ಕವಿತಾಳದಲ್ಲಿ ಬೋಗಿ ಬಾಗಿನ ಅರ್ಪಣೆ

| Published : Jan 15 2024, 01:45 AM IST

ಸಾರಾಂಶ

ಕವಿತಾಳ ಕವಿತಾಳದಲ್ಲಿ ಸಂಕ್ರಾಂತಿ ಹಬ್ಬದ ಭೋಗಿ ಅಂಗವಾಗಿ ಬ್ರಾಹ್ಮಣ ಸಮಾಜದ ಮುತ್ತೈದೆಯರಿಗೆ ಮನೆ ಮೆನೆಗೆ ಕರೆದು ಬಾಗಿನ ಅರ್ಪಿಸಲಾಯಿತು.

ಕವಿತಾಳ: ಸಂಕ್ರಾಂತಿ ಹಬ್ಬದ ಮುನ್ನಾದಿನವಾದ ರವಿವಾರ ಭೋಗಿ ಆಚರಿಸಲಾಯಿತು ಭೋಗಿ ಆಚರಣೆ ಅಂಗವಾಗಿ ಬ್ರಾಹ್ಮಣ ಸಮಾಜದ ಮುತ್ತೈದೆಯರಿಗೆ ಮನೆ ಮೆನೆಗೆ ಕರೆದು ಬಾಗಿನ ಅರ್ಪಿಸಲಾಯಿತು. ಅಕ್ಕಿ, ಬೆಲ್ಲ, ಬೇಳೆ, ಗೋಧಿಹಿಟ್ಟು, ಮತ್ತು ವಿವಿಧ ಆಹಾರ ಪಧಾರ್ಥಗಳು ಹಾಗೂ ವಿವಿಧ ತರಕಾರಿ ಹಣ್ಣು ಹಂಪಲು ತೆಂಗಿನಕಾಯಿಯನ್ನು ಹೊಸ ಮರದಲ್ಲಿ ಇಟ್ಟು ಮುತ್ತೈದೆಯರಿಗೆ ಕೊಟ್ಟು ಭೋಗಿ ಆಚರಿಸಲಾಯಿತು.

ಪ್ರತಿ ವರ್ಷದ ಸಂಪ್ರದಾಯದಂತೆ ಭೋಗಿ ಆಚರಿಸಲಾಗಿದೆ. ಮಕರ ಸಂಕ್ರಾಂತಿ ಸೋಮವಾರ ಆಚರಿಸಲಾಗುವುದು ಎಂದು ವರ್ಷಕ ಗೋವಿಂದಾಚಾರ್ ತಿಳಿಸಿದರು.ದರ ಏರಿಕೆ ನಡುವೆಯೂ ತರಕಾರಿ ಖರೀದಿ

ಕವಿತಾಳ: ಮಕರ ಸಂಕ್ರಾಂತಿ ಹಬ್ಬಕ್ಕಾಗಿ ದರ ಏರಿಕೆಯಾದರೂ ಸಾರ್ವಜನಿಕರು ತರಕಾರಿ ಖರೀದಿಸುತ್ತಿರುವುದು ಪಟ್ಟಣದಲ್ಲಿ ರವಿವಾರ ಕಂಡು ಬಂತು. ಸಂಕ್ರಾಂತಿ ಹಬ್ಬಕ್ಕೆ ವಿಶೇಷವಾಗಿ ತಯಾರಿಸುವ ಭರ್ತಕ್ಕಾಗಿ ಮೆಂತ್ಯೆ ಸೊಪ್ಪು, ಪಾಲಕ್, ಕೊತ್ತಂಬರಿ, ಪುದೀನಾ, ಮೂಲಂಗಿ, ಈರುಳ್ಳಿ, ಗಜ್ಜರಿ ಹುಣಚಿಕ್ ಸೇರಿದಂತೆ ವಿವಿಧ ಸೊಪ್ಪುಗಳು ಒಂದು ಡೂಡಿಗೆ ಹತ್ತು ರುಪಾಯಿಂತೆ ಮಾರಾಟ ಮಾಡಿದರು. ಕುಂಬಳಕಾಯಿ ತುಂಡುಗಳನ್ನು ಹತ್ತು ರುಪಾಯಿಗೆ ಒಂದರಂತೆ ಮಾರಾಟ ಮಾಡಲಾಯಿತು. ಸೊಪ್ಪು ಮತ್ತು ಕಂಬಳಕಾಯಿ ದರ ಏರಿಕೆಯಾದರೂ ಹಬ್ಬಕ್ಕಾಗಿ ಅನಿವಾರ್ಯವಾಗಿ ಗ್ರಾಹಕರು ಖರೀದಿಸಿದರು.

ಪ್ರತಿ ವಾರ ತರಕಾರಿ ಮಾರಾಟ ಮಾಡುತ್ತೇವೆ ಅಷ್ಟೊಂದು ಬೇಡಿಕೆ ಇರುವುದಿಲ್ಲ. ಈ ವಾರ ಹಬ್ಬದ ಅಂಗವಾಗಿ ತರಕಾರಿಗೆ ಬೇಡಿಕೆ ಹೆಚ್ಚಿದೆ ಒಳ್ಳೆಯ ವ್ಯಾಪಾರವಾಗಿದೆ ಎಂದು ಹುಸೇನಪುರ ಗ್ರಾಮದ ತರಕಾರಿ ವ್ಯಾಪಾರ ಮಾಡುವ ಮಹಿಳೆ ಲಕ್ಷ್ಮೀ ಹೇಳಿದರು.