಿದ ಹಿರಿಮೆ ಸಂಗೊಳ್ಳಿ ರಾಯಣ್ಣ ಅವರದ್ದಾಗಿದೆ.
ಹಗರಿಬೊಮ್ಮನಹಳ್ಳಿ: ಸಂಗೊಳ್ಳಿ ರಾಯಣ್ಣ ಬ್ರಿಟಿಷರ ವಿರುದ್ಧ ಹೋರಾಡಿದ ಕೆಚ್ಚೆದೆಯ ಸ್ವಾತಂತ್ರ್ಯ ಹೋರಾಟಗಾರ ಎಂದು ಗ್ರಾಪಂ ಮಾಜಿ ಅಧ್ಯಕ್ಷ ಮುಟುಗನಹಳ್ಳಿ ಕೊಟ್ರೇಶ್ ತಿಳಿಸಿದರು.
ತಾಲೂಕಿನ ಮುಟುಗನಹಳ್ಳಿಯಲ್ಲಿ ಗ್ರಾಮಸ್ಥರಿಂದ ಒಟ್ಟು ₹೫ ಲಕ್ಷ ಅಂದಾಜು ಮೊತ್ತದಲ್ಲಿ ನಿರ್ಮಿಸಲಾದ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದರು.ಕಿತ್ತೂರು ರಾಣಿ ಚೆನ್ನಮ್ಮನ ಬಲಗೈ ಬಂಟನಾಗಿದ್ದ ರಾಯಣ್ಣ ಈಸ್ಟ್ ಇಂಡಿಯಾ ಕಂಪನಿ ವಿರುದ್ದ ಹೋರಾಟ ಮಾಡಿದ ಸಾಹಸಿಗ. ವಿಶೇಷ ಯುದ್ಧ ಕೌಶಲಗಳನ್ನು ನಾಡಿಗೆ ಪರಿಚಯಿಸಿದ ಹಿರಿಮೆ ಸಂಗೊಳ್ಳಿ ರಾಯಣ್ಣ ಅವರದ್ದಾಗಿದೆ ಎಂದರು.
ಗದ್ದಿಕೇರಿ ಚರಂತೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮುಖಂಡ ಅಶೋಕ ಕನಕೇರಿ ಮಾತನಾಡಿದರು. ತಾಲೂಕು ಹಾಲುಮತ ಸಮಾಜದ ಅಧ್ಯಕ್ಷ ಶಿವರಾಜ, ಗ್ರಾಪಂ ಅಧ್ಯಕ್ಷ ಬೋವಿ ಶ್ರೀಕಾಂತ, ಉಪಾಧ್ಯಕ್ಷೆ ಎಚ್. ಭಾಗ್ಯಮ್ಮ, ಮಾಜಿ ಅಧ್ಯಕ್ಷ ನರಿ ಸಣ್ಣಬಸಪ್ಪ, ಮಂಡಲ ಪಂಚಾಯಿತಿ ಉಪ ಪ್ರಧಾನ ನೇತ್ರಾನಂದಪ್ಪ, ಸದಸ್ಯರಾದ ಮುದೆಗೌಡರ ಕರಿಬಸಮ್ಮ, ತಳವಾರ ವಿರುಪಾಕ್ಷ, ಸಂಗೊಳ್ಳಿ ರಾಯಣ್ಣ ಸಮಿತಿ ಅಧ್ಯಕ್ಷ ಮಾಸ್ತಿ ಗಂಗಪ್ಪ, ಸಮಿತಿಯ ಸೊನ್ನದ ನಿಂಗಪ್ಪ, ಕರಿಬಸಪ್ಪ, ಮುಖಂಡರಾದ ಮುದೇಗೌಡರ ಮಂಜುನಾಥ, ಎಂ. ಬಸವರಾಜ, ಹಮ್ಮಿಗಿ ಪರುಸಪ್ಪ, ಕೊಂಗಾಲಿ ಪರಶುರಾಮ, ಶಿವಾನಂದಪ್ಪ, ದಿಡುಗಪ್ಪ, ಕನಕಪ್ಪ, ತಳವಾರ ದೊಡ್ಡಬಸಪ್ಪ, ನೇಕಾರ ಪಂಪಣ್ಣ, ಬಡಿಗೇರ ಮಾರುತೇಶ ಇತರರಿದ್ದರು.ಚಿನ್ನಗೌಡರ ನಾಗಪ್ಪ, ಪಿ.ಸಿ. ದೊಡ್ಡಬಸಪ್ಪ, ಕನಕೇರಿ ರಾಜೇಶ್ ನಿರ್ವಹಿಸಿದರು. ಇದಕ್ಕೂ ಮುನ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ಡೊಳ್ಳು ಹಲಗೆ ಸೇರಿ ವಿವಿಧ ವಾದ್ಯಗೋಷ್ಠಿಗಳೊಂದಿಗೆ ರಾಯಣ್ಣ ಪ್ರತಿಮೆ ಮೆರವಣಿಗೆ ನಡೆಸಲಾಯಿತು. ಮಹಿಳೆಯರು ಕಳಸ ಕುಂಭಗಳೊಂದಿಗೆ ಪಾಲ್ಗೊಂಡಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))