ಸಾರಾಂಶ
ಕುಸುರೆಳ್ಳು, ಬೆಲ್ಲ, ಕೊಬ್ಬರಿ, ಶೇಂಗಾಬೀಜ, ಕಬ್ಬಿನ ಜಲ್ಲೆ ಭರ್ಜರಿ ಮಾರಾಟ
ಕನ್ನಡಪ್ರಭ ವಾರ್ತೆ ದಾವಣಗೆರೆವರ್ಷದ ಆರಂಭದ ಸಂಕ್ರಾಂತಿ ಹಬ್ಬ, ಜನರು ತಮ್ಮ ಕುಟುಂಬದವರು, ಸ್ನೇಹಿತರೊಂದಿಗೆ ಹೊರ ಸಂಚಾರಕ್ಕೆಂದು ಸಮೀಪದ ಪ್ರೇಕ್ಷಣೀಯ ಸ್ಥಳಗಳು, ಪುಣ್ಯ ಕ್ಷೇತ್ರಗಳಿಗೆ ರೊಟ್ಟಿ, ಬುತ್ತಿ ಕಟ್ಟಿಕೊಂಡು ಹೋಗಿ ಊಟವನ್ನು ಸವಿಯುತ್ತಾರೆ.
ಸಂಕ್ರಾಂತಿ ಹಬ್ಬಕ್ಕಾಗಿ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿಯೇ ಸಾಗಿತ್ತು. ಇಲ್ಲಿನ ಗಡಿಯಾರ ಕಂಬ, ಕಾಯಿಪೇಟೆ, ಕೆ.ಆರ್.ಮಾರುಕಟ್ಟೆ, ಹಳೇ ಬಸ್ ನಿಲ್ದಾಣದ ಬಳಿ, ಜಯದೇವ ಸರ್ಕಲ್, ರಾಂ ಅಂಡ್ ಕೋ ಸರ್ಕಲ್, ಎಂಸಿಸಿ ಎ ಮತ್ತು ಬಿ ಬ್ಲಾಕ್, ಸರಸ್ವತಿ ನಗರ, ನಿಟ್ಟುವಳ್ಳಿ, ದೇವರಾಜ ಅರಸ್ ಬಡಾವಣೆ, ಅಶೋಕ ರಸ್ತೆ ಸೇರಿ ವಿವಿಧೆಡೆ ಪೂಜೆಗೆ ಹೂ, ಹಣ್ಣು, ಸಂಕ್ರಾಂತಿಗೆ ಮುಖ್ಯವಾಗಿ ಬೇಕಾಗಿರುವ ಕುಸುರೆಳ್ಳು, ಬೆಲ್ಲ, ಕೊಬ್ಬರಿ, ಶೇಂಗಾಬೀಜ, ಕಡ್ಲಿ, ಸಕ್ಕರೆ ಅಚ್ಚುಗಳು, ಕಬ್ಬಿನ ಜಲ್ಲೆ ಖರೀದಿ ಜೋರಾಗಿ ನಡೆಯುತ್ತಿತ್ತು.ಮಾರುಕಟ್ಟೆ ಜನಸಂದಣಿ:
ಮಾರುಕಟ್ಟೆಯಲ್ಲಿ ಕುಸುರೆಳ್ಳು ಕೆ.ಜಿ.ಗೆ ರು160 ಎಳ್ಳು, ಬೆಲ್ಲ, ಕೊಬ್ಬರಿ ಮಿಕ್ಸ್ ಕೆ.ಜಿ.ಗೆ 240, ಸಕ್ಕರೆ ಅಚ್ಚು ಕೆ.ಜಿ.ಗೆ 200 ಇತ್ತು. ಕಬ್ಬು ಒಂದ ಜಲ್ಲಿಗೆ 100-120 ರು.