ಪುಷ್ಪಗಿರಿ ಮಹಿಳಾ ಸಂಘದಿಂದ ಸಂಕ್ರಾಂತಿ ಸಂಭ್ರಮ

| Published : Jan 12 2025, 01:15 AM IST

ಸಾರಾಂಶ

ಶ್ರೀ ಕ್ಷೇತ್ರ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಯೋಜನೆ ಮಹಿಳಾ ಸ್ವ-ಸಹಾಯ ಸಂಘದಿಂದ ಡಾ.ಶಿವಕುಮಾರಸ್ವಾಮಿ ಸಮುದಾಯ ಭವನದಲ್ಲಿ ಸಡಗರ, ಸಂಭ್ರಮದಿಂದ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಯಿತು. ಹಾಸನ ಜಿಲ್ಲಾ ಯೋಜನಾಧಿಕಾರಿ ವಿನುತಾ ಧನಂಜಯ್, ಬೆಳೆದ ಫಸಲನ್ನು ಮನೆಗೆ ತರುವ ಸಂದರ್ಭದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸುತ್ತಾರೆ. ದಕ್ಷಿಣಾಲಯ ಮುಗಿದು ಉತ್ತರಾಯಣ ಆರಂಭವಾಗುವ ಪ್ರಮುಖವಾದ ಕಾಲಘಟ್ಟ. ಭೂಮಿಯ ಮೇಲಿನ ಪ್ರಾಣಿ, ಪಕ್ಷಿಗಳಿಗೆ ಹೊಸ ಹುರುಪು ನೀಡುತ್ತದೆ. ಪುಷ್ಪಗಿರಿ ಮಹಿಳಾ ಸ್ವಸಹಾಯ ಸಂಘದ ಮಹಿಳೆಯರು ಇಂದು ಎಳ್ಳು-ಬೆಲ್ಲ ನೀಡಿದ್ದಾರೆ ಎಂದರು.

ಕನ್ನಡಪ್ರಭ ವಾರ್ತೆ ಬೇಲೂರು

ಶ್ರೀ ಕ್ಷೇತ್ರ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಯೋಜನೆ ಮಹಿಳಾ ಸ್ವ-ಸಹಾಯ ಸಂಘದಿಂದ ಡಾ.ಶಿವಕುಮಾರಸ್ವಾಮಿ ಸಮುದಾಯ ಭವನದಲ್ಲಿ ಸಡಗರ, ಸಂಭ್ರಮದಿಂದ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಹಾಸನ ಜಿಲ್ಲಾ ಯೋಜನಾಧಿಕಾರಿ ವಿನುತಾ ಧನಂಜಯ್, ಬೆಳೆದ ಫಸಲನ್ನು ಮನೆಗೆ ತರುವ ಸಂದರ್ಭದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸುತ್ತಾರೆ. ದಕ್ಷಿಣಾಲಯ ಮುಗಿದು ಉತ್ತರಾಯಣ ಆರಂಭವಾಗುವ ಪ್ರಮುಖವಾದ ಕಾಲಘಟ್ಟ. ಭೂಮಿಯ ಮೇಲಿನ ಪ್ರಾಣಿ, ಪಕ್ಷಿಗಳಿಗೆ ಹೊಸ ಹುರುಪು ನೀಡುತ್ತದೆ. ಪುಷ್ಪಗಿರಿ ಮಹಿಳಾ ಸ್ವಸಹಾಯ ಸಂಘದ ಮಹಿಳೆಯರು ಇಂದು ಎಳ್ಳು-ಬೆಲ್ಲ ನೀಡಿದ್ದಾರೆ. ಜಿಲ್ಲೆಯಲ್ಲಿ ಸಾವಿರಾರು ಸ್ವಸಹಾಯ ಸಂಘವನ್ನು ಸ್ಥಾಪಿಸಿ, ಹಣಕಾಸು, ಸಾಲಸೌಲಭ್ಯ, ಕೌಶಲ್ಯತರಬೇತಿ, ಕಾರ್ಯಾಗಾರ ಸೇರಿದಂತೆ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಮುಂದಾಗಿದೆ. ರಾಷ್ಟ್ರೀಯ ಹಬ್ಬಗಳ ದಿನ ಮತ್ತು ಹಬ್ಬಹರಿದಿನಗಳನ್ನು ವಿಭಿನ್ನವಾಗಿ ಆಚರಿಸುತ್ತಾ ಬಂದಿದೆ ಎಂದರು.

ಪುಷ್ಪಗಿರಿ ಮಹಿಳಾ ಸ್ವಸಹಾಯ ಸಂಘದ ಪ್ರತಿನಿಧಿಗಳಾದ ವಿಜಯಲಕ್ಷ್ಮಿ, ದ್ರಾಕ್ಷಾಯಿಣಿ ಮಾತನಾಡಿ, ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಪರಿಸರ, ನೀರಾವರಿ ಇನ್ನಿತರ ಕ್ಷೇತ್ರದಲ್ಲಿ ಅದ್ವಿತೀಯ ಸೇವೆಯ ಮೂಲಕ ಪುಷ್ಪಗಿರಿ ಕೀರ್ತಿಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸಿದ ಹೆಗ್ಗಳಿಕೆ ಪುಷ್ಪಗಿರಿ ಜಗದ್ಗುರುಗಳಿಗೆ ಸಲ್ಲುತ್ತದೆ. ಸಮಾಜಕ್ಕೆ ಅಪಾರ ಕೊಡುಗೆ ನೀಡಿದ ಸ್ವಾಮೀಜಿಗಳಿಗೆ ಇತ್ತೀಚಿನ ದಿನದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಬಂದಿದ್ದು ಭಕ್ತರಿಗೆ ಅತ್ಯಂತ ಖುಷಿ ತಂದಿದೆ ಎಂದರು.

ಈ ಸಂದರ್ಭದಲ್ಲಿ ಸಂಘದ ಸದಸ್ಯರಾದ ಶಿಲ್ಪರಮೇಶ್, ವೀಣಾ, ಪಾರ್ವತಿ, ರೇಣುಕಾ, ಧನಲಕ್ಷ್ಮಿ, ಶಾರಾಧ, ಪವಿತ್ರ, ಗೀತಾ, ರಾಣಿ, ಗೀತಾ ಸೋಮಶೇಖರ್, ಪಾಟೀಲ್, ತೀರ್ಥಪ್ಪ, ಗೀತಾ ಪಾಟೀಲ್ ಮುಂತಾದವರು ಹಾಜರಿದ್ದರು.