ಶಾಲಾ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಪ್ಯಾಡ್ ವಿತರಣೆ

| Published : Dec 24 2023, 01:45 AM IST

ಶಾಲಾ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಪ್ಯಾಡ್ ವಿತರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಆರೋಗ್ಯ ಮತ್ತು ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆಯನ್ನ ಕೊಡಬೇಕು. ವಿದ್ಯಾರ್ಥಿನಿಯರು ತಿಂಗಳಿಗೆ ಎರಡು ಮೂರು ದಿನ ಗೈರು ಆಗುವುದು ಅವರ ಓದಿಗೆ ಅಡಚಣೆ ಆಗುವುದನ್ನು ಗಮನಿಸಿ ಸುರಕ್ಷತಾ ಪ್ಯಾಡನ್ನು ನೀಡಲಾಯಿತು. ಪ್ಯಾಡ್ ಖರೀದಿಸಲು ಜನೌಷಧಿ ಅಂಗಡಿಗಳಲ್ಲಿ ಖರೀದಿಸಿ ಅಲ್ಲಿ ಮಾರುಕಟ್ಟೆ ಗಿಂತ ಕಡಿಮೆ ಬೆಲೆಯಲ್ಲಿ ದೊರಕುತ್ತದೆ.

ಕನ್ನಡಪ್ರಭ ವಾರ್ತೆ ಅರಸೀಕೆರೆ

ವಿದ್ಯಾರ್ಥಿನಿಯರು ನಿಮಗೆ ಯಾವ ವಿಷಯದ ಬಗ್ಗೆ ಅಭಿರುಚಿ ಇರುತ್ತದೆಯೋ ಮೋದಿಗೆ ಅಂತ ಶಿಕ್ಷಣವನ್ನು ಆಯ್ಕೆ ಮಾಡಿಕೊಳ್ಳಿ, ಅದರತ್ತ ಹೆಚ್ಚಿನ ಆಸಕ್ತಿ ವಹಿಸಿ ಎಂದು ಚಿಕ್ಕಮಗಳೂರು ಎಸ್‌ಬಿಐ ರೀಜನಲ್ ಮ್ಯಾನೇಜರ್ ಕನ್ನಯ್ ಲಾಲ್ ಗೋಪಾಲಿ ವಿದ್ಯಾರ್ಥಿನಿಯರಿಗೆ ಕರೆ ನೀಡಿದರು.

ಅವರು ನಗರದ ಸರ್ಕಾರಿ ಬಾಲಕಿಯರ ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಅರಸೀಕೆರೆ ಎಸ್‌ಬಿಐ ಮುಖ್ಯ ಶಾಖೆ ವತಿಯಿಂದ ಸಾಮಾಜಿಕ ಸ್ಪಂದನೆ ಯೋಜನೆಯಡಿ ಹೆಣ್ಣು ಮಕ್ಕಳಿಗೆ ಸ್ಯಾನಿಟರಿ ಪ್ಯಾಡ್ ವಿತರಣಾ ಸಮಾರಂಭದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣಕ್ಕೆ ಸಾಕಷ್ಟು ಸೌಲಭ್ಯಗಳು ಇವೆ. ಉನ್ನತ ಸ್ಥಾನಗಳನ್ನು ಪಡೆಯುವ ನಿಟ್ಟಿನಲ್ಲಿ ನಿಮ್ಮ ವ್ಯಾಸಂಗ ಮುಂದುವರಿಯಬೇಕು. ದೊಡ್ಡ ಕನಸುಗಳನ್ನು ಕಾಣಿ ಅದನ್ನು ನನಸು ಮಾಡುವ ನಿಟ್ಟಿನಲ್ಲಿ ಆಸಕ್ತಿ ವಹಿಸಿ ಐಎಎಸ್, ಐಪಿಎಸ್ ಸ್ಥಾನಗಳನ್ನು ನೀವುಗಳು ಅಲಂಕರಿಸಬೇಕು. ಈ ನಿಟ್ಟಿನಲ್ಲಿ ನಿಮ್ಮ ಗುರಿ ನಿಶ್ಚಲವಾಗಿರಲಿ ಸಂಕೋಚ ಪ್ರವೃತ್ತಿಯನ್ನು ಬಿಡಿ ಆತ್ಮವಿಶ್ವಾಸ ನಿಮ್ಮಲ್ಲಿರಲಿ ಎಂದರು.