ಗಳಿಗೆ ಮಾರಾಟ ಮಾಡುತ್ತಿದ್ದರು. ಈ ಬಾರಿ ಸಂಕ್ರಾಂತಿ ಹಬ್ಬದ ಹಿಂದಿನ ದಿನ ಭಾನುವಾರ ಆದ್ದರಿಂದ ಮಾರುಕಟ್ಟೆ ಜನಸಂದಣಿಯಿಂದ ಕೂಡಿತ್ತು. ಹಬ್ಬದ ಹಿನ್ನೆಲೆಯಲ್ಲಿ ನಗರ ದೇವತೆ ದುರ್ಗಾಂಬಿಕಾ ದೇವಿ ಸೇರಿ ಬಹುತೇಕ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗೆ ಸಿದ್ಧತೆಗಳು ಜೋರಾಗಿ ನಡೆದಿದ್ದವು.ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಜನರು ವಿಧ ವಿಧವಾದ ರೊಟ್ಟಿ, ಪಲ್ಯ, ಸವಿ ಸವಿಯಾದ ಊಟ ಕಟ್ಟಿಕೊಂಡು ಇಲ್ಲಿನ ಸಮೀಪದ ಹರಿಹರದ ಹೊಳೆ, ಚನ್ನಗಿರಿ ಸಂತೆ ಹೊಂಡ, ಕೊಂಡಜ್ಜಿ ಕೆರೆ, ಆನಗೋಡು ಪಾರ್ಕ್, ಚಿತ್ರದುರ್ಗದ ಕೋಟೆ, ಹಾಗೂ ನಗರದ ಹೊರವಲಯದಲ್ಲಿರುವ ಟಿ.ವಿ.ಸ್ಟೇಷನ್ ಕೆರೆ, ಬಾತಿ ಕೆರೆ, ವಿಶ್ವೇಶ್ವರಯ್ಯ ಪಾರ್ಕ್, ಕಾಸಲ್ ಶ್ರೀನಿವಾಸ ಶೆಟ್ಟಿ ಪಾರ್ಕ್, ಗಂಗೂಬಾಯಿ ಹಾನಗಲ್ ಉದ್ಯಾನವನ ಸೇರಿ ವಿವಿಧ ಪಾರ್ಕ್ಗಳಿಗೆ ತೆರಳಿ ಊಟವನ್ನು ಸವಿದು, ಅಲ್ಲಿ ತಮ್ಮ ಕುಟುಂಬದವರು, ಮಕ್ಕಳು, ಸ್ನೇಹಿತರೊಂದಿಗೆ ಸೇರಿ ಆಟ ಆಡಿ ಸಂತೋಷ ಪಡುತ್ತಾರೆ.
. .. ..ಎಲ್ಲಾ ದರಗಳು ಗಗನಕ್ಕೇರಿವೆ. ಸಂಕ್ರಾಂತಿ ಕುಸುರೆಳ್ಳು, ಬೆಲ್ಲ, ಕೊಬ್ಬರಿ, ಇತರೆ ವ್ಯಾಪಾರ ಚೆನ್ನಾಗಿದೆ. ಹಿಂದೆಲ್ಲಾ 8 ರಿಂದ 10 ದಿನ ಕಾಲ ಹಬ್ಬದ ಆಚರಣೆ ಸಿದ್ದತೆಯಲ್ಲಿ ತೊಡಗಿಕೊಳ್ಳುತ್ತಿದ್ದರು. ಈಗೆಲ್ಲಾ ಮೊಬೈಲ್‌ಗಳಲ್ಲಿ ಶುಭಾಶಯಗಳು ಬಂದ ನಂತರ ಹಬ್ಬಗಳ ನೆನಪಿಸಿಕೊಳ್ಳುವಂತಾಗಿದೆ.
ಬಿಎಸ್.ರಾಘವೇಂದ್ರ ಶೆಟ್ಟಿ, ಅಂಗಡಿ ಮಾಲೀಕ, ಗಡಿಯಾರ ಕಂಬ ಸಮೀಪ. .. ..