ಆವಲಗುರ್ಕಿ ಬಳಿಯ ಇಶಾ ಫೌಂಡೇಶನ್‌ನ 112 ಅಡಿಯ ಶಿವನ ವಿಗ್ರಹದ ಸದ್ಗುರು ಸನ್ನಿಧಿಯಲ್ಲಿ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ತಾಲೂಕಿನ ಆವಲಗುರ್ಕಿ ಬಳಿಯ ಇಶಾ ಫೌಂಡೇಶನ್‌ನ 112 ಅಡಿಯ ಶಿವನ ವಿಗ್ರಹದ ಸದ್ಗುರು ಸನ್ನಿಧಿಯಲ್ಲಿ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು.ಮುಂಜಾನೆಯಿಂದಲೇ ಭಕ್ತರು ವಿವಿಧ ಅರ್ಪಣೆಗಳಲ್ಲಿ ಭಾಗವಹಿಸಿದರು. ಅನನ್ಯ ಮಣ್ಣು ಸೇವೆ (ತಮ್ಮ ಕೈಯಾರೆ ನಾಗನಿಗೆ ಭೂಮಿ ಅಥವಾ ಮಣ್ಣನ್ನು ಲೇಪಿಸುವ ಪ್ರಕ್ರಿಯೆ), ಯೋಗೇಶ್ವರ ಲಿಂಗ ಸೇವೆ, ಧಾನ್ಯ ಸಮರ್ಪಣೆ (ನಾಗನಿಗೆ ಭೂಮಿ, ಯೋಗೇಶ್ವರ ಲಿಂಗಕ್ಕೆ ಕ್ಷೀರ ಮತ್ತು ನಂದಿ ಹಾಗೂ ಮಹಾಶೂಲಕ್ಕೆ ಹೂವು ಅರ್ಪಣೆ) ಮತ್ತು ಅನನ್ಯ ಯೋಗ ಸಂಧ್ಯಾ ಮುಂತಾದ ಕಾರ್ಯಗಳು ನಡೆದವು.
ಹಬ್ಬವು ಅವರೆಬೇಳೆ ಖಾದ್ಯಗಳು ಮತ್ತು ಅವರೆಬೇಳೆ ಹೋಳಿಗೆಯಿಂದ ಹಿಡಿದು ಅವರೆಬೇಳೆ ಪಾವ್ ಭಾಜಿ ಮತ್ತು ಅದಕ್ಕೂ ಮೀರಿದ ಈ ಸಾಂಪ್ರದಾಯಿಕ ಅವರೆಕಾಳುಗಳಿಂದ ತಯಾರಿಸಿದ ಸಾಂಪ್ರದಾಯಿಕ ಖಾದ್ಯಗಳ ಶ್ರೇಣಿಯೊಂದಿಗೆ ಸ್ಥಳೀಯ ಪಾಕವೈವಿಧ್ಯತೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ಸಿಕೆಬಿ-2 ಇಶಾದ ಸದ್ಗುರು ಸನ್ನಿಧಿಯಲ್ಲಿ ನಡೆದ ಸಂಕ್ರಾಂತಿ ಆಚರಣೆಯಲ್ಲಿ ಭಾಗವಹಿಸಿದ್ದ ಭಕ್ತರು
ಸಿಕೆಬಿ-3 ಇಶಾದ ಸದ್ಗುರು ಸನ್ನಿಧಿಯಲ್ಲಿ ಸದ್ಗುರು ಜಗ್ಗಿ ವಾಸುದೇವ್ ಅವರು ಯೋಗೇಶ್ವರ ಲಿಂಗಕ್ಕೆ ಕ್ಷೀರಭೀಷೇಕ ಮಾಡಿದರು