ಹರಿಹರ ತುಂಗಭದ್ರಾ ತಟದಲ್ಲಿ ಸಂಕ್ರಾಂತಿ ಸಂಭ್ರಮ

| Published : Jan 15 2025, 12:46 AM IST

ಹರಿಹರ ತುಂಗಭದ್ರಾ ತಟದಲ್ಲಿ ಸಂಕ್ರಾಂತಿ ಸಂಭ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಸುಗ್ಗಿಯ ಹಬ್ಬವೆಂದೇ ಆಚರಿಸಲ್ಪಡುವ ಸಂಕ್ರಾಂತಿ ಹಬ್ಬವು ಮಂಗಳವಾರ ಹರಿಹರದ ತುಂಗಭದ್ರಾ ನದಿ ದಡದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.

ಹರಿಹರ: ಸುಗ್ಗಿಯ ಹಬ್ಬವೆಂದೇ ಆಚರಿಸಲ್ಪಡುವ ಸಂಕ್ರಾಂತಿ ಹಬ್ಬವು ಮಂಗಳವಾರ ಹರಿಹರದ ತುಂಗಭದ್ರಾ ನದಿ ದಡದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.

ತಾಲೂಕಿನ ಜೀವನದಿ ತುಂಗಭದ್ರೆಯಲ್ಲಿ ಉತ್ತರಾಯಣ ಪುಣ್ಯಕಾಲದಲ್ಲಿ ಸ್ನಾನ ಮಾಡುವುದರಿಂದ ಒಳಿತಾಗುತ್ತದೆ ಎಂಬ ನಂಬಿಕೆಯಿಂದ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸಿ, ಹೊಳೆಯಲ್ಲಿ ಮಿಂದೆದ್ದರು.

ದಾವಣಗೆರೆ ಜಿಲ್ಲೆಯ ಸುತ್ತಮುತ್ತಲಿನ ಜನರು ಕುಟುಂಬ ಹಾಗೂ ಬಂಧು ಬಾಂಧವರ ಜೊತೆಗೆ ಆಗಮಿಸಿ ತುಂಗಭದ್ರೆಗೆ ಪೂಜಿಸಿದರು. ಕುಟುಂಬದೊಂದಿಗೆ ಕುಳಿತು ಭೋಜನ ಸವಿದು ನದಿ ದಡದಲ್ಲಿಯೇ ಬೀಡು ಬಿಟ್ಟು ಸಂಜೆ ಎಳ್ಳು ಬೆಲ್ಲವನ್ನು ಪರಸ್ಪರ ವಿನಿಮಯ ಮಾಡಿಕೊಂಡು ಸಂಕ್ರಾಂತಿ ಆಚರಣೆ ಮಾಡಿದರು.

ನದಿಸಾಲಿನ ಗ್ರಾಮಗಳಾದ ರಾಜನಹಳ್ಳಿ, ಬಿಳಸನೂರು, ನಂದಿಗಾವಿ, ಎಳೆಹೊಳೆ, ಧೂಳೆಹೊಳೆ, ಚಿಕ್ಕಬಿದರಿ, ಸಾರಥಿ, ನಂದಿಗುಡಿ, ಗುತ್ತೂರು, ಹರ್ಲಾಪುರ, ಹಲಸಬಾಳು, ಉಕ್ಕಡಗಾತ್ರಿ ಗ್ರಾಮದ ಬಳಿಯ ನದಿ ದಡಗಳ ಸಮೀಪದ ಗ್ರಾಮಸ್ಥರು ಆಗಮಿಸಿ, ಪುಣ್ಯಸ್ನಾನ, ಪೂಜೆ, ಭೋಜನ ಸಂಪ್ರದಾಯ ನೆರವೇರಿಸಿದರು. - - - -14ಎಚ್‍ಆರ್‍ಆರ್ 03: ಹರಿಹರದ ತುಂಗಭದ್ರಾ ದಡದಲ್ಲಿ ಮೃಷ್ಟಾನ್ನ ಭೋಜನ ಸವಿಯುತ್ತಿರುವ ಕುಟುಂಬ.

-14ಎಚ್‍ಆರ್‍ಆರ್03ಎ: ಹರಿಹರದ ತುಂಗಭದ್ರಾ ನದಿ ದಡದಲ್ಲಿ ಸಂಕ್ರಾಂತಿ ಪುಣ್ಯಸ್ನಾನಕ್ಕಾಗಿ ಬಂದಿರುವ ವಿವಿಧ ಊರುಗಳ ಜನತೆ.