ಬ್ಯಾಡಗಿ ತಾಲೂಕಿನ ಅತ್ತಿಕಟ್ಟಿ ಗ್ರಾಮದ ನಿವಾಸಿ ಸಂಜೀವ ಬಸಪ್ಪ ಕುಲಮಿ ಅವರು ಬ್ಯಾಡಗಿ ಪ್ರಾಥಮಿಕ ಭೂ ಅಭಿವೃದ್ಧಿ (ಪಿಎಲ್‌ಡಿ) ಬ್ಯಾಂಕ್‌ನ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ಬ್ಯಾಡಗಿ: ತಾಲೂಕಿನ ಅತ್ತಿಕಟ್ಟಿ ಗ್ರಾಮದ ನಿವಾಸಿ ಸಂಜೀವ ಬಸಪ್ಪ ಕುಲಮಿ ಅವರು ಬ್ಯಾಡಗಿ ಪ್ರಾಥಮಿಕ ಭೂ ಅಭಿವೃದ್ಧಿ (ಪಿಎಲ್‌ಡಿ) ಬ್ಯಾಂಕ್‌ನ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ಶನಿವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಸಂಜೀವ ಕುಲಮಿ ಅವರ ಒಂದೇ ನಾಮಪತ್ರ ಸಲ್ಲಿಸಿದ್ದು ಈ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿ ಜಿ.ಬಿ. ಲೋಕೇಶ ಅವರು ಸಂಜೀವ ಕುಲಮಿ ಅವರನ್ನು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾಗಿ ಘೋಷಿಸಿದರು.ನೂತನ ಉಪಾಧ್ಯಕ್ಷರನ್ನು ಸನ್ಮಾನಿಸಿ ಮಾತನಾಡಿದ ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಪಿಎಲ್‌ಡಿ ಬ್ಯಾಂಕ್ ರೈತರ ಅಭಿವೃದ್ಧಿಗೆ ಪ್ರಮುಖ ಹಣಕಾಸು ಸಂಸ್ಥೆಯಾಗಿದ್ದು, ಅದರ ಬೆಳವಣಿಗೆಗಾಗಿ ಎಲ್ಲರೂ ಪಕ್ಷಾತೀತವಾಗಿ ಕಾರ್ಯನಿರ್ವಹಿಸುವಂತೆ ಕರೆ ನೀಡಿದರು. ತಮ್ಮ ಶಾಸಕತ್ವದ ಅವಧಿಯಲ್ಲಿ, ವಿಶೇಷವಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರದ ಅವಧಿಯಲ್ಲಿ ಬ್ಯಾಂಕ್ ಅಭಿವೃದ್ಧಿಗೆ ಸಾಕಷ್ಟು ಅನುದಾನ ಬಿಡುಗಡೆ ಮಾಡಿಸಲಾಗಿತ್ತು. ಅದರ ಪರಿಣಾಮ ಬ್ಯಾಂಕ್ ಆರ್ಥಿಕವಾಗಿ ಸದೃಢವಾಗಿತ್ತು. ಆದರೆ ಈಗ ಅಭಿವೃದ್ಧಿಗೆ ಅಗತ್ಯವಾದ ಸಹಾಯಧನ ಲಭ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಒಂದು ಹಂತದಲ್ಲಿ ಮುಚ್ಚುವ ಪರಿಸ್ಥಿತಿಗೆ ತಲುಪಿದ್ದ ಪಿಎಲ್‌ಡಿ ಬ್ಯಾಂಕ್‌ಗಳನ್ನು ಪುನಶ್ಚೇತನಗೊಳಿಸಿ ರೈತರಿಗೆ ಅನುಕೂಲ ಕಲ್ಪಿಸಲಾಗಿತ್ತು. ಈಗ ಬ್ಯಾಂಕ್‌ನ ಅಭಿವೃದ್ಧಿ ಮತ್ತು ಅಸ್ತಿತ್ವ ಉಳಿಸಬೇಕಾದರೆ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಹೇಳಿದರು.ತಾಲೂಕಾಧ್ಯಕ್ಷ ನಿಂಗಪ್ಪ ಬಟ್ಟಲಕಟ್ಟಿ ಮಾತನಾಡಿ, ಪಕ್ಷಗಳು ಬೇರೆ ಇರಬಹುದು, ಆದರೆ ರೈತರು ಎಲ್ಲರಿಗೂ ಒಂದೇ ಬ್ಯಾಂಕ್‌ನಲ್ಲಿ ಯಾವುದೇ ಪಕ್ಷಪಾತಕ್ಕೆ ಅವಕಾಶ ನೀಡದೆ, ಸುಮಾರು 9 ಕೋಟಿ ಸಾಲ ಬಾಕಿಯನ್ನು ವಸೂಲಿ ಮಾಡಿ ಆರ್ಥಿಕ ಸ್ಥಿತಿ ಬಲಪಡಿಸಬೇಕು, ಪಾರದರ್ಶಕ ಆಡಳಿತ ನಡೆಸಿದರೆ ಮಾತ್ರ ಬ್ಯಾಂಕ್ ಇನ್ನಷ್ಟು ಅಭಿವೃದ್ಧಿಯಾಗುತ್ತದೆ ಎಂದು ಸಲಹೆ ನೀಡಿದರು.
ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ವಿಜಯ ಮಾಳಗಿ ಮಾತನಾಡಿ, ಹಿರೇಕೆರೂರು ಪಿಎಲ್‌ಡಿ ಬ್ಯಾಂಕ್ ಸುಮಾರು 9 ಕೋಟಿ ಸಹಾಯಧನ ಸೇರಿದಂತೆ ಜಿಲ್ಲೆಯ ಹಲವು ತಾಲೂಕಿನ ಬ್ಯಾಂಕ್‌ಗೆ ಸರಕಾರ ಹಣ ನೀಡಿರುವಾಗ, ಬ್ಯಾಡಗಿ ಪಿಎಲ್‌ಡಿ ಬ್ಯಾಂಕ್‌ಗೆ ಸಮರ್ಪಕ ಸಹಾಯಧನ ನೀಡದಿರುವುದು ಸರಿಯಲ್ಲ. ಸರಕಾರ ಈ ತಾರತಮ್ಯ ನೀತಿಯನ್ನು ಕೈಬಿಟ್ಟು ಬ್ಯಾಡಗಿ ಬ್ಯಾಂಕ್‌ಗೂ ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.ಈ ಸಂದರ್ಭದಲ್ಲಿ ನೂತನ ಉಪಾಧ್ಯಕ್ಷ ಸಂಜೀವ ಬಸಪ್ಪ ಕುಲಮಿ, ಮಾರುತಿ ಪಾಸಿ, ವಿನಯ ಹಿರೇಮಠ, ಈರಣ್ಣ ಚೌಟಿ, ಶಿವಯೋಗಿ ಉಕ್ಕುಂದ, ಪ್ರವೀಣ ಪಾಟೀಲ, ಸುಭಾಸ ಮಾಳಗಿ, ಶೇಷಣ್ಣ ಕಮ್ಮಾರ, ಸೇರಿದಂತೆ ಬ್ಯಾಂಕ್‌ನ ಸರ್ವ ನಿರ್ದೇಶಕರು, ಸಿಬ್ಬಂದಿ, ರೈತರು ಹಾಗೂ ಗಣ್ಯರು ಉಪಸ್ಥಿತರಿದ್ದರು.