ಶುಚಿತ್ವದ ಬಗ್ಗೆ ಮಹಿಳಾ ವೈದ್ಯರು ಈಗಾಗಲೇ ನಿಮಗೆ ಸಾಕಷ್ಟು ಮಾಹಿತಿಗಳನ್ನು ಮಾರ್ಗದರ್ಶನವನ್ನು ನೀಡಿದ್ದಾರೆ. ಅದನ್ನು ನೀವು ಪಾಲಿಸುವ ನಿಟ್ಟಿನಲ್ಲಿ ಆಸಕ್ತಿ ವಹಿಸಬೇಕು, ನಿಮ್ಮ ಹತ್ತಿರದ ನಮ್ಮ ಶಾಖೆಯಲ್ಲಿ ಉಳಿತಾಯ ಖಾತೆಯನ್ನು ತೆರೆಯಿರಿ ಎಂದು ಮನವಿ ಮಾಡಿದ ಅವರು, ನಿಮ್ಮ ಪೋಷಕರಿಗೆ ಹೇಳಿ ಯಾವುದೇ ಬ್ಯಾಂಕುಗಳಿಂದ ಒ ಟಿ ಪಿ ಕೇಳುವುದಿಲ್ಲ ನಿಮ್ಮ ಆಧಾರ್ ಅಥವಾ ಬ್ಯಾಂಕ್ ಖಾತೆ ನಂಬರ್ ಫೋನ್ ಮೂಲಕ ಕೇಳುವುದಿಲ್ಲ ಇಂಥವುಗಳಿಗೆ ಮರುಳಾಗಬೇಡಿ ಎಂದು ಪೋಷಕರನ್ನು ಎಚ್ಚರಿಸಿ ಎಂದು ಅವರು ಸಲಹೆ ಇತ್ತರು.

ಚಿಕ್ಕಮಗಳೂರಿನ ಎಸ್‌.ಬಿ.ಐ ಚೀಫ್‌ ಮ್ಯಾನೇಜರ್ ನಿವೇದಿತಾ ಐಗಳ್ ಆರೋಗ್ಯವೇ ಭಾಗ್ಯ ಆರೋಗ್ಯಕ್ಕೆ ಮತ್ತು ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆಯನ್ನ ಕೊಡಿ, ಮಹಿಳಾ ವೈದ್ಯರು ನಿಮಗೆ ನೀಡಿರುವ ಸಲಹೆ ಮಾರ್ಗದರ್ಶನವನ್ನು ಕಟ್ಟುನಿಟ್ಟಾಗಿ ನೀವು ಪಾಲಿಸಿ ಮತ್ತು ಇತರರಿಗೂ ನೀವು ಮಾಹಿತಿ ಕೊಡಿ ಎಂದು ಕರೆ ನೀಡಿದರು.

ಅರಸೀಕೆರೆ ಎಸ್ ಬಿ.ಐ. ಮುಖ್ಯ ಶಾಖೆಯ ವ್ಯವಸ್ಥಾಪಕ ಪ್ರಶಾಂತ್ ಮಾತನಾಡಿ, ವಿದ್ಯಾರ್ಥಿನಿಯರು ತಿಂಗಳಿಗೆ ಎರಡು ಮೂರು ದಿನ ಗೈರು ಆಗುವುದು ಅವರ ಓದಿಗೆ ಅಡಚಣೆ ಆಗುವುದನ್ನು ಗಮನಿಸಿ ನಾವು ಸುರಕ್ಷತಾ ಪ್ಯಾಡನ್ನು ನೀಡುತ್ತಿದ್ದೇವೆ. ನೀವು ಪ್ಯಾಡ್ ಖರೀದಿಸಲು ಜನೌಷಧಿ ಅಂಗಡಿಗಳಲ್ಲಿ ಖರೀದಿಸಿ ಅಲ್ಲಿ ಮಾರುಕಟ್ಟೆ ಗಿಂತ ಕಡಿಮೆ ಬೆಲೆಯಲ್ಲಿ ದೊರಕುತ್ತದೆ ಎಂದು ಸಲಹೆ ಇತ್ತರು.

ಶಿಕ್ಷಣ ಸಂಯೋಜಕ ಗಿರೀಶ್ ಮಾತನಾಡಿ, ಸರಕಾರಿ ಶಾಲಾ ಮಕ್ಕಳಿಗೆ ಬ್ಯಾಂಕ್ ವತಿಯಿಂದ ಇಂತಹ ಅತ್ಯಗತ್ಯ ವಸ್ತುಗಳನ್ನು ಕೊಡುವ ಮೂಲಕ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ತೋರಿರುವ ಬ್ಯಾಂಕ್‌ನ ಎಲ್ಲಾ ಅಧಿಕಾರಿ ವರ್ಗಕ್ಕೆ ಇಲಾಖೆಯ ಪರವಾಗಿ ಕೃತಜ್ಞತೆ ಹೇಳಿದರು.

ಶಾಲಾ ಉಪ ಪ್ರಾಂಶುಪಾಲ ಶಶಿಧರ್ ಮಾತನಾಡಿ, ಎಸ್‌ಬಿಐ ನವರು ನಮ್ಮ ಶಾಲೆಯನ್ನು ಆಯ್ಕೆ ಮಾಡಿಕೊಂಡ ನಮ್ಮ ವಿದ್ಯಾರ್ಥಿನಿಯರಿಗೆ ಒಂದು ಸೌಲಭ್ಯವನ್ನು ನೀಡಿದ್ದಾರೆ. ಇದಕ್ಕೆ ಪೋಷಕರ ಪರವಾಗಿ ಕೃತಜ್ಞತೆಗಳನ್ನು ನಾವು ಹೇಳುತ್ತೇವೆ. ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ ಇದೆ ಬ್ಯಾಂಕ್ ವತಿಯಿಂದ ಒಂದು ಆರ್.ಒ. ಯೂನಿಟ್‌ ಅನ್ನು ದೊರಕಿಸಿ ಕೊಟ್ಟರೆ ಬಹಳ ಸಹಾಯವಾಗುತ್ತದೆ ಎಂದು ಮನವಿ ಮಾಡಿದರು.