ಸಮಾಜ ತಿದ್ದುವಲ್ಲಿ ಮಠ, ಮಂದಿರಗಳ ಪಾತ್ರ ಮುಖ್ಯ

| Published : Jan 05 2024, 01:45 AM IST

ಸಾರಾಂಶ

ಸಮಾಜ ತಿದ್ದುವಲ್ಲಿ ಮಠ- ಮಂದಿರಗಳ ಪಾತ್ರ ಮುಖ್ಯವಾಗಿದೆ. ಧರ್ಮಸಭೆಗಳಲ್ಲಿ ಪ್ರತಿಯೊಬ್ಬರು ಸಕ್ರೀಯವಾಗಿ ಪಾಲ್ಗೊಂಡು ಜೀವನ ಪಾವನ ಮಾಡಿಕೊಳ್ಳಬೇಕು. ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಟ್ಟರೆ ರಾಷ್ಟ್ರದ ಭವಿಷ್ಯ ಉಜ್ವಲವಾಗಲಿದೆ

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಸಮಾಜದಲ್ಲಿ ಉತ್ತಮ ಸಂಸ್ಕಾರ, ಸಂಸ್ಕ್ರತಿ ಧಾರೆ ಎರೆದು ತ್ಯಾಗ ಬಲಿದಾನಗೈದ ಸಾಧಕರನ್ನು ಸ್ಮರಿಸಿ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಿದರೆ ಜೀವನ ಸಾರ್ಥಕವಾಗುವುದು ಎಂದು ಸವದತ್ತಿ ತಾಲೂಕಿನ ಹೂಲಿಯ ಶ್ರೀ ಸಾಭಯ್ಯನವರಮಠದ ಪೂಜ್ಯ ಉಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಬೈಲಹೊಂಗಲ ತಾಲೂಕಿನ ಸುಕ್ಷೇತ್ರ ಸಂಗೊಳ್ಳಿ ಗ್ರಾಮದಲ್ಲಿ ನಡೆದ ಶ್ರೀ ಗುರು ಸಿದ್ದಲಿಂಗೇಶ್ವರರ ಜಾತ್ರಾ ಮಹೋತ್ಸವ, ಲಿಂ.ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳ 19 ನೇ ಪುಣ್ಯ ಸ್ಮರಣೋತ್ಸವ, ಅಯ್ಯಾಚಾರ-ಶಿವದೀಕ್ಷೆ ಜನಜಾಗೃತಿ ಧರ್ಮಸಭೆ ಕಾರ್ಯಕ್ರಮ ಉದ್ಗಾಟಿಸಿ ಮಾತನಾಡಿದ ಅವರು, ಸಮಾಜ ತಿದ್ದುವಲ್ಲಿ ಮಠ- ಮಂದಿರಗಳ ಪಾತ್ರ ಮುಖ್ಯವಾಗಿದೆ. ಧರ್ಮಸಭೆಗಳಲ್ಲಿ ಪ್ರತಿಯೊಬ್ಬರು ಸಕ್ರೀಯವಾಗಿ ಪಾಲ್ಗೊಂಡು ಜೀವನ ಪಾವನ ಮಾಡಿಕೊಳ್ಳಬೇಕು. ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಟ್ಟರೆ ರಾಷ್ಟ್ರದ ಭವಿಷ್ಯ ಉಜ್ವಲವಾಗಲಿದೆ ಎಂದರು. ಬೆಳಗಾವಿ ವಚನಾಮೃತ ಮಂದಿರದ ಪೂಜ್ಯ ನಿಶ್ಚಲ ಸ್ವರೂಪ ಗೂರುಜಿ ಆಶೀರ್ವಚನ ನೀಡಿದರು. ಸಂಗೊಳ್ಳಿಯ ಹಿರೇಮಠ ಸಂಸ್ಥಾನದ ಪೂಜ್ಯ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ಧರ್ಮಸಭೆಯ ಅಧ್ಯಕ್ಷತೆ ವಹಿಸಿದ್ದರು. ಹೊಸೂರಿನ ಶ್ರೀ ಮಡಿವಾಳೇಶ್ವರ ಮಠದ ಪೂಜ್ಯ ಗಂಗಾಧರ ಸ್ವಾಮೀಜಿ, ಕಬ್ಬೂರು ಗೌರಿಶಂಕರ ಮಠದ ಪೂಜ್ಯ ರೇವಣಸಿದ್ದ ಶಿವಾಚಾರ್ಯ ಸ್ವಾಮೀಜಿ, ಕಾಕತಿ ಶಿವಪೂಜಿ ಮಠದ ರಾಚಯ್ಯ ಸ್ವಾಮೀಜಿ, ಶಾಸಕ ಮಹಾಂತೇಶ ಕೌಜಲಗಿ, ಸಿದ್ದಲಿಂಗಯ್ಯ ವಕ್ಕುಂದಮಠ, ಗ್ರಾಮದ ಶ್ರೀ ಗ್ರಾಮದೇವಿ ಕಮೀಟಿಯ ಅಧ್ಯಕ್ಷ ಬಸವರಾಜ ಕೊಡ್ಲಿ, ಉದ್ಯಮಿ ವಿಜಯ ಮೆಟಗುಡ್ಡ, ಬೆಳವಡಿಯ ಶ್ರೀ ಸೋಮೇಶ್ವರ ಸಕ್ಕರೆ ಕಾರ್ಖಾನೆಯ ನಿರ್ದೇಶಕಿ ಅನಿತಾ ಮೆಟಗುಡ್ಡ, ಯುವ ಧುರೀಣ ಗುರು ಮೆಟಗುಡ್ಡ, ವೈದ್ಯ ಬಸವರಾಜ ಹಿರೇಮಠ, ಅಭಿಯಂತರ ಮಹೇಶ ಹೂಲಿ ವೇದಿಕೆ ಮೇಲಿದ್ದರು. ಸುಭಾಶ ತುರಮರಿ, ಸಂತೋಷ ಹಡಪದ, ತಾಲೂಕು ಕಜಾಪ ವಕ್ತಾರ ಮಹಾಂತೇಶ ರಾಜಗೋಳಿ ಹಾಗೂ ಗ್ರಾಪಂ ಆಡಳಿತ ಮಂಡಳಿ, ಸಂಗೊಳ್ಳಿಯ ಪಿಕೆಪಿಎಸ್‌ನ ಆಡಳಿತ ಮಂಡಳಿ, ಗ್ರಾಮದ ವಿವಿಧ ಸಂಘಟಣೆಗಳು, ಗ್ರಾಮಸ್ಥರು ಇದ್ದರು. ಮಹೇಶ ಹಿರೇಮಠ ಸ್ವಾಗತಿಸಿದರು. ಉಮೇಶ ಲಾಳ ನಿರೂಪಿಸಿದರು. ಆಕಾಶ ಮಲಬಣ್ಣವರ ವಂದಿಸಿದರು